ಕೇಂದ್ರದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಕೊಡಿ
ಟಿ. ನರಸೀಪುರ: ರಾಜ್ಯದ ಜನರಿಗೆ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಕಾಂಗ್ರೆಸ್ ರಾಜ್ಯ ಸರ್ಕಾರ ಈಡೇರಿಸುವುದರಿಂದ ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಮತ್ತೊಮ್ಮೆ ನಾಡಿನ ಜನತೆ ಬೆಂಬಲ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಕೇಶ್ ಸಿದ್ದರಾಮಯ್ಯ ಮನವಿ ಮಾಡಿದರು.
ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಬಿಲಿಗೆರೆಹುಂಡಿ ಗ್ರಾಮದಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದಲ್ಲಿ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ ಪರ ಮತಯಾಚಿಸಿ ಮಾತನಾಡಿದ ಅವರು, ವರುಣ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಸಿದ್ದರಾಮಯ್ಯ ಅವರು ಸಿಎಂ ಆಗುತ್ತಿದ್ದಂತೆ ಪ್ರಣಾಳಿಕೆಯ ಅಂಶಗಳಲ್ಲಿ ಶೇ.50 ರಷ್ಟು ಯೋಜನೆಗಳನ್ನು ಘೋಷಣೆ ಮಾಡಿದರು. ಹತ್ತು ತಿಂಗಳಲ್ಲಿ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಿ ಜನಪರ ಸರ್ಕಾರವೆನ್ನುವಂತೆ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಎಲ್.ರೇವಣ್ಣಸಿದ್ದಯ್ಯ ಮಾತನಾಡಿ, ಕಳೆದ ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಸರ್ಕಾರವಿಲ್ಲದ ಸಂದರ್ಭದಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ಧ್ರುವನಾರಾಯಣ ಅವರನ್ನು ಬೆಂಬಲಿಸಿದ್ದೀರಿ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಸಿದ್ದರಾಮಯ್ಯ ಹತ್ತು ತಿಂಗಳಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಗೆಲವಿಗೆ ನಾವೆಲ್ಲರೂ ಒಗ್ಗೂಡಿ ದುಡಿಯಬೇಕಿದೆ ಎಂದು ತಿಳಿಸಿದರು.
ಅಭ್ಯರ್ಥಿ ಆರ್.ಧ್ರುವನಾರಾಯಣ, ಜಿಪಂ ಸದಸ್ಯ ಕೆ.ಮಹದೇವ, ಮಾಜಿ ಅಧ್ಯಕ್ಷ ಕೆ.ಸಿ.ಬಲರಾಂ, ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಮುದ್ದೇಗೌಡ, ಮುಖಂಡರಾದ ದೇವರಸನಾಯಕ, ಮನ್ನೇಹುಂಡಿ ಮಹೇಶ್, ಮಹದೇವಣ್ಣ, ಕೆ. ಅರುಣ್‌ಕುಮಾರ್, ಆರ್. ಮಹದೇವ, ಟಿ.ಎಂ. ನಂಜುಂಡಸ್ವಾಮಿ, ಸಿಡಿಎಸ್ ಅಧ್ಯಕ್ಷೆ ಲತಾ ಜಗದೀಶ, ಪುರುಷೋತ್ತಮ, ಜನ್ನೂರು ಮಹದೇವ, ಬಿ. ಮರಯ್ಯ, ಡಿ.ಆರ್. ಮೂರ್ತಿ, ಸೋಮಣ್ಣನಾಯಕ, ಅಮ್ಜದ್‌ಖಾನ್, ಸೊಯೆಬ್ ಅಖ್ತರ್, ಕೇಶವ, ಸೋಮು, ಎಂ.ಕೆ. ಸಹದೇವ, ಪಿ. ಸ್ವಾಮಿನಾಥ್‌ಗೌಡ, ಪಿ. ಪುಟ್ಟರಾಜು ಇದ್ದರು.