ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅ. 10ರಿಂದ ದಸರಾ ಕವಿ ಸಮ್ಮೇಳನ

Srinivasa Murthy VN
Updated On : 26 Sept 2013, 12:23 pm

ಮೈಸೂರು: ದಸರಾ ಮಹೋತ್ಸವದ ಪ್ರಯಕ್ತ ಅ. 10 ರಿಂದ 12 ರವರೆಗೆ ಸಂಪ್ರದಾಯದಂತೆ ನಡೆಸುತ್ತಿದ್ದ ದಸರಾ ಕವಿಗೋಷ್ಠಿಯನ್ನು ಈ ಬಾರಿ ದಸರಾ ಕವಿ ಸಮ್ಮೇಳನ ಎಂಬ ಹೆಸರಿನೊಂದಿಗೆ ಆಚರಿಸಲು ಸಿದ್ಧತೆ ನಡೆಸಲಾಗಿದ್ದು, ಅ.10 ಮತ್ತು 11 ರಂದು ಜೆಎಸ್ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಹಾಗೂ ಅ. 12 ರಂದು ನಗರದ ಜಗನ್ಮೋಹನ ಅರಮನೆಯಲ್ಲಿ ನಡೆಯಲಿದೆ.
 ಅ. 12 ರಂದು ಜಗನ್ಮೋಹನ ಅ.10ರ ಬೆಳಗ್ಗೆ 10.30ಕ್ಕೆ ದಸರಾ ಕವಿ ಸಮ್ಮೇಳನವನ್ನು ನಾಡೋಜ ಪ್ರೊ. ಚಂದ್ರಶೇಖರ ಪಾಟೀಲ ಉದ್ಘಾಟಿಸಲಿದ್ದು, ಶಾಸಕ ವಾಸು ಅಧ್ಯಕ್ಷತೆ ವಹಿಸುವರು. ಕಲಾವಿದ ಕೆ.ಟಿ. ಶಿವಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಜೆಎಸ್ಎಸ್ ಮಹಾ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಎನ್. ಬೆಟ್ ಕೆರೂರ್ ಭಾಗವಹಿಸುವರು ಎಂದು ದಸರಾ ಕವಿಗೋಷ್ಠಿ ಉಪ ಸಮಿತಿ ಅಧ್ಯಕ್ಷ ಪ್ರೊ. ಕೆ.ಎಸ್. ಭಗವಾನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಿಳಾ ಕವಿಗೋಷ್ಠಿ: ಮಧ್ಯಾಹ್ನ 12ಕ್ಕೆ ಮಹಿಳಾ ಕವಿಗೋಷ್ಠಿ ನಡೆಯಲಿದ್ದು, ಕವಯತ್ರಿ ಮಲ್ಲಿಕಾ ಘಂಟಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಅತಿಥಿಯಾಗಿ ಭಾಗವಹಿಸುವರು. ಕವಯತ್ರಿಗಳಾದ ಸುಕನ್ಯಾ ಮಾರುತಿ, ಎಂ.ಎಸ್. ವೇದಾ, ವೀಣಾ ಬನ್ನಂಜೆ, ಕೆ. ನೀಲಾ, ಅನಸೂಯ ಕಾಂಬ್ಳೆ, ಸುಶೀಲಾ ಶಿರೂರು, ರತ್ನ ಕಾಳೇಗೌಡ, ಡಾ. ಸುನಂದಮ್ಮ, ಗೀತಾ ಮಹದೇವಪ್ರಸಾದ್, ಮಂಗಲ ವಿ. ಕಪ್ಪರೆ, ಮನುಶ್ರೀ ಕುಮಾರ್, ಡಾ.ವತ್ಸಲಾ ಮೋಹನ್, ಮೈಶ್ರೀ ಭಾರತಿ, ಡಾ. ಚಂದ್ರಕಲಾ ಬಿದರಿ, ವಸಂತಶೆಟ್ಟಿ, ಶಶಿಕಲಾ, ಡಾ.ಟಿ. ಪದ್ಮಾ, ಸಿ.ಇ. ತ್ರಿವೇಣಿ, ಚೇತನಾ ತೀರ್ಥಹಳ್ಳಿ, ಅಕ್ಷತಾ ಕೃಷ್ಣಮೂರ್ತಿ, ರಜಿಯಾ ಬಳಗಟ್ಟಿ, ಸ್ಮಿತಾ ಮಾಕಳ್ಳಿ, ಲಾವಣ್ಯ ಪ್ರಭಾ ಕವನ ವಾಚಿಸುವರು.  
ಯುವ ಕವಿಗೋಷ್ಠಿ: ಅ. 11ರ ಬೆಳಗ್ಗೆ 10.30ಕ್ಕೆ ಯುವ ಕವಿಗೋಷ್ಠಿ ನಡೆಯಲಿದ್ದು, ಕವಿ ಲಕ್ಷ್ಮೀಪತಿ ಕೋಲಾರ ಅಧ್ಯಕ್ಷತೆ ವಹಿಸುವರು. ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ನಂತರ ಚಾಂದ್ ಪಾಷಾ, ವೀರಣ್ಣ ಮಡಿವಾಳ, ದ್ವಾರನಕುಂಟೆ ಪಾತಣ್ಣ, ಎನ್. ರಾಜೇಶ್ವರಿ, ಪ್ರಕಾಶ್ ಜಿ.ಎಸ್. ಹಳ್ಳಿ, ಮಂಜು ಕೋಡಿಉಗನೆ, ಮಹಾದೇವನಾಯಕ್, ಡಾ. ಶಾಂತನಾಯಕ ಶಿರಗಾನಹಳ್ಳಿ, ವಿ.ಎಂ. ಮಂಜುನಾಥ್, ಗುಬ್ಬಿಗೂಡು ರಮೇಶ್, ಕೆ. ಭೈರಪ್ಪ, ಎಸ್. ಚನ್ನಪ್ಪ, ಕಾವ್ಯ ಕಡಮೆ, ವಿ.ಆರ್. ಕಾರ್ಪೆಂಟರ್, ಟಿ. ನಳಿನಾ, ಶಿವಕುಮಾರ್ ಕಂಪ್ಲಿ, ಅಮೃತ್ತಿ, ಅಮೃತಿ ರಾಜೇಶ್, ಸ್ಮಿತಾ ಅಮೃತರಾಜ್, ಕುಮಾರ ಕವಿ, ನಾರಾಯಣ ತಿರುಮಲಾಪುರ, ಕೊತ್ತತ್ತಿ ಎಂ. ರಾಜು, ಡಾ. ವೆಂಕಟಗಿರಿ ದಳವಾಯಿ, ಎಚ್.ಪಿ. ಪೂರ್ಣಿಮಾ, ಶರತ್ ಚಕ್ರವರ್ತಿ, ಗೂ.ಚಿ. ರಮೇಶ್ ಕವನ ವಾಚಿಸುವರು.
ಗದ್ಯ ವೈಭವ: ಮಧ್ಯಾಹ್ನ 2.30ಕ್ಕೆ ಗದ್ಯ ವೈಭವ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಅ.ರಾ. ಮಿತ್ರ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಡಾ. ಕಮಲ ಹಂಪನಾ ಅತಿಥಿಯಾಗಿ ಭಾಗವಹಿಸುವರು. ವಡ್ಡಾರಾಧನೆ ಬಗ್ಗೆ ಡಾ. ನೇತ್ರಾವತಿ, ಪಂಪನ ಬಗ್ಗೆ ಶಿವಾಜಿರಾವ್ ಜೋಯಿಸ್, ಹರಿಹರನ ಬಗ್ಗೆ ಡಾ.ಪಿ.ವಿ. ನಾರಾಯಣ, ಷಡಕ್ಷರಿ ಬಗ್ಗೆ ಡಾ.ಎಸ್. ರಾಜಪ್ಪ ದಳವಾಯಿ, ಮುದ್ದಣ್ಣನ ಬಗ್ಗೆ ರಂಗತಜ್ಞ ಪ್ರೊ.ಎಚ್.ಎಸ್. ಉಮೇಶ್, ಚಕೋರಿ ಬಗ್ಗೆ ಪ್ರೊ. ವರದರಾಜು ವಿಚಾರ ಮಂಡಿಸುವರು. ಕನ್ನಡ ಸಾಹಿತ್ಯದಿಂದಲ್ಲಿ ಚಂಪೂ ಪ್ರಕಾರಕ್ಕೆ ಹೆಚ್ಚಿನ ಮಹತ್ವವಿತ್ತು. ಗದ್ಯವೂ, ಪದ್ಯವೂ ಆದ ಪ್ರಕಾರವೇ ಚಂಪೂ ಪ್ರಕಾರ. ಪಂಪನಿಂದ ಹಿಡಿದು ಡಾ. ಚಂದ್ರಶೇಖರ ಕಂಬಾರ ಅವರು ರಚಿಸಿರುವ ಸಾಹಿತ್ಯ ಪ್ರಕಾರದ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಪ್ರಧಾನ ಕವಿಗೋಷ್ಠಿ: ಅ. 12ರ ಬೆಳಗ್ಗೆ 10.30ಕ್ಕೆ ನಗರದ ಜಗನ್ಮೋಹನ ಅರಮನೆಯಲ್ಲಿ ಪ್ರಧಾನ ಕವಿಗೋಷ್ಠಿಯಲ್ಲಿ ನಡೆಯಲಿದ್ದು, ಸಾಹಿತಿ ಚನ್ನಣ್ಣ ವಾಲೀಕಾರ ಅಧ್ಯಕ್ಷತೆ ವಹಿಸುವರು. ಸಾಹಿತಿ ಬಿ.ಎ. ಸನದಿ ಅತಿಥಿಯಾಗಿ ಭಾಗವಹಿಸುವರು. ಜಿನದತ್ತ ದೇಸಾಯಿ, ಚಂದ್ರಶೇಖರ ತಾಳ್ಯ, ಕಾ.ತ. ಚಿಕ್ಕಣ್ಣ, ಲೋಕೇಶ್ ಅಗಸನಕಟ್ಟೆ, ಬಿ.ಎಂ. ಹನೀಫ್, ಡಾ. ಸುಚೇತನ ಸ್ವರೂಪ್, ಡಾ. ನಲ್ಲೂರು ಪ್ರಸಾದ್, ಡಾ.ನಾ. ದಾಮೋದರ ಶೆಟ್ಟಿ, ಕಮಲ ಹೆಮ್ಮಿಗೆ, ಡಾ. ಗುಂಚಣ್ಣ ಕಲಬುರ್ಗಿ, ಜಂಬಣ್ಣ ಅಮರಚಿಂತ, ಬೇಲೂರು ರಘುನಂದನ, ಮಾಲತಿ ಪಟ್ಟಣಶೆಟ್ಟಿ, ವಸಂತ ಬನ್ನಾಡಿ, ಕೆ. ಸೇತೂರಾಂ, ವಿ.ಗ. ನಾಯಕ್, ಹಾಲ್ಕುರಿಕೆ ಶಿವಶಂಕರ್, ನಾಗತಿಹಳ್ಳಿ ರಮೇಶ್, ಡಾ.ಎಸ್. ಶಿವರಾಜಪ್ಪ, ಕೊಟ್ರೇಶ್ ಉಪ್ಪಾರ, ಕೆ. ಕರಿಸ್ವಾಮಿ, ಉಗಮ ಶ್ರೀನಿವಾಸ್, ದೊಚಿಗೌಡ, ರಾಜಶೇಖರ ಮಠಪತಿ, ಗಂಗಾಧರ ಕೊಡ್ಲಿಯವರ್, ಡಿ. ಶಾರದಮ್ಮ ಕಂಪಾಲಿ, ಭೂಹಳ್ಳಿ ಪುಟ್ಟಸ್ವಾಮಿ, ಹಾಗೆ ಸಂಸ್ಕೃತದಲ್ಲಿ ಶ್ರೀನಿವಾಸ ವರಖೇಡಿ, ತುಳುವಿನಲ್ಲಿ ವಸಂತಕುಮಾರ್ ಪೆರ್ಲ, ಬ್ಯಾರಿಯಲ್ಲಿ ಹಂಸ ಮಲಾರ್, ಕೊಡವದಲ್ಲಿ ಕಸ್ತೂರಿ ಗೋವಿಂದಮ್ಮಯ್ಯ, ಕೊಂಕಣಿಯಲ್ಲಿ ಆಲ್ವಿನ್ ಡಾಂಟಿ ಕವನ ವಾಚಿಸುವರು.
ಕವಿಗೋಷ್ಠಿ ಉಪಸಮಿತಿ ಉಪಾಧ್ಯಜ್ಞೆ ಮಾನಸ, ಪ್ರೊ.ಸಿ. ನಾಗಣ್ಣ, ಕಾರ್ಯದರ್ಶಿ ಟಿ. ಜವರೇಗೌಡ ಇದ್ದರು.         

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement