ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದು ಹೃದಯ ಜಾಗೃತಿ ದಿನಾಚರಣೆ

Srinivasa Murthy VN
Updated On : 28 Sept 2013, 10:56 am

ಕ.ಪ್ರ.ವಾರ್ತೆ ಮೈಸೂರು ಸೆ. 28
ನಗರದ ಎಸ್3ವಿ ವಾಸ್‌ಕ್ಯೂಲರ್ ಟೆಕ್ನಾಲಜಿ ಸಂಸ್ಥೆಯು ಅಮೃತ ಯೋಜನೆ ಎಂಬ ಸೇವಾನಿರತ ಸಂಸ್ಥೆಯ ಸಹಭಾಗಿತ್ವದೊಂದಿಗೆ ಸೆ.29ರಿಂದ ಅ.1ರವರೆಗೆ ಜಾಗತಿಕ ಹೃದಯ ದಿನಾಚರಣೆ ಅಂಗವಾಗಿ ಹೃದಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ.
ಮೂರು ದಿನಗಳ ಕುವೆಂಪುನಗರ, ಸಾತಗಳ್ಳಿ ಹಾಗೂ ಬನ್ನಿಮಂಟಪದ ಸಾರಿಗೆ ಸಂಸ್ಥೆಯಲ್ಲಿ ಶಿಬಿರ ನಡೆಸಲಾಗುವುದು. ಎಸ್3ವಿ ವಾಸ್‌ಕ್ಯೂಲರ್ ಟೆಕ್ನಾಲಜಿಸ್ ಸಂಸ್ಥೆಯು ಹೃದಯ ಸಂಬಂಧಿ, ಕಾರ್ಡಿಯಾಲಜಿ, ನ್ಯೂರಾಲಜಿ, ಫೆರಿಫೆರಲ್ ಮತ್ತು ಎಂಡೋ ವಾಸ್ಕ್ಯೂಲರ್ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ವೈದ್ಯಕೀಯ ಚಿಕಿತ್ಸೆಗೆ ಅವಶ್ಯವಿರುವ ಸಲಕರಣೆಗಳನ್ನು ಹೊರತರುವ ಕೆಲಸ ಮಾಡುತ್ತಿದೆ ಎಂದು ಡಾ. ವಿಜಯಗೋಪಾಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದರಿ ಕಾರ್ಯಕ್ರಮಕ್ಕೆ ಸೆ.29ರಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಂ. ರಮೇಶ್, ಎಸ್3ವಿ ವಾಸ್ಕೂಲರ್ ಟೆಕ್ನಾಲಜಿಸ್ ಸಂಸ್ಥೆಯ ನಿರ್ದೇಶಕ ಕಾಳಿಂದಿ ನಾರಾಯಣ್ ಚಾಲನೆ ನೀಡುವರು. ಅಂದು ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ತಪಾಸಣೆ ಶಿಬಿರ ನಡೆಸಲಾಗುತ್ತದೆ. ಶಿಬಿರದಲ್ಲಿ ಕಂಡುಬಂದ ಹೈ- ರಿಸ್ಕ್ ಪೇಷೆಂಟ್‌ಗಳನ್ನು ಗುರುತಿಸಿ ನಗರದ ಬೇರೆ ಬೇರೆ ಹೃದಯ ಚಿಕಿತ್ಸಾ ಕೇಂದ್ರಗಳಿಗೆ ಮುಂದಿನ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಹೇಳಿದರು.
ಒಮ್ಮಿಂದೊಮ್ಮೇಲೆ ಕಾಣಿಸಿಕೊಳ್ಳುವ, ಗಂಭೀರ ಹೃದಯಾಘಾತ ಸಂಭವಿಸಿದಾಗ ಅವಶ್ಯಕವಾಗಿ ಬೇಕಾಗುವ ಚಿಕಿತ್ಸೆಗಳನ್ನು ಒದಗಿಸಿಕೊಡುವುದೇ ಅಮೃತ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ತಿಳಿವಳಿಕೆ ನೀಡಿ, ಯೋಗ್ಯ ಜ್ಞಾನವನ್ನು ಶಿಬಿರಗಳ ಮೂಲಕ ಪಸರಿಸುವಂತೆ ಮಾಡುವುದು. ಈ ಕಾಯಿಲೆಗಳಿಗೆ ಈಡಾಗುವುದನ್ನು ತಪ್ಪಿಸಲು ಜನರಿಗೆ ಜಾಗೃತಿ ಮೂಡಿಸುವುದು ಎಂದರು.
ಡಾ. ನಾಗರಾಜ ರಾವ್ ಮಾತನಾಡಿ, ಹೃದಯ ಕಾಯಿಲೆಯ ತೀವ್ರತೆಯ ಬಗ್ಗೆ ಮತ್ತು ಜೀವನ ಶೈಲಿ ವೃದ್ಧಿಸಿಕೊಳ್ಳುವ ಮೂಲಕ ಈ ಕಾಯಿಲೆಯನ್ನು ಹೇಗೆ ತಡೆಗಟ್ಟಬಹುದು ಎಂಬುದರ ಬಗ್ಗೆ ತಿಳಿಸಿಕೊಡಲು ಕಾರ್ಯಕ್ರಮ ರೂಪಿಸಲಾಗುತ್ತದೆ. ದಸರಾ ವಸ್ತುಪ್ರದರ್ಶನದಲ್ಲಿ ಮಳಿಗೆ ಸ್ಥಾಪಿಸಲು ಚರ್ಚಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement