ವಿಶ್ವಕಪ್ ಗೆದ್ದ ನೆನಪಿನ ಗೀತೆಗೆ ಚಾಲನೆ
ಮೈಸೂರು: ಭಾರತ, ವೆಸ್ಟ್ ಇಂಡೀಸ್ ವಿರುದ್ಧದ 1983ರ ವಿಶ್ವಕಪ್‌ನಲ್ಲಿ ಜಯ ಸಾಧಿಸಿದ್ದರ 50ನೇ ವರ್ಷಾಚರಣೆ ಅಂಗವಾಗಿ ಸಂಯೋಜಿಸಿದ್ದ ಹಾಡಿಗೆ ಭಾರತ ಎ ತಂಡದ ನಾಯಕ ಚೇತೇಶ್ವರ ಪೂಜಾರ್ ಚಾಲನೆ ನೀಡಿದರು. 1983ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಫೈನಲ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ವಿಶ್ವಕಪ್ ಗೆದ್ದಿತ್ತು. ಈ ಹಿನ್ನೆಲೆಯಲ್ಲಿ ಮೈಸೂರಿನ ಪಿ.ಎಂ. ವಿಜೇಂದ್ರ ರಾವ್ ಅವರು ಸಂಯೋಜಿಸಿದ್ದ ವೆಬ್‌ಸೈಟ್ ಗೀತೆಗೆ ಪೂಜಾರ್ ಚಾಲನೆ ನೀಡಿದರು. ಈ ವೇಳೆ ಭಾರತ ಎ ಮತ್ತು ವೆಸ್ಟ್ ಇಂಡೀಸ್ ಎ ತಂಡದ ಸದಸ್ಯರು ಇದ್ದರು. ಕೆಎಸ್‌ಸಿಎ ಮೈಸೂರು ವಲಯ ಸಂಚಾಲಕ ಎಸ್. ವಿಜಯಪ್ರಕಾಶ್, ಅಧ್ಯಕ್ಷ ಅಶ್ವಿನಿ ರಂಜನ್ ಇದ್ದರು. ಹಾಡು ಕೇಳಲು ಇಚ್ಛಿಸುವವರು ಢಿಢಿಢಿ.ಢ್ಝಞ್ಝ1365.್ಛ್ಟಟಗೆ ಲಾಗ್‌ಇನ್ ಆಗಬೇಕು.
ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯ
ಮೈಸೂರು: ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದು ಉದ್ಯಮಿ ಎಂ. ಜಗನ್ನಾಥ ಶೆಣೈ ಹೇಳಿದರು. ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಶನಿವಾರ ಪ್ಯಾಂಥರ್ಸ್ ಸ್ಪೋರ್ಟ್ಸ್ ಕ್ಲಬ್ ಏರ್ಪಡಿಸಿದ್ದ ಓಪನ್ ಶಟಲ್ ಬ್ಯಾಡ್ಮಿಟನ್ ಪಂದ್ಯಾವಳಿಗೆ ಅವರು ಚಾಲನೆ ನೀಡಿ ಮಾತನಾಡಿದರು. ಕ್ರೀಡೆಯನ್ನು ತಪಸ್ಸಿನಂತೆ ಆಚರಿಸಿದಾಗ ಮಾತ್ರ ಒಲಿಯುತ್ತದೆ. ಶಿಸ್ತು, ಸಂಯಮ, ಸನ್ನಡತೆ, ಏಕಾಗ್ರತೆ ಗುಣ ಇರಬೇಕು. ಮೈಸೂರು ಹಿಂದಿನಿಂದಲೂ ಕ್ರೀಡಾ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದೆ. ಆ ಸ್ಥಾನವನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಕ್ರೀಡಾಪಟುಗಳ ಮೇಲಿದೆ ಎಂದರು. ಟೆನ್ನಿಸ್ ಪಟು ಪೂಜಾಶ್ರೀ ವೆಂಕಟೇಶ್ ಮಾತನಾಡಿ, ಪ್ರತಿಯೊಬ್ಬ ಕ್ರೀಡಾಪಟುವು ನಮ್ಮ ದೇಶವನ್ನು ಪ್ರತಿನಿಧಿಸುವಂತಾಗಬೇಕು. ಈ ಹಿನ್ನೆಲೆಯಲ್ಲಿ ತಮಗೆ ಉತ್ತಮ ಅವಕಾಶ ಲಭಿಸಲಿ ಎಂದು ಆಶಿಸಿದರು.