ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಹಾಜನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Srinivasa Murthy VN
Updated On : 26 Sept 2013, 12:24 pm

ಮೈಸೂರು: ಧಾರವಾಡದ ಕರ್ನಾಟಕ ಕಲಾ ಕಾಲೇಜು ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರವಾಸೋದ್ಯಮ ಮೇಳದಲ್ಲಿ ಮೈಸೂರಿನ ಮಹಾಜನ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿ ಪ್ರಶಸ್ತಿ ಗಳಿಸಿದ್ದಾರೆ.
ಎರಡು ದಿನಗಳ ಕಾಲ ನಡೆದ ಮೇಳದಲ್ಲಿ ಮಹಾಜನ ಸಂಸ್ಥೆಯ 14 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟಾರೆ ಕಾರ್ಯಕ್ರಮದಲ್ಲಿ ವಾಣೀಶ್ ಪ್ರಥಮ, ಪ್ರವಾಸೋದ್ಯಮ ರಸಪ್ರಶ್ನೆ ಸ್ಪರ್ಧೆಯಲ್ಲಿ ಶರತ್, ಜೀತ್ ನಾಚಪ್ಪ ದ್ವಿತೀಯ, ಮಾಸ್ಟರ್ ಚೀಫ್ ಸ್ಪರ್ಧೆಯಲ್ಲಿ ಡಿ.ಕೆ. ಶಿವಕುಮಾರ್ ದ್ವಿತೀಯ, ಉಳಿದಂತೆ ಸುಜನ್, ಶೈನಾ, ಅತಿರಾ ಪಿಂಟು, ನೌಶೀದ್, ಐಶ್ವರ್ಯ, ನಾಸಿರ್, ಲೈಡಿಯಾ ಜಾನಪದ ನೃತ್ಯ ಸ್ಪರ್ಧೆ ಬಹುಮಾನ ಗಳಿಸಿದ್ದಾರೆ. ವಿಜೇತರನ್ನು ಮಹಾಜನ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಪ್ರೊ. ಕೆ.ಎಸ್. ನಾಗಪತಿ ಅಭಿನಂದಿಸಿದರು.

ಕಾರ್ಮಿಕರ ನೋಂದಣಿ ಶಿಬಿರ
ಮೈಸೂರು: ಕಾರ್ಮಿಕ ಇಲಾಖೆಯು ಗುಂಗ್ರಾಲ್ ಗ್ರಾಪಂ ಸಹಯೋಗದೊಂದಿಗೆ ಜಿಐಜೆಡ್ ಯೋಜನೆಯ ಕಾರ್ಮಿಕ ಸೇವಾ ಸೌಲಭ್ಯ ಕೇಂದ್ರದ ಮೂಲಕ ಹೊಸಕೋಟೆ ಗ್ರಾಮದಲ್ಲಿ ಕಾರ್ಮಿಕರ ನೋಂದಣಿ ಶಿಬಿರ ಆಯೋಜಿಸಿತ್ತು.
ಇಲವಾಲ ಹೋಬಳಿಯ ಗುಂಗ್ರಾಲ್ ಛತ್ರ ಗ್ರಾಪಂ ವ್ಯಾಪ್ತಿಗೆ ಬರುವ ರಾಮೇನಹಳ್ಳಿ, ದಡದಕಲ್ಲಹಳ್ಳಿ, ಸಾಗರಕಟ್ಟೆ, ಗುಂಗ್ರಾಲ್ ಛತ್ರ, ಹೊಸಕೋಟೆ ಗ್ರಾಮಗಳ ಕಟ್ಟಡ ಕಾರ್ಮಿಕರು, ಗಾರೆ ಕೆಲಸದವರು, ಗಾರೆ ಸಹಾಯಕರು, ಬಾರ್ಬೆಂಡಿಂಗ್, ಪ್ಲಂಬಿಂಗ್, ಪೇಂಟರ್, ಕಾರ್ಪೆಂಟರ್ಗಳು ಶಿಬಿರದಲ್ಲಿ ಪಾಲ್ಗೊಂಡು ಹೆಸರು ನೋಂದಾಯಿಸಿಕೊಂಡರು. ನಂತರ 404 ಮಂದಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ್ ಅಪ್ಪಯ್ಯ ಸಿಂದಿಹಟ್ಟಿ, ಹಿರಿಯ ಕಾರ್ಮಿಕ ನಿರೀಕ್ಷಕ ಚೇತನ್, ಗ್ರಾಪಂ ಅಧ್ಯಕ್ಷ ಯೋಗಮೂರ್ತಿ, ಉಪಾಧ್ಯಕ್ಷ ಮಲ್ಲೇಶ ನಾಯಕ, ಸದಸ್ಯರಾದ ರಘು, ಮಹೇಶ್, ಜಿಲ್ಲಾ ಯೋಜನ ಸಂಯೋಜಕರಾದ ಎಲ್.ಡಿ. ಹರೀಶ್, ತಾಲೂಕು ಸಂಯೋಜಕ ಎನ್. ಸದಾನಂದ, ಪೃಥ್ವಿರಾಜ್, ಎಚ್.ಸಿ. ರಾಜೇಶ್, ಡಿ.ಪಿ. ಶ್ರೀನಿವಾಸ, ಪ್ರಸನ್ನಕುಮಾರ್, ಎಲ್. ಚಂದ್ರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement