ಹಾಲು ಉತ್ಪಾದಕರ ಸಂಘಕ್ಕೆ 9.31 ಲಕ್ಷ ಲಾಭ
ಕ.ಪ್ರ.ವಾರ್ತೆ ಸಾಲಿಗ್ರಾಮ ಸೆ. 23
ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರ ಸಂಘವು 2012-13ನೇ ಸಾಲಿನಲ್ಲಿ 9.31 ಲಕ್ಷ ನಿವ್ವಳ ಲಾಭ ಪಡೆದಿದೆ ಎಂದು ಸಂಘದ ಅಧ್ಯಕ್ಷ ಎಸ್.ಕೆ. ಮಧುಚಂದ್ರ ಹೇಳಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ನಡೆದ 2012-13ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಸಾಲಿನಲ್ಲಿ ಸಂಘದ ಸದಸ್ಯರು ಸಹಕಾರ ಸಂಘದ ವತಿಯಿಂದ 1.86 ಕೋಟಿ ಹಾಲನ್ನು ಖರೀದಿ ಮಾಡಿದ್ದು, ಅದರಲ್ಲಿ 2.35 ಕೋಟಿಗೆ ಹಾಲನ್ನು ಮಾರಾಟ ಮಾಡಲಾಗಿದೆ. ಸಂಘಕ್ಕೆ ಸದಸ್ಯರು ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ, ಸಂಘದ ಬೆಳವಣಿಗೆಗೆ ಕಾರಣರಾಗಬೇಕೆಂದು ಮನವಿ ಮಾಡಿದರು.
ಸಂಘದ ಸದಸ್ಯರು ಚಾಪ್ ಕಟರ್ ಮಿಷನ್, ಹಾಲು ಕರೆಯುವ ಯಂತ್ರಗಳನ್ನು ಕೊಡಿಸುವುದರ ಜೊತೆಗೆ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಒಂದು ಲಕ್ಷಕ್ಕೂ ಅಧಿಕ ಮೊತ್ತದ ಹಾಲನ್ನು ಸಂಘಕ್ಕೆ ಸರಬರಾಜು ಮಾಡಿದ ಸುಮಾರು 29 ಮಂದಿ ಹಾಲು ಉತ್ಪಾದಕರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಇದರಲ್ಲಿ 3.60 ಲಕ್ಷ ಹಾಲನ್ನು ಹಾಕಿ ಪ್ರಥಮ ಸ್ಥಾನವನ್ನು ಎಸ್.ಎಲ್. ಅಶೋಕ್, ದಡದಹಳ್ಳಿಯ ಲೋಹಿತ್ 2.22 ಲಕ್ಷ ಹಾಲನ್ನು ಹಾಕಿ ದ್ವಿತೀಯ ಹಾಗೂ ಸೀನೇಗೌಡ 1.89 ಲಕ್ಷ ಹಾಲನ್ನು ಸಂಘಕ್ಕೆ ಸರಬರಾಜು ಮಾಡಿ ತೃತೀಯ ಸ್ಥಾನ ಪಡೆದಿದ್ದಾರೆ.
ಸಭೆಯಲ್ಲಿ ನಿವೃತ್ತ ಉಪನ್ಯಾಸಕ ಎಸ್.ಆರ್. ರಾಮೇಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಸ್.ಎಸ್. ರಾಮಕೃಷ್ಣೇಗೌಡ, ಮಾಜಿ ಅಧ್ಯಕ್ಷ ಎಸ್.ಎಂ. ಸೋಮಣ್ಣ, ಎಪಿಎಂಸಿ ನಿರ್ದೇಶಕ ಕುಪ್ಪಳ್ಳಿ ಸೋಮಶೇಖರ್, ತಾಪಂ ಸದಸ್ಯೆ ಜಾನಕಮ್ಮ, ಮೈಮುಲ್ ಉಪವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ, ಸಂಘದ ನಿರ್ದೇಶಕರಾದ ಎಸ್.ಕೆ. ವೆಂಕಟೇಶ್, ಎಸ್.ಕೆ. ರಮೇಶ್, ಎಸ್.ಎ.ಮಹೇಶ್, ಎಸ್.ಆರ್. ದಿನೇಶ್, ಎಸ್.ಎನ್. ರಂಗೇಗೌಡ, ರಂಗಸ್ವಾಮಿ, ರಘುರಾಜ್ ನಾಯಕ, ಸುಮಿತ್ರಮ್ಮ ಇದ್ದರು.