ಉದ್ಘೂರಿನಲ್ಲಿ ನಾಡಕುಸ್ತಿ
ಕ.ಪ್ರ.ವಾರ್ತೆ ಮೈಸೂರು ಸೆ. 26
ಗ್ರಾಮೀಣ ದಸರಾ ಅಂಗವಾಗಿ ತಾಲೂಕಿನ ಉದ್ಭೂರಿನಲ್ಲಿ ನಡೆದ ನಾಡಕುಸ್ತಿ ಪಂದ್ಯಾವಳಿಗೆ ಶಾಸಕ ಜಿ.ಟಿ. ದೇವೇಗೌಡ ಚಾಲನೆ ನೀಡಿದರು. ಪಂದ್ಯಾವಳಿಯಲ್ಲಿ ಕ್ಯಾತಮಾನರಹಳ್ಳಿಯ ಪೈ.ಚಂದ್ರಶೇಖರ್ ಚಿನ್ನದ ಪದಕ ಗಳಿಸಿದರು. ತಾಪಂ ಮಾಜಿ ಸದಸ್ಯ ಮಹದೇವಸ್ವಾಮಿ, ಮುಖಂಡರು ಭಾಗವಹಿಸಿದ್ದರು. ಮೂಟೆ ಹೊತ್ತು ಓಡುವುದು ಮತ್ತಿತರ ಸ್ಪರ್ಧೆಗಳು ಸಹ ನಡೆದವು. ಗ್ರಾಮೀಣ ದಸರೆ ಕಾರ್ಯಾಧ್ಯಕ್ಷ ಕೋಟೆಹುಂಡಿ ಮಹದೇವು, ಜಿಪಂ ಸದಸ್ಯ ಸಿ.ಜವರಯ್ಯ, ಸಿದ್ದೇಗೌಡ, ಮಹದೇವಸ್ವಾಮಿ, ಮೂರ್ತಿ, ಕೃಷ್ಣಕುಮಾರ್ ಸಾಗರ್ ಮೊದಲಾದವರು ಇದ್ದರು.
ದಸರಾ ದರ್ಶನ
ಮೈಸೂರು: ದಸರಾ ದರ್ಶನ ಉಪಸಮಿತಿ ಸಭೆಯಲ್ಲಿ ರಿಯಾಯಿತಿ ದರದ ಪಾಸ್ ಅನ್ನು ಸಮಿತಿ ಅಧ್ಯಕ್ಷ ರಾಜಪ್ಪ ಬಿಡುಗಡೆಗೊಳಿಸಿದರು. ಉಪಾಧ್ಯಕ್ಷ ನಾಗೇಶ್, ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ವಿ. ಶ್ರೀನಿವಾಸ್, ಎಚ್.ಎಂ. ರಮೇಶ್, ವಸುಂಧರಾದೇವಿ ಇದ್ದಾರೆ.