ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಒಡೆದ ಪೈಪ್‌ಲೈನ್: ನೀರು ಪೂರೈಕೆ

Srinivasa Murthy VN
Updated On : 9 Apr 2014, 1:11 am
ಪಿರಿಯಾಪಟ್ಟಣ: ಪಟ್ಟಣಕ್ಕೆ ಕಾವೇರಿ ನೀರು ಪೂರೈಸುವ ಮುಖ್ಯ ಪೈಪ್‌ಲೈನ್ ಒಡೆದು ನೀರು ಪೋಲಾಗುತ್ತಿದ್ದು, ಪಟ್ಟಣಕ್ಕೆ ಪೂರೈಕೆಯಾಗುವ ನೀರಿನಲ್ಲಿ ಮತ್ತಷ್ಟು ವ್ಯತ್ಯಯವಾಗಿದೆ. ತಾಲೂಕಿನ ನಂದಿನಾಥಪುರ ಗ್ರಾಮದ ಬಳಿ ಪಟ್ಟಣಕ್ಕೆ ಕಾವೇರಿ ನೀರು ಪೂರೈಸುವ ಪೈಪ್‌ಲೈನ್ ಒಡೆದಿದ್ದು, ನೀರು ಪೋಲಾಗುತ್ತಿದೆ. ಅಲ್ಲದೆ ಒಡೆದಿರುವ ಪೈಪ್‌ಬಳಿ ನೀರನ್ನು ಬಳಸಿ ಅಲ್ಲಿನ ಗ್ರಾಮಸ್ಥರು ಬಟ್ಟೆ ತೊಳೆಯುತ್ತಿದ್ದು, ಪೈಪ್‌ಲೈನ್‌ಗೂ ಬಟ್ಟೆ ತೊಳೆದ ಸೋಪಿನ ನೀರು ಹಾಗೂ ಅಲ್ಲಿ ಸೃಷ್ಟಿಯಾಗುತ್ತಿರುವ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಆತಂಕ ಮೂಡಿದೆ. ಮುಂದಿನ ದಿನಗಳಲ್ಲಿ ನೀರಿನಿಂದಾಗಿ ಪಟ್ಟಣದ ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಆತಂಕ ಮೂಡಿದೆ. ಈ ಬಗ್ಗೆ ಪಪಂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಪೈಪ್‌ಲೈನ್ ನಿರ್ವಹಣೆಗೆ ಗಮನಹರಿಸಿ ಮುಂದಾಗಬಹುದಾದ ಅನಾಹುತ ತಪ್ಪಿಸುವಂತೆ ಗ್ರಾಮಸ್ಥರು ಕೋರಿದ್ದಾರೆ.
ಸ್ಮಶಾನ ಆಕ್ರಮಿಸಿದರೆ ಚುನಾವಣೆ ಬಹಿಷ್ಕಾರ
ಪಿರಿಯಾಪಟ್ಟಣ: ಹೈಟೆಕ್ ತಂಬಾಕು ಮಾರುಕಟ್ಟೆ ನಿರ್ಮಾಣ ಮಾಡುತ್ತೇವೆ ಎಂದು ಕಂಪಲಾಪುರದ ದಲಿತರ ಸ್ಮಶಾನವನ್ನು ಆಕ್ರಮಿಸಲು ಹೊಂಚು ಹಾಕಲಾಗುತ್ತಿದ್ದು, ಒಂದು ವೇಳೆ ಇದನ್ನು ಆಕ್ರಮಿಸಿದರೆ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ತಾಲೂಕಿನ ರಾವಂದೂರು ಹೋಬಳಿಗೆ ಸೇರಿದ ಕಂಪಲಾಪುರ ಗ್ರಾಮದಲ್ಲಿ ಇತ್ತೀಚೆಗೆ ತಂಬಾಕನ್ನು ಹರಾಜು ಮಾಡಲು ವಿಶ್ವದಲ್ಲಿಯೇ ಹೈಟೆಕ್ ಮಾರುಕಟ್ಟೆ ಮಾಡುತ್ತೇವೆ ಎಂದು ತಂಬಾಕು ಮಂಡಳಿಯವರು ತಿಳಿಸಿದ್ದಾರೆ. ಈ ಸ್ಥಳ ದೈವಭಕ್ತಿಯ ಪ್ರತೀತಿ ಹೊಂದಿದ್ದು, ಸ್ಥಳವನ್ನು ನೋಡಿದರೆ ಪೂರ್ವಿಕರ ನೆನಪಾಗುತ್ತದೆ. ಈ ಜಾಗದಲ್ಲಿ ಜೆಸಿಬಿ ಮುಖಾಂತರ ಅಗೆದು ಕಾಂಪೌಂಡ್ ನಿರ್ಮಿಸಲು ಹೊರಟಿದ್ದಾರೆ ಎಂದು ಗ್ರಾಮಸ್ಥರಾದ ಕೆ.ಎಸ್. ಪ್ರಕಾಶ್, ಕೆ.ಎಸ್. ಮಹದೇವ ತಿಳಿಸಿದ್ದಾರೆ. ದಲಿತರಿಗೆಂದೇ ಇರುವ ಈ ಸ್ಮಶಾನವನ್ನು ಬಿಟ್ಟರೆ ಬೇರೆಲ್ಲೂ ಹೂಳಲು ಜಾಗವಿಲ್ಲ. ಆದ್ದರಿಂದ ಈ ಜಾಗವನ್ನು ರಕ್ಷಿಸಿ ದಲಿತರಿಗೆ ಬಿಟ್ಟುಕೊಡಬೇಕು. ಬೇರೆ ಯಾವ ಜಾಗದಲ್ಲಾದರೂ ಮಾರುಕಟ್ಟೆ ನಿರ್ಮಿಸಲಿ. ಬೇಡಿಕೆಯನ್ನು ಈಡೇರಿಸದಿದ್ದರೆ ತಾಲೂಕಿನಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಲ್ಲದೆ, ಚುನಾವಣೆ ಬಹಿಷ್ಕರಿಸಬೇಕಾಗುತ್ತದೆ ಎಂದಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement