ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅತ್ಯಾಚಾರ ಮಾಡಿದ್ದ ವೃದ್ಧನ ಸೆರೆ

Srinivasa Murthy VN
Updated On : 25 Sept 2013, 12:00 pm

ಕ.ಪ್ರ.ವಾರ್ತೆ ಹುಣಸೂರು ಸೆ. 24
ಸಾಕು ಮಗಳ ಮೇಲೆ ಅತ್ಯಾಚಾರವೆಸಗಿ, ಆಕೆಗೆ ಜನಿಸಿದ ನವಜಾತ ಶಿಶುವಿನ ಸಮೇತ ನಾಪತ್ತೆಯಾಗಿದ್ದ 65 ವರ್ಷದ ವೃದ್ಧ ಹಾಗೂ ಆತನ ಪತ್ನಿಯನ್ನು ಪೊಲೀಸರು ಬಂಧಿಸಿ, ನವಜಾತ ಶಿಶುವನ್ನು ರಕ್ಷಿಸಿದ್ದಾರೆ. ಇಲ್ಲಿನ ಮೂರೂರಮ್ಮ ಬಡಾವಣೆಯ ವೃದ್ಧ ಆರೋಪಿ ಮಣಿ ಹಾಗೂ ಆತನ ಪತ್ನಿ ಸರೋಜಮ್ಮ ಬಂಧಿತರು.  
ಹಲವಾರು ವರ್ಷಗಳು ಸಾಕಿದ ತಂದೆಯೆ ಸಾಕು ಮಗಳ ಮೇಲೆ ಅತ್ಯಾಚಾರವೆಸಗಿದ್ದ. ಆ ಯುವತಿಗೆ ಜನಿಸಿದ ಹಸುಗೂಸಿನೊಂದಿಗೆ ಪರಾರಿಯಾಗಿದ್ದ ಆರೋಪಿಗಳು, ಕುಶಾಲನಗರ ಬಳಿಯ ತಮ್ಮ ಸಂಬಂಧಿಕರ ಮನೆಯಲ್ಲಿದ್ದ ವೇಳೆ ಪೊಲೀಸರು ರಾತ್ರಿಯೇ ಬಂಧಿಸಿದರು.
ಮಗುವನ್ನು ರಕ್ಷಿಸಿ ಆಸ್ಪತ್ರೆಯಲ್ಲಿರುವ ತಾಯಿಗೆ ಒಪ್ಪಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಗಜೇಂದ್ರಪ್ರಸಾದ್  ತಿಳಿಸಿದ್ದಾರೆ.

ಗಾವಡಗೆರೆ ನೆಟ್‌ಬಾಲ್ ತಂಡ ರಾಜ್ಯಮಟ್ಟಕ್ಕೆ
ಕ.ಪ್ರ.ವಾರ್ತೆ ಹುಣಸೂರು ಸೆ. 24
ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ನೆಟ್‌ಬಾಲ್ ಸ್ಪರ್ಧೆಯಲ್ಲಿ ಗಾವಡಗೆರೆಯ ಬಾಲಕರು ಪಿರಿಯಾಪಟ್ಟಣ ತಾಲೂಕಿನ ಬೆಣಗಲ್ ಸರ್ಕಾರಿ ಪ್ರೌಢಶಾಲಾ ತಂಡವನ್ನು ಸೋಲಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಅವಿಲಾ ಕಾನ್ವೆಂಟ್ ತಂಡವನ್ನು ಸೋಲಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲೂಕಿನ ಗಾವಡಗೆರೆ ಪಿಯು ಕಾಲೇಜಿನ ಸರ್ಕಾರಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಿಭಾಗವು ನೆಟ್‌ಬಾಲ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲೆ ಮತ್ತು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆಂದು ಗ್ರಾಮಸ್ಥರು ಮತ್ತು ಅಧ್ಯಾಪಕರ ವೃಂದ ಅಭಿನಂದಿಸಿದೆ.
ಕಾಲೇಜಿನ ಪ್ರಾಂಶುಪಾಲ ಬಿ.ಸಿ. ಚಿನ್ನೇಗೌಡರ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಮಟ್ಟದ ನೆಟ್‌ಬಾಲ್ ಪ್ರತಿನಿಧಿ ದ್ವಿತೀಯ ಪಿಯು ವಿದ್ಯಾರ್ಥಿ ಚೇತನ್ ಹಾಗೂ ತರಬೇತುದಾರ ವಿರೂಪಾಕ್ಷ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ನೆಟ್‌ಬಾಲ್ ಸಂಸ್ಥೆ ಖಜಾಂಚಿ ಸೆಲ್ವರಾಜ್, ವಿಜಯಕುಮಾರ್, ಗ್ರಾಪಂ ಸದಸ್ಯ ಪ್ರಮೋದ್ ಘಾಟ್ಕೆ, ದೈಹಿಕ ಶಿಕ್ಷಕ ಲೋಕೇಶ್, ಎಲ್.ಎಸ್.ಪುಟ್ಟಣ್ಣಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement