ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸ್ನಾತಕೋತ್ತರ ತಂಡಕ್ಕೆ ಬಹುಮಾನ

Srinivasa Murthy VN
Updated On : 28 Sept 2013, 10:53 am

ಕ.ಪ್ರ.ವಾರ್ತೆ ಮೈಸೂರು ಸೆ. 28
ಮೈಸೂರು ವಿವಿ ಅಂತರ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಮಾನಸಗಂಗೋತ್ರಿ ಸ್ನಾತಕೋತ್ತರ ಕ್ರೀಡಾ ಮಂಡಳಿ ಮತ್ತು ಮಹಿಳೆಯರ ವಿಭಾಗದಲ್ಲಿ ಟೆರೇಷಿಯನ್ ಕಾಲೇಜು ತಂಡ ಪ್ರಶಸ್ತಿ ಗಳಿಸಿವೆ.
ಓವೆಲ್ ಮೈದಾನಲ್ಲಿ ನಡೆದ 85ನೇ ವಾರ್ಷಿಕ ಅಂತರ ಕಾಲೇಜು ಅಥ್ಲೆಟಿಕ್ಸ್ ಕೂಟದಲ್ಲಿ ಉಭಯ ತಂಡಗಳು ತಲಾ 96 ಅಂಕ ಪಡೆದು ಪ್ರಶಸ್ತಿ ಗಳಿಸಿವೆ. ವೈಯಕ್ತಿಕ ಪ್ರಶಸ್ತಿಯನ್ನು ಸ್ನಾತಕೋತ್ತರ ಕ್ರೀಡಾ ಮಂಡಳಿಯ ಸುಮಂತ್ ಮತ್ತು ಟೆರೇಷಿಯನ್ ಕಾಲೇಜಿನ ರೀನಾ ಜಾರ್ಜ್ ಗಳಿಸಿದ್ದಾರೆ.
ಬಹುಮಾನ ವಿತರಿಸಿದ ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ಜಯದೇವರಾಜ ಅರಸ್ ಮಾತನಾಡಿ, ವಿವಿಯ ದೈಹಿಕ ಶಿಕ್ಷಣ ವಿಭಾಗದ ಕಾರ್ಯವೈಖರಿ ಶ್ಲಾಘನೀಯ ಎಂದರು.
ದೈಹಿಕ ಶಿಕ್ಷಣ ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ವಿದ್ಯಾರ್ಥಿಗಳ ಬ್ಯಾಂಡ್ ವಾದನದ ಮೂಲಕ ಕ್ರೀಡಾಪಟುಗಳು ಪಥ ಸಂಚಲನದ ಮೂಲಕ ಮುಖ್ಯ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. ವಿಭಾಗದ ನಿರ್ದೇಶಕ ಡಾ. ಸಿ. ಕೃಷ್ಣ ಸ್ವಾಗತಿಸಿದರು. ಉಪನ್ಯಾಸಕ ಎಚ್.ಎಸ್. ಕೃಷ್ಣಕುಮಾರ್ ವಂದಿಸಿದರು. ವಾಲಿಬಾಲ್ ತರಬೇತುದಾರ ಡಾ. ಎನ್.ಬಿ. ಸುರೇಶ್ ನಿರೂಪಿಸಿದರು.

ಪ್ರಧಾನಿ ನಿಲುವು ವಿರೋಧಿಸಿ ಸಹಿ ಚಳವಳಿ
ಮೈಸೂರು:
ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಮುಂದಾಗಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಲುವು ವಿರೋಧಿಸಿ ಇಲ್ಲಿನ ಅಗ್ರಹಾರ ವೃತ್ತದಲ್ಲಿ ಶನಿವಾರ ಸಹಿ ಸಂಗ್ರಹ ಚಳವಳಿ ನಡೆಸಲಾಯಿತು.
ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಈ ಚಳವಳಿಯಲ್ಲಿ ಮಾತನಾಡಿದ ಬಳಗದ ಅಧ್ಯಕ್ಷ ಬಿ. ಅನಂತಕೃಷ್ಣ, ಪಾಕಿಸ್ತಾನವು ಮತ್ತೊಮ್ಮೆ ಭಾರತದ ಸಾರ್ವಭೌಮತ್ವದ ಮೇಲೆ ಸೆಡ್ಡು ಹೊಡೆದು ನೇರವಾಗಿ ಸೈನ್ಯ ಹಾಗೂ ಪೊಲೀಸರ ಮೇಲೆ ದಾಳಿ ಮಾಡಿರುವುದು ಖಂಡನೀಯ ಎಂದರು.
ಪಾಕ್ ಉಗ್ರರು ಜಮ್ಮುವಿನ ಮೇಲೆ ನಡೆಸಿದ ಬಾಂಬ್ ದಾಳಿ ವಿರೋಧಿಸಿ ಹಾಗೂ ಪಾಕಿಸ್ತಾನದೊಂದಿಗೆ ಮಾತುಕತೆಗೆ ಮುಂದಾಗಿರುವ ಪ್ರಧಾನಿ ನಿಲುವು ಖಂಡಿಸಿ, ನಗರ ವಿವಿಧ ವೃತ್ತಗಳಲ್ಲಿ ಸಹಿ ಸಂಗ್ರಹಿಸಿ ನಂತರ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ನಗರ ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಬಿಜೆಪಿ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ಆರ್. ರಾಮಪ್ರಸಾದ್, ಬಾಲಕೃಷ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement