'ಗ್ರಾಮೀಣ ದಸರೆ ಪ್ರತಿಭೆ ಹೊರಸೂಸಲು ಸಹಕಾರಿ'
ಕ.ಪ್ರ.ವಾರ್ತೆ ಹುಣಸೂರು ಸೆ. 28
ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಹೊರ ಚೆಲ್ಲಲು ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ, ನಾಡಿನ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವಂತೆ ಶಾಸಕ ಎಚ್.ಪಿ. ಮಂಜುನಾಥ್ ಕರೆ ನೀಡಿದರು. ಮುನೇಶ್ವರ ಮೈದಾನದಲ್ಲಿ ಶುಕ್ರವಾರ ಗ್ರಾಮೀಣ ದಸರಾ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ಶಾಸಕ ಎಚ್.ಪಿ. ಮಂಜುನಾಥ್ ಸ್ವತಃ ಗುಂಡು ಎತ್ತುವ ಹಾಗೂ ಗೊಬ್ಬರದ ಮೂಟೆ ಹೊತ್ತು ಓಡುವ ಆಟಕ್ಕೆ ಹಸಿರು ನಿಶಾನೆ ನೀಡಿ ಉದ್ಘಾಟಿಸಿದರೆ, ಜಿಪಂ ಸದಸ್ಯೆ ಡಾ.ಪುಷ್ಪ ಅಮರನಾಥ್ ರಂಗೋಲಿ ಬಿಡುವ ಮೂಲಕ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿದರು. ಸ್ಪರ್ಧೆಯ ವಿಜೇತ ವಿವರ: ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದಿದ್ದಾರೆ. ದಂತೆ ಬಿಂದಿಗೆ ಹೊತ್ತು ಓಡುವ ಸ್ಪರ್ಧೆಯಲ್ಲಿ ಸವಿತಾ, ಶೋಭಾ, ವೇದ ಕುಮಾರಿ. ರಂಗೋಲಿ ಸ್ಪರ್ಧೆಯಲ್ಲಿ ಹುಣಸೂರಿನ ಸವಿತಾ, ಪಕ್ಷಿರಾಜಪುರದ ದೀಪು, ಚನ್ನಸೋಗೆಯ ಮಹದೇವಿ. ರಾಗಿ ಕುಕ್ಕೆ ಹೊತ್ತು ಒಡುವ ಸ್ಪರ್ಧೆಯಲ್ಲಿ ವೇದಕುಮಾರಿ, ಶಾನುಭೋಗನಹಳ್ಳಿಯ ಶೋಭಾ, ಚನ್ನಸೋಗೆ ಮಹದೇವಿ. ಹಗ್ಗ-ಜಗ್ಗಾಟ ಸ್ವರ್ಧೆಯಲ್ಲಿ ಹುಣಸೂರಿನ ಚಂದ್ರಮ್ಮ ತಂಡ, ರತ್ನಪುರಿ ಗಾಯಿತ್ರಿದೇವಿ ತಂಡ.
ಪುರುಷರ ವಿಭಾಗ: ಗುಂಡು ಎತ್ತುವ ಸ್ವರ್ಧೆಯಲ್ಲಿ ಕಲ್ಕುಣಿಕೆಯ ನಾಗೇಶ, ಕೊಯಮತ್ತೂರು ಕಾಲೋನಿಯ ವರಾದ ವೇಲುಸ್ವಾಮಿ, ಹಾಗೂ ಬಸವರಾಜು. ಗೊಬ್ಬರಮೂಟೆ ಹೊತ್ತು ಓಡುವ ಸ್ಪರ್ಧೆಯಲ್ಲಿ ಕಿರಿಜಾಜಿ ಪ್ರಸನ್ನ, ಉದ್ದೂರಿನ ರೇವಣ್ಣ, ಯಶೋಧರಪುರ ನಂಜುಂಡ ಬಹುಮಾನ ಪಡೆದಿದ್ದಾರೆ.
ವಿದ್ಯಾರ್ಥಿನಿಯರ ಹಾಸ್ಟೆಲ್ ಆರಂಭಕ್ಕೆ ಕ್ರಮ
ಟಿ. ನರಸೀಪುರ: ಕರ್ನಾಟಕ ಪ್ರದೇಶ ಕುರುಬರ ಸಂಘದ ಚುನಾವಣೆಯಲ್ಲಿ ಜಿಲ್ಲೆಯ ಸಮುದಾಯದ ಮತದಾರರು ನಮ್ಮ ತಂಡದ ಸದಸ್ಯರನ್ನು ನಿರ್ದೇಶಕರನ್ನಾಗಿ ಚುನಾಯಿಸಿದರೆ, ಮೈಸೂರಿನಲ್ಲಿ ಕನಕದಾಸರ ಪ್ರತಿಮೆ ಪ್ರತಿಷ್ಠಾಪಿಸಿ, ಮಹಿಳಾ ವಿದ್ಯಾರ್ಥಿನಿಯರ ನಿಲಯವನ್ನು ಪ್ರಾರಂಭಿಸುವುದಾಗಿ ಸಂಘದ ಹಾಲಿ ನಿರ್ದೇಶಕ ಬಿ.ಎನ್. ದೊಳ್ಳೇಗೌಡ ಭರವಸೆ ನೀಡಿದರು. ಇಲ್ಲಿನ ಕುರುಬಗೇರಿಯಲ್ಲಿ ಶನಿವಾರ ಸಮುದಾಯದ ಮತದಾರರನ್ನು ಭೇಟಿ ಮಾಡಿ, ಮತಯಾಚಿಸಿದ ಅವರು, ಸಮುದಾಯದ ಬಗ್ಗೆ ಅತೀವ ಕಾಳಜಿಯುಳ್ಳವರನ್ನು ನಿರ್ದೇಶಕರನ್ನಾಗಿ ಚುನಾಯಿಸಬೇಕು. ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿರುವವರಲ್ಲಿ ಸಮುದಾಯದ ಹಿತಕ್ಕೆ ದುಡಿಯುವವರ ಬಗ್ಗೆ ಸಮುದಾಯದ ಮತದಾರರು ವಿಮರ್ಶಿಸಬೇಕು. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಜನರಿಗೆ ನೆರವಾಗುವವರಿಗೆ ಮತ ನೀಡುವಂತೆ ಮನವಿ ಮಾಡಿದರು.
ತಾವು ಕೂಡ ಪುನರ್ ಆಯ್ಕೆ ಬಯಸಿ ಸ್ಪರ್ಧಿಸಿದ್ದೇನೆ. ನಮ್ಮೊಂದಿಗೆ ಡಿ.ಸಿ. ಕಾಂತರಾಜು, ಜೆ. ಗೋಪಿ, ಎಸ್.ಎನ್. ಶಶಿಧರ್, ಶಿವಬೀರ ಕಡಕೋಳ ಹಾಗೂ ಚಿಕ್ಕಮ್ಮ ಬಸವರಾಜು ಅವರು ಕಣದಲ್ಲಿದ್ದಾರೆ. ಪಪಂ ಮಾಜಿ ಅಧ್ಯಕ್ಷ ಎನ್.ಎಸ್. ಬಸವರಾಜು, ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್. ಮಾದಯ್ಯ, ಮುಖಂಡರಾದ ಕುರುಬಾರಹಳ್ಳಿ ಕಶ್ಯಪ್, ಮಹೇಶ್, ಗುರುಮಲ್ಲ, ಶಿವಣ್ಣ, ರಾಮ ಇದ್ದರು.