ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುತ್ತೂರು ಎನ್ಸಿಸಿ ಉತ್ತಮ ತಂಡ

Srinivasa Murthy VN
Updated On : 26 Sept 2013, 12:26 pm

ಸುತ್ತೂರು: ನಂಜನಗೂಡು ತಾಲೂಕು ಸುತ್ತೂರಿನ ಜೆಎಸ್ಎಸ್ ಪ್ರೌಢಶಾಲೆಯ ಎನ್ಸಿಸಿ ವಾಯುದಳದ ಕಿರಿಯರ ವಿಭಾಗಕ್ಕೆ ಅತ್ಯುತ್ತಮ ಎನ್ಸಿಸಿ ತಂಡ ಪ್ರಶಸ್ತಿ ಲಭಿಸಿದೆ.
ಮೈಸೂರಿನ ಇಲವಾಲದ ಅಲೋಕ ಆವರಣದಲ್ಲಿ 4ನೇ ಕರ್ನಾಟಕ ಏರ್ ಸ್ಕ್ವಾಡ್ರನ್ ಎನ್ಸಿಸಿ ಘಟಕವು ಹಮ್ಮಿಕೊಂಡಿದ್ದ ವಾರ್ಷಿಕ ಶಿಬಿರದಲ್ಲಿ, ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯ ವಾಯುದಳದ ಕೆಡೆಟ್ಸ್ಗಳು ವಿವಿಧ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಗಳಿಸಿದ ಗರಿಷ್ಠಾಂಕಗಳು ಹಾಗೂ ಒಟ್ಟಾರೆ ಸಾಧನೆಯನ್ನು ಪರಿಗಣಿಸಿ, ಶಿಬಿರದ ಕಮಾಂಡೆಟ್, 4ನೇ ಕರ್ನಾಟಕ ಏರ್ಸ್ಕ್ವಾಡ್ರನ್ ಎನ್ಸಿಸಿ ಘಟಕದ ವಿಗ್ ಕಮಾಂಡರ್ ಜೆ. ವರ್ಗೀಸ್ ಸುತ್ತೂರು ಎನ್ಸಿಸಿ ವಾಯುದಳಕ್ಕೆ ಅತ್ಯುತ್ತಮ ತಂಡ ಪ್ರಶಸ್ತಿ ಪ್ರದಾನ ಮಾಡಿದರು.
ಸುತ್ತೂರು ಎನ್ಸಿಸಿ ವಾಯುದಳದ ಕೆಡೆಟ್ಗಳು ಶಿಬಿರಾವಧಿಯಲ್ಲಿ ತೋರಿದ ಶಿಸ್ತು, ಸ್ಪರ್ಧಾತ್ಮಕ ಮನೋಭಾವ, ನಾಯಕತ್ವದ ಗುಣ, ಕವಾಯಿತು ಪ್ರದರ್ಶನಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸುತ್ತೂರು ಎನ್ಸಿಸಿ ವಾಯುದಳವು ಶಿಬಿರದಲ್ಲಿ ಏರ್ಪಡಿಸಿದ್ದ ಕವಾಯಿತು, ಶಿಬಿರದ ಶಿಸ್ತು, ಕ್ರಾಸ್ ಕಂಟ್ರಿ, ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳೆಲ್ಲದರಲ್ಲೂ ಪಾರಮ್ಯ ಮೆರೆದು ಒಟ್ಟಾರೆ ಪ್ರಥಮ ಸ್ಥಾನ ಗಳಿಸಿದರು.

ದೀನದಯಾಳ್ ಜನ್ಮದಿನ ಆಚರಣೆ
ಎಚ್.ಡಿ. ಕೋಟೆ:  ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಪಂಡಿತ್ ದೀನದಯಾಳು ಉಪಾಧ್ಯಾಯ ಅವರ ಜನ್ಮದಿನಾಚರಣೆ ನಡೆಯಿತು.  ಬಿಜೆಪಿ ಜಿಲ್ಲಾ ಅಧ್ಯಕ್ಷ ಹೇಮಂತ್ಕುಮಾರ್ ದೀನ ದಯಾಳು ಉಪಾಧ್ಯಾಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ತಾ. ಬಿಜೆಪಿ ಅಧ್ಯಕ್ಷ ಯೋಗಿಶ್ಕುಮಾರ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಸಿಂಗಯ್ಯ, ಪರೀಕ್ಷಿತ ರಾಜೇಅರಸ್, ಶಂಕರಲಿಂಗೇಗೌಡ, ಗುರುಸ್ವಾಮಿ, ಸೋಮಾಚಾರ್, ಸೋಮಶೇಖರ್, ಗಿರೀಶ್, ಹನು, ರವಿ, ಚನ್ನಪ್ಪನಾಯಕ, ಸುನಂದರಾಜು, ರಘು, ಪುಟ್ಟೇಗೌಡ, ಮಹೇಶ್, ವಿಜಯಕುಮಾರ್, ಸತ್ಯನಾರಾಯಣ್, ನಾಗರಾಜು, ಪುಟ್ಟರಾಜು, ನಂದೀಶ್, ಬಾಲು, ರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement