ಪಶುಚಿಕಿತ್ಸಾ ಶಿಬಿರ
ಮೈಸೂರು: ರೋಟರಿ ಮೈಸೂರು ಉತ್ತರ ಹಾಗೂ ಪಶುಪಾಲನಾ ಇಲಾಖೆಯು ಸೆ.30ರಂದು ಬೆಳಗ್ಗೆ 8ಕ್ಕೆ ಮೈಸೂರು ತಾ. ದೇವಲಾಪುರದಲ್ಲಿ ಪಶುಚಿಕಿತ್ಸಾ ಶಿಬಿರ ಏರ್ಪಡಿಸಿದೆ. ಆಸಕ್ತರು ಉಚಿತ ಶಿಬಿರದ ಪ್ರಯೋಜನ ಪಡೆಯುವಂತೆ ಕೋರಲಾಗಿದೆ.
ಬೆಂಬಲಕ್ಕೆ ಮನವಿ
ಮೈಸೂರು: ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರ ಸ್ಥಾನಕ್ಕೆ ಸೆ.29ರಂದು ನಡೆಯುವ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ವರಕೂಡು ದೊಡ್ಡೇಗೌಡ ಮನವಿ ಮಾಡಿದ್ದಾರೆ. ಕ್ರಮ ಸಂಖ್ಯೆ 5ರ ನೇಗಿಲು ಗುರುತಿಗೆ ಮತ ನೀಡುವ ಮೂಲಕ ಕುಲಬಾಂಧವರು ನಿರ್ದೇಶಕರನ್ನಾಗಿ ಆಯ್ಕೆ ಮಾಡಿದರೆ ಮುಂದಿನ ದಿನಗಳಲ್ಲಿ ಸಮಾಜದ ಪರ ಕೆಲಸ ಮಾಡುತ್ತೇನೆ. ಕುರುಬ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು, ಬಡ ವಿದ್ಯಾರ್ಥಿಗಳಿಗೆ ವಸತಿನಿಲಯ ಸ್ಥಾಪಿಸುವುದು, ಕನಕದಾಸರರ ಕೃತಿಗಳನ್ನು ಇತರೆ ಭಾಷೆಗಳಿಗೆ ತರ್ಜುಮೆ ಮಾಡಲು ಕಾರ್ಯಕ್ರಮ ರೂಪಿಸುವುದು, ಸಂಗೊಳ್ಳಿ ರಾಯಣ್ಣ ಭವನ ನಿರ್ಮಾಣಕ್ಕೆ ಒತ್ತು ನೀಡುವುದಾಗಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದರು.
ಸಮಾವೇಶ
ಮೈಸೂರು: ಬದಲಿ ನೀತಿಗಳ ಆಧಾರಿತ ರಾಜಕಾರಣ ಕಟ್ಟಲು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ವತಿಯಿಂದ ಸೆ.30ರಂದು ನಗರದ ಹೋಟೆಲ್ ಗೋವರ್ಧನ ಸಭಾಂಗಣದಲ್ಲಿ ಎಡಪಕ್ಷಗಳ ರಾಜಕೀಯ ಸಮಾವೇಶ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 3.30ಕ್ಕೆ ನಗರದ ಗಾಂಧಿ ಚೌಕದಿಂದ ಮೆರವಣಿಗೆ ಹೊರಡಲಿದೆ. ಬಳಿಕ ಸಂಜೆ 4ಕ್ಕೆ ಆರಂಭವಾಗುವ ಸಮಾವೇಶದಲ್ಲಿ ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ, ಸಿಪಿಎಂನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಎನ್. ನಾಗರಾಜ್ ಅವರು ಪ್ರಸ್ತುತ ಬೆಳವಣಿಗೆ ಮತ್ತು ಬದಲಿ ನೀತಿಗಳ ಕುರಿತು ಮಾತನಾಡುವರು ಎಂದು ಕಾರ್ಯದರ್ಶಿ ಕೆ. ಬಸವರಾಜು ತಿಳಿಸಿದ್ದಾರೆ. ದೇಶದ ದೊಡ್ಡ ಬಂಡವಾಳಗಾರರ ಪರವಾದ ಅವಳಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತಿರಸ್ಕರಿಸಲು, ಬದಲಿ ನೀತಿಗಳ ಆಧಾರಿತ ರಾಜಕಾರಣ ಹುಟ್ಟುಹಾಕಲು ಈ ಸಮಾವೇಶ ಆಯೋಜಿಸಲಾಗಿದೆ. ಎಡ ಪಕ್ಷಗಳಾದ ಸಿಪಿಐ, ಸಿಪಿಎಂ, ಆರ್ಎಸ್ಪಿ, ಫಾರ್ವರ್ಡ್ ಬ್ಲಾಕ್ ಭಾಗವಹಿಸಲಿವೆ. ಆದ್ದರಿಂದ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕೋರಿದ್ದಾರೆ.
ನಾಳೆ ಪ್ರತಿಭಟನೆ
ಮೈಸೂರು: ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯಿಂದ ಸೆ.30ರ ಬೆಳಗ್ಗೆ 11ಕ್ಕೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಸದಸ್ಯ ಬಿ. ರಾಜು ತಿಳಿಸಿದ್ದಾರೆ.
ಮೂವರು ನಾಪತ್ತೆ
ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ನಾಪತ್ತೆಯಾಗಿದ್ದಾರೆ. ಮಹಾರಾಷ್ಟ್ರ ರಾಜ್ಯ ಸಾಂಗ್ಲಿ ಜಿಲ್ಲೆಯ ವೇಜೆಗಾವ್ ನಿವಾಸಿ ಪ್ರವೀಣ್ ಪಾಟೀಲ್ ಎಂಬವರ ಪತ್ನಿ ಕಾಂಚನ ಪ್ರವೀಣ್(28) ನಗರದಲ್ಲಿ ನಾಪತ್ತೆಯಾಗಿದ್ದಾರೆ. ಇವರಿಗೆ ವಿವಾಹವಾಗಿ 10 ವರ್ಷಗಳಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಮಾನಸಿಕ ಅಸ್ವಸ್ಥವಾಗಿರುವ ಕಾಂಚನರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕಾಣೆಯಾಗಿರುವ ತನ್ನ ಹಿರಿಯ ಮಗಳನ್ನು ಪತ್ತೆ ಮಾಡಿಕೊಡುವಂತೆ ಕೃಷ್ಣರಾವ್ ಮೋರೆ ಕೋರಿದ್ದಾರೆ. ಚಹರೆ- 5.1 ಅಡಿ ಎತ್ತರ, ಕಪ್ಪು ಮೈಬಣ್ಣ, ತೆಳ್ಳನೆಯ ಶರೀರ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದ ಕಮಲಮ್ಮ(42) ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ಕನ್ನಡ ಮಾತನಾಡುತ್ತಾರೆ. ಅಂಗಡಿಗೆ ಹೋದ ಆರ್. ಸಿದ್ದಯ್ಯ(75) ನಾಪತ್ತೆಯಾಗಿದ್ದಾರೆ. ಚಹರೆ- 5.9 ಅಡಿ ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಶರೀರ, ಕನ್ನಡ ಮಾತನಾಡುತ್ತಾರೆ. ಮಾಹಿತಿ ಸಿಕ್ಕಲ್ಲಿ ದೂ. 0821- 2418113, 313, 513 ಸಂಪರ್ಕಿಸಲು ಮಂಡಿ ಠಾಣೆ ಎಎಎಸ್ಐಗಳಾದ ಎಸ್.ಎ. ಕೆಂಪೇಗೌಡ, ನಾಗಮ್ಮ ಕೋರಿದ್ದಾರೆ.
ನಾಳೆ ಪಶುಚಿಕಿತ್ಸಾ ಉಚಿತ ಶಿಬಿರ
ಮೈಸೂರು: ರೋಟರಿ ಮೈಸೂರು ಉತ್ತರ ಹಾಗೂ ಪಶುಪಾಲನಾ ಇಲಾಖೆಯು ಸೆ.30ರಂದು ಬೆಳಗ್ಗೆ 8ಕ್ಕೆ ಮೈಸೂರು ತಾ. ದೇವಲಾಪುರದಲ್ಲಿ ಪಶುಚಿಕಿತ್ಸಾ ಶಿಬಿರ ಏರ್ಪಡಿಸಿದೆ. ಆಸಕ್ತರು ಉಚಿತ ಶಿಬಿರದ ಪ್ರಯೋಜನ ಪಡೆಯುವಂತೆ ಕೋರಲಾಗಿದೆ.
ಬೆಂಬಲಿಸಲುದೊಡ್ಡೇಗೌಡ ಮನವಿ
ಮೈಸೂರು: ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರ ಸ್ಥಾನಕ್ಕೆ ಸೆ.29ರಂದು ನಡೆಯುವ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ವರಕೂಡು ದೊಡ್ಡೇಗೌಡ ಮನವಿ ಮಾಡಿದ್ದಾರೆ. ಕ್ರಮ ಸಂಖ್ಯೆ 5ರ ನೇಗಿಲು ಗುರುತಿಗೆ ಮತ ನೀಡುವ ಮೂಲಕ ಕುಲಬಾಂಧವರು ನಿರ್ದೇಶಕರನ್ನಾಗಿ ಆಯ್ಕೆ ಮಾಡಿದರೆ ಮುಂದಿನ ದಿನಗಳಲ್ಲಿ ಸಮಾಜದ ಪರ ಕೆಲಸ ಮಾಡುತ್ತೇನೆ. ಕುರುಬ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು, ಬಡ ವಿದ್ಯಾರ್ಥಿಗಳಿಗೆ ವಸತಿನಿಲಯ ಸ್ಥಾಪಿಸುವುದು, ಕನಕದಾಸರರ ಕೃತಿಗಳನ್ನು ಇತರೆ ಭಾಷೆಗಳಿಗೆ ತರ್ಜುಮೆ ಮಾಡಲು ಕಾರ್ಯಕ್ರಮ ರೂಪಿಸುವುದು, ಸಂಗೊಳ್ಳಿ ರಾಯಣ್ಣ ಭವನ ನಿರ್ಮಾಣಕ್ಕೆ ಒತ್ತು ನೀಡುವುದಾಗಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದರು.
ನಾಳೆ ರಾಜಕೀಯ ಸಮಾವೇಶ
ಮೈಸೂರು: ಬದಲಿ ನೀತಿಗಳ ಆಧಾರಿತ ರಾಜಕಾರಣ ಕಟ್ಟಲು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ವತಿಯಿಂದ ಸೆ.30ರಂದು ನಗರದ ಹೋಟೆಲ್ ಗೋವರ್ಧನ ಸಭಾಂಗಣದಲ್ಲಿ ಎಡಪಕ್ಷಗಳ ರಾಜಕೀಯ ಸಮಾವೇಶ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 3.30ಕ್ಕೆ ನಗರದ ಗಾಂಧಿ ಚೌಕದಿಂದ ಮೆರವಣಿಗೆ ಹೊರಡಲಿದೆ. ಬಳಿಕ ಸಂಜೆ 4ಕ್ಕೆ ಆರಂಭವಾಗುವ ಸಮಾವೇಶದಲ್ಲಿ ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ, ಸಿಪಿಎಂನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಎನ್. ನಾಗರಾಜ್ ಅವರು ಪ್ರಸ್ತುತ ಬೆಳವಣಿಗೆ ಮತ್ತು ಬದಲಿ ನೀತಿಗಳ ಕುರಿತು ಮಾತನಾಡುವರು ಎಂದು ಕಾರ್ಯದರ್ಶಿ ಕೆ. ಬಸವರಾಜು ತಿಳಿಸಿದ್ದಾರೆ. ದೇಶದ ದೊಡ್ಡ ಬಂಡವಾಳಗಾರರ ಪರವಾದ ಅವಳಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತಿರಸ್ಕರಿಸಲು, ಬದಲಿ ನೀತಿಗಳ ಆಧಾರಿತ ರಾಜಕಾರಣ ಹುಟ್ಟುಹಾಕಲು ಈ ಸಮಾವೇಶ ಆಯೋಜಿಸಲಾಗಿದೆ. ಎಡ ಪಕ್ಷಗಳಾದ ಸಿಪಿಐ, ಸಿಪಿಎಂ, ಆರ್ಎಸ್ಪಿ, ಫಾರ್ವರ್ಡ್ ಬ್ಲಾಕ್ ಭಾಗವಹಿಸಲಿವೆ. ಆದ್ದರಿಂದ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕೋರಿದ್ದಾರೆ.
ಲಾರಿ ಹರಿದು ವಿದ್ಯಾರ್ಥಿ ಸಾವು
ಮೈಸೂರು: ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿಯಾಗಿ ಬಿದ್ದ ವಿದ್ಯಾರ್ಥಿಯ ಮೇಲೆ ಲಾರಿ ಹರಿದು ಮೃತಪಟ್ಟಿರುವ ಘಟನೆ ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಅತಿಥಿ ಗೃಹದ ಬಳಿ ಶನಿವಾರ ಬೆಳಗ್ಗೆ ನಡೆದಿದೆ. ಮೈಸೂರು ತಾಲೂಕು ಇಲವಾಲ ಹೋಬಳಿ ಈರಪ್ಪನಕೊಪ್ಪಲು ನಿವಾಸಿ ಮಾದಪ್ಪ ಎಂಬವರ ಪುತ್ರ ಎಂ. ಮಂಜು(17) ಮೃತಪಟ್ಟವರು. ಇವರೊಂದಿಗಿದ್ದ ವಿನಯ್ಕುಮಾರ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಜು ಮಹಾಜನ ಪಿಯು ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿ. ವಿನಯ್ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದರು. ಈ ಇಬ್ಬರು ಬೈಕಿನಲ್ಲಿ ಪಡುವಾರಹಳ್ಳಿ ಕಡೆಯಿಂದ ಕಲಾಮಂದಿರದತ್ತ ಬರುತ್ತಿದ್ದರು. ಜಲದರ್ಶಿನಿ ಅತಿಥಿ ಗೃಹದ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿಯಾಗಿದೆ. ಈ ವೇಳೆ ರಸ್ತೆಯ ಬಲಭಾಗಕ್ಕೆ ಬಿದ್ದ ಬೈಕ್ ಸವಾರ ಮಂಜು ಮೇಲೆ ಮರಳು ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಹರಿದ ರಭಸಕ್ಕೆ ಮಂಜು ಧರಿಸಿದ್ದ ಹೆಲ್ಮೆಟ್ ಸಹ ನುಜ್ಜುಗುಜ್ಜಾಗಿದೆ. ಎಡ ಬದಿಗೆ ಬಿದ್ದ ವಿನಯ್ಕುಮಾರ್ಗೆ ಗಾಯಗಳಾಗಿದೆ. ಈ ಸಂಬಂಧ ವಿವಿ ಪುರಂ ಸಂಚಾರ ಠಾಣೆ ಎಸ್ಐ ಡಿ. ಯೋಗೇಶ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪೊಲೀಸರಿಗೆ ಯೋಗ ಕೌಶಲ ಕಾರ್ಯಕ್ರಮ
ಮೈಸೂರು: ಯೋಗ ದಸರಾ ಉಪ ಸಮಿತಿ ವತಿಯಿಂದ ಜಿಲ್ಲಾ ಪೊಲೀಸರಿಗಾಗಿ ಯೋಗ ಕೌಶಲ ಕಾರ್ಯಕ್ರಮವನ್ನು ಜ್ಯೋತಿನಗರ ಡಿಎಆರ್ ಮೈದಾನದಲ್ಲಿ ಶನಿವಾರ ಬೆಳಗ್ಗೆ ಆಯೋಜಿಸಲಾಗಿತ್ತು. ಈ ಯೋಗ ಕೌಶಲ ಕಾರ್ಯಕ್ರಮದಲ್ಲಿ ಇನ್ಸ್ಪೆಕ್ಟರ್, ಎಸ್ಐ ಹಾಗೂ ಮುಖ್ಯಪೇದೆಗಳಿಗೆ ಯೋಗ ಗುರುಗಳಾದ ಡಾ. ರಾಘವೇಂದ್ರ ಪೈ, ಶ್ರೀಕಾಂತ್ ಜೋಯಿಷ್ ತರಬೇತಿ ನೀಡಿದರು. ವಿವಿಧ ಯೋಗಾಸನಗಳನ್ನು ಡಾ. ರಾಘವೇಂದ್ರ ಪೈ ಅವರು ಪೊಲೀಸರಿಗೆ ಹೇಳಿಕೊಟ್ಟರು. ಪ್ರಾಣ ಚೈತನ್ಯ ಕ್ರಿಯೆ ಮತ್ತು ಮುದ್ರೆಗಳ ಕುರಿತು ಶ್ರೀಕಾಂತ್ ಜೋಯಿಷ್ ಅವರು ತರಬೇತಿ ನೀಡಿದರು. ಎಸ್ಪಿ ಅಭಿನವ್ ಖರೆ, ಯೋಗ ದಸರಾ ಉಪ ಸಮಿತಿಯ ಅಧ್ಯಕ್ಷ ಎಲ್. ಭಾಸ್ಕರ್, ಉಪಾಧ್ಯಕ್ಷ ರವಿಕುಮಾರ್, ಕಾರ್ಯಾಧ್ಯಕ್ಷರಾದ ಜಿಲ್ಲಾ ಆಯುಷ್ ಅಧಿಕಾರಿ ಡಾ. ನಾಗೇಶ್ ಇದ್ದರು.
ಚಿದಾನಂದಗೆ ಪಿಎಚ್.ಡಿ ಪದವಿ
ಮೈಸೂರು: ಡಾ. ಎಂ.ಎಸ್. ಲಲಿತಮ್ಮ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎನ್.ಕೆ. ಚಿದಾನಂದ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಶಿಕ್ಷಣ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.
ಈಜು ಸ್ಪರ್ಧೆಯಲ್ಲಿ ಬಹುಮಾನ
ಮೈಸೂರು: ಬೆಂಗಳೂರಿನ ಪೂಜಾ ಅಕ್ವೇಟಿಕ್ ಸೆಂಟರ್ ವತಿಯಿಂದ ಬನಶಂಕರಿಯ ಕಾರ್ಪೋರೇಷನ್ ಸ್ವಿಮ್ಮಿಂಗ್ ಪೂಲ್ನಲ್ಲಿ ನಡೆದ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಸ್ಟೇಟ್ ಮಾಸ್ಟರ್ ಅಕ್ವೇಟಿಕ್ ಚಾಂಪಿಯನ್ಷಿಪ್ ಈಜು ಸ್ಪರ್ಧೆಯಲ್ಲಿ ಎ.ಜಿ. ಸೋಮಶೇಖರ್ ಭಾಗವಹಿಸಿ ನಾಲ್ಕು ಚಿನ್ನ ಹಾಗೂ ಎರಡು ಬೆಳ್ಳಿ ಪದಕ ಪಡೆದಿದ್ದಾರೆ. ಸೋಮಶೇಖರ್ ಅವರನ್ನು ಟಿ. ನಾರಾಯಣ, ಎಂ. ಪುಟ್ಟಸ್ವಾಮಿ, ನಾಬಿರಾಜ್, ಎಂ.ವಿ.ವಿ. ಸ್ವಾಮ, ವಿಠಲ್ರಾಜು ಅಭಿನಂದಿಸಿದ್ದಾರೆ.
ಕುರುಬರ ಜಾಗೃತಿ ಸಮಿತಿಗೆ ನೇಮಕ
ಮೈಸೂರು: ಕುರುಬರ ಜಾಗೃತಿ ಮತ್ತು ಅಭಿವೃದ್ಧಿ ಸಮಿತಿಯ ಮೈಸೂರು- ಚಾಮರಾಜನಗರ- ಕೊಡಗು- ಮಂಡ್ಯ- ಹಾಸನ ಕಾರ್ಯಾಧ್ಯಕ್ಷರಾಗಿ ಮೈಸೂರು ಬಸವಣ್ಣ ಅವರನು ್ನ ನೇಮಕ ಮಾಡಲಾಗಿದೆ.
ಕಸಾಯಿಖಾನೆ ಬಂದ್ ಅ.2ರಂದು
ಮೈಸೂರು: ಗಾಂಧಿ ಜಯಂತಿ ಅಂಗವಾಗಿ ಅ.2ರಂದು ನಗರದಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ ಎಂದು ನಗರ ಪಾಲಿಕೆ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ವಿದ್ಯಾರ್ಥಿ ವೇತನ
ಟಿ. ನರಸೀಪುರ: 2013-14ನೇ ಸಾಲಿಗೆ ತಾಲೂಕಿನಲ್ಲಿರುವ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆಗಳ 5ನೇ ತರಗತಿಯಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ವರ್ಗ 1, 2ಎ, 2ಬಿ, 3 ಎ, 3 ಬಿ ವಿದ್ಯಾರ್ಥಿಗಳು ಆಯಾ ಶಾಲಾ ಮುಖ್ಯೋಪಾಧ್ಯಾಯರ ಮೂಲಕ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಬಹುದು. ಈಗಾಗಲೇ ಶಾಲಾ ಮುಖ್ಯಸ್ಥರಿಗೆ ಸದರಿ ಕಚೇರಿಯಿಂದ ವಿದ್ಯಾರ್ಥಿ ವೇತನದ ಅರ್ಜಿಗಳನ್ನು ವಿತರಿಸಲಾಗುತ್ತಿದೆ. ವಿವರಕ್ಕೆ ತಾ. ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬಹುದು.
ಜೂಜಾಟ: ಬಂಧನ
ಟಿ. ನರಸೀಪುರ: ಜೂಜಾಡುತ್ತಿದ್ದವರ ಮೇಲೆ ದಾಳಿ ಮಾಡಿ, ಪಣಕ್ಕಿಟ್ಟಿದ್ದ ಹಣವನ್ನು ವಶಪಡಿಸಿಕೊಂಡು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ವಸತಿ ಗೃಹದ ಪಕ್ಕದಲ್ಲಿ ಜೂಜಾಟ ನಡೆಯುತ್ತಿದ್ದಾಗ ಸಬ್ ಇನ್ಸ್ಪೆಕ್ಟರ್ ಕೆ.ಆರ್. ಗೋಪಿಕೃಷ್ಣ ನೇತೃತ್ವದಲ್ಲಿ ದಾಳಿ ನಡೆಸಿ, ಪಣಕ್ಕಿಟ್ಟಿದ್ದ 29,270 ವಶಪಡಿಸಿಕೊಂಡು, ಜೂಜಾಡುತ್ತಿದ್ದ ಭೈರಾಪುರ ಗ್ರಾಪಂ ಬಿಲ್ ಕಲೆಕ್ಟರ್ ನಾಗರಾಜು, ಆಟೋ ಚಾಲಕ ಪಾಪಣ್ಣ, ನಿವೃತ್ತ ಅಧಿಕಾರಿ ಸೋಮಣ್ಣ, ನಟರಾಜು, ಗುರು, ಸಂತೋಷ್ ಅವರನ್ನು ಬಂಧಿಸಿದ್ದಾರೆ.
ಚಿಂತನಾ ಕಾರ್ಯಕ್ರಮ
ಕೆ.ಆರ್. ನಗರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚುಂಚನಕಟ್ಟೆ ವಲಯ ಒಕ್ಕೂಟ ಸದಸ್ಯರ ಪ್ರಗತಿ ಚಿಂತನಾ ಕಾರ್ಯಕ್ರಮ ಅ.2ರಂದು ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೆಂದ್ರ ಹೆಗ್ಗಡೆ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಸಾ.ರಾ. ಮಹೇಶ್ ಅಧ್ಯಕ್ಷತೆ ವಹಿಸುವರು. ಜಿಪಂ ಮಾಜಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಭಾಗವಹಿಸಲಿದ್ದು, ತಾಪಂ ಸದಸ್ಯ ಚಿಕ್ಕೇಗೌಡ, ನೇತ್ರಾವತಿ ಭಾಗವಹಿಸುವರು.