ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಿಕ್ಷಕಿಗೆ ಲಯನ್ಸ್ ಐಕಾನ್ನಿಂದ ಸನ್ಮಾನ

Srinivasa Murthy VN
Updated On : 27 Sept 2013, 12:08 pm

ಕ.ಪ್ರ.ವಾರ್ತೆ ಮೈಸೂರು ಸೆ. 26
ಎಚ್.ಡಿ. ಕೋಟೆ ತಾಲೂಕಿನ ಕಾಡಂಚಿನ ಗ್ರಾಮವಾದ ಅಗಸನ ಹುಂಡಿಯ ಹಾಡಿಯ ಮಕ್ಕಳಿಗೆ ಶಿಕ್ಷಣ ದಾಸೋಹ ನೀಡಿದ ಶಿಕ್ಷಕಿ ಅನಿತಾ ಪ್ರಭಾಕರ್ ಅವರನ್ನು ಲಯನ್ಸ್ ಐಕಾನ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅರ್ಜಿ ಹಾಕಿ ಪ್ರಶಸ್ತಿ, ಸನ್ಮಾನ ಪಡೆಯಬೇಕಾದ ಈ ದಿನಗಳಲ್ಲಿ ಹುಡುಕಿ, ಕರೆದು ಸನ್ಮಾನಿಸಿದ್ದಕ್ಕೆ ಅಭಿನಂದಿಸಿ, ರಾಜೀವ್ಗಾಂಧಿ ಅಭಿಯಾರಣ್ಯದ ಅಂಚಿನ ಕಾಡಿನಲ್ಲಿ ಬದುಕುವುದೇ ದುಸ್ಸಾಹಸ. ಅಲ್ಲಿ ಶಾಲೆ ನಡೆಸಿ ಮನೆ-ಮನೆಗೆ ಜೋಳಿಗೆ ಹಿಡಿದು ಶಾಲೆಗೆ ಮಕ್ಕಳನ್ನು ಕೊಡಿ ಎಂದು ಭಿಕ್ಷೆ ಎತ್ತಿದ್ದಾಗಿ ತಿಳಿಸಿದರು.
ಪ್ರೊ.ಎನ್. ವೆಂಕೋಬರಾವ್ ಮಾತನಾಡಿ, ಒಬ್ಬ ಕೆಟ್ಟ ವಕೀಲ, ವೈದ್ಯ, ವ್ಯಾಪಾರಿ, ಪೊಲೀಸ್ ಯಾರೇ ಇದ್ದರೂ ಸಮಾಜ ಸಹಿಸಬಹುದು. ಆದರೆ ಒಬ್ಬ ಅಶಿಕ್ಷಿತ ಶಿಕ್ಷಕನಿದ್ದರೆ, ಒಂದು ಜನಾಂಗ ಹಾಳಾಗುತ್ತದೆ. ನೂರಾರು ಮಕ್ಕಳು ಅಕ್ಷರ ವಂಚನೆಗೊಳಗಾಗುತ್ತಾರೆ. ಶಿಕ್ಷಕನಿಗೆ ಮಾತ್ರ ತಿದ್ದುವ ಹಕ್ಕಿದೆ. ಸರಿ-ತಪ್ಪು ಆರೋಗ್ಯವಂತ ಸಮಾಜಕ್ಕೆ ಉತ್ತಮ ಶಿಕ್ಷಕರು ಬೇಕು ಎಂದು ಹೇಳಿದರು.
ಅಧ್ಯಕ್ಷ ನರೇಶ್ಕುಮಾರ್ ಮಾತನಾಡಿ, ಶಿಕ್ಷಕರನ್ನು ಗುರುತಿಸಿ ಗೌರವಿಸುವುದು ಉಳಿದ ಸೇವೆಗಳಿಗಿಂತ ಹೆಚ್ಚಿನ ಸಾರ್ಥಕವಿರುತ್ತದೆ ಎಂದು ತಿಳಿಸಿದರು.
ಕಾರ್ಯದರ್ಶಿ ಪುಟ್ಟಸ್ವಾಮಿ, ಡಾ.ಸಿದ್ದೇಶ್ ಆರಾಧ್ಯಮಠ, ಮಾಲತೇಶ ಜೋಶಿ, ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸದಾನಂದ್, ಗಣೇಶ್ಬಾಬು, ಸುಧೀರ್ಕುಮಾರ್, ಲತಾ, ರಶ್ಮಿ ಜೋಶಿ, ತನುಜಾ ನರೇಶ್, ಶಾಲಿನಿ ಪ್ರಸಾದ್, ಲತಾ ಸುಧೀರ್, ಸುಜಾತಾ ಗಣೇಶ್ಬಾಬು, ಮಾಯಾ ವೆಂಕೋಟಬರಾವ್, ಶಾಂತ ಚನ್ನಕೇಶವ ಭಾಗವಹಿಸಿದ್ದರು.

ಏಕರೂಪ ಶಿಕ್ಷಣಕ್ಕಾಗಿ ಜಾಗೃತಿ ಜಾಥಾ
ಕ.ಪ್ರ.ವಾರ್ತೆ ಮೈಸೂರು ಸೆ. 26

ಏಕರೂಪ ಸಮಾನ ಶಿಕ್ಷಣ ನೀತಿ, ಸಮಾನ ಶಾಲೆಗಾಗಿ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯವರು ಗುರುವಾರ ಜಾಗೃತಿ ಜಾಥಾ ಹಮ್ಮಿಕೊಂಡಿದ್ದರು.
ರೈತರ ಹಿತರಕ್ಷಣೆಗಾಗಿ ಪ್ರೌಢಶಾಲೆ ಮಟ್ಟದಲ್ಲೇ ಕೃಷಿ ವಿಷಯವನ್ನು ಪಠ್ಯೇತರ ಚಟುವಟಿಕೆಯಲ್ಲಿ ಅಳವಡಿಸಬೇಕು. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ವಿಷಯವಾರು ನುರಿತ ಶಿಕ್ಷಕರನ್ನು ನೇಮಿಸಬೇಕು. 1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಈ ಜಾಥಾಗೆ ಚಾಲನೆ ನೀಡಿದ ಸಾಹಿತಿ ಪ್ರೊ.ದೇಜಗೌ ಮಾತನಾಡಿ, ಏಕರೂಪ ಶಿಕ್ಷಣ ಜಾರಿಗೊಳಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಸಂಸದರು ಕೇಂದ್ರ ಸರ್ಕಾರದ ಬಳಿ ನಿಯೋಗ ತೆರಳಿ ಏಕರೂಪ ಶಿಕ್ಷಣ ಜಾರಿಗಾಗಿ ಮನವಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಮೈಸೂರು ವಿವಿ ಓವಲ್ ಮೈದಾನದ ಬಳಿ ಆರಂಭವಾದ ಈ ಜಾಥಾದಲ್ಲಿ ಬೈಕ್, ಆಟೋ, ಕಾರುಗಳು ಪಾಲ್ಗೊಂಡಿದ್ದವು. ಜಾಥಾ ಸೀತಾ ವಿಲಾಸ ರಸ್ತೆ, ರಮಾವಿಲಾಸ ರಸ್ತೆ, ಸಂತೆಪೇಟೆ, ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ತಮ್ಮ ಮನವಿ ಸಲ್ಲಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್, ಜಯ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್, ಜಿಲ್ಲಾಧ್ಯಕ್ಷ ಎಚ್.ಎನ್. ಸತೀಶ್ಗೌಡ, ಮುಖಂಡರಾದ ಸುದೀಪ್, ಉಮೇಶ್ಕುಮಾರ್, ಲೋಕೇಶ್ ಪಿಯಾ, ಮಧುಚಂದ್ರ, ಗುರುಪ್ರಸಾದ್, ಚಂದ್ರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement