ಜಿಲ್ಲಾಮಟ್ಟದ ಕುಸ್ತಿಯಲ್ಲಿ ಪ್ರಥಮ
ನಂಜನಗೂಡು: ಮೈಸೂರಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 96 ಕೆ.ಜಿ ವಿಭಾಗದಲ್ಲಿ ನಂಜನಗೂಡು ಸಿಟಿಜನ್ ಶಾಲೆಯ ವಿದ್ಯಾರ್ಥಿ ಸಿ.ಮಲ್ಲಿಕಾರ್ಜುನ್ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮಹಮದ್ ನೂರ್ ಅಲಿ, ಶಿಕ್ಷಕ ವೃಂದದವರು ಹಾಗೂ ಸಹಪಾಠಿಗಳು ಅಭಿನಂದಿಸಿದ್ದಾರೆ.
357 ಮಂದಿ ವಿರುದ್ಧ ಕ್ರಮ
ಕ.ಪ್ರ.ವಾರ್ತೆ ಮೈಸೂರು ಸೆ. 26
ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ 357 ಮಂದಿಯ ವಿರುದ್ಧ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿ, 64,200 ದಂಡವನ್ನು ಸ್ಥಳದಲ್ಲಿಯೇ ವಸೂಲಿ ಮಾಡಿದ್ದಾರೆ. ಇಬ್ಬರಿಗೆ ನ್ಯಾಯಾಲಯಕ್ಕೆ ಹಾಜರಾಗುವುದಾಗಿ ನೋಟಿಸ್ ಪಡೆದಿದ್ದಾರೆ.
ಬಲ್ಲಹಳ್ಳಿ ಯುವತಿ ನಾಪತ್ತೆ
ಮೈಸೂರು: ಮೈಸೂರು ತಾಲೂಕು ಬಲ್ಲಹಳ್ಳಿ ನಿವಾಸಿ ವೆಂಕಟೇಗೌಡ ಎಂಬವರ ಪುತ್ರಿ ದೇವಿ (20) ನಾಪತ್ತೆಯಾಗಿದ್ದಾರೆ. ದೇವಿ ಸೆ.22 ರಂದು ಬಟ್ಟೆ ಹೊಲಿಸುವ ಸಲುವಾಗಿ ಬಲ್ಲಹಳ್ಳಿಯಿಂದ ಮೈಸೂರಿನ ಶಾರದಾದೇವಿನಗರಕ್ಕೆ ಹೋದವರು ಕಾಣೆಯಾಗಿದ್ದಾರೆ. ಕಾಣೆಯಾಗಿರುವ ತನ್ನ ಅಕ್ಕನನ್ನು ಪತ್ತೆ ಮಾಡಿಕೊಡುವಂತೆ ವೆಂಕಟೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 4.5 ಅಡಿ ಎತ್ತರ, ತೆಳ್ಳನೆಯ ಶರೀರ, ಎಣ್ಣೆಗೆಂಪು ಮೈಬಣ್ಣ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.0821- 2595781 ಸಂಪರ್ಕಿಸಲು ಜಯಪುರ ಠಾಣೆ ಪೊಲೀಸರು ಕೋರಿದ್ದಾರೆ.