ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಚಪ್ಪರದಹಳ್ಳಿಯಲ್ಲಿ ಕಸಾಪ ಘಟಕ ಉದ್ಘಾಟನೆ

Srinivasa Murthy VN
Updated On : 9 Apr 2014, 1:11 am
ಪಿರಿಯಾಪಟ್ಟಣ: ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕಗಳನ್ನು ತೆರೆಯುವ ಮೂಲಕ ಭಾಷಾಭಿಮಾನ ಬೆಳೆಸಲು ಹೊರಟಿರುವುದು ಶ್ಲಾಘನೀಯ ಎಂದು ಕಾದಂಬರಿಕಾರ ಅಂಬಲಾರೆ ಬಸವೇಗೌಡ ಹೇಳಿದರು.
ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯದ 2ನೇ ಕಸಾಪ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾಷೆಯ ಬಗೆಗಿನ ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದು, ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಡುವಂತೆ ಸಲಹೆ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ಗೊರಳ್ಳಿ ಜಗದೀಶ್ ಮಾತನಾಡಿ, ರಾಜ್ಯದಲ್ಲಿಯೇ ಪ್ರಥಮವಾಗಿ ಗ್ರಾಮ ಘಟಕಗಳ ಸ್ಥಾಪನೆಗೆ ತಾಲೂಕು ಘಟಕ ಮುಂದಾಗಿದ್ದು, ಚಪ್ಪರದಹಳ್ಳಿ ಗ್ರಾಮದಲ್ಲಿ ರಾಜ್ಯದ 2ನೇ ಗ್ರಾಮ ಘಟಕವನ್ನು ತೆರೆಯಲಾಗಿದೆ. ಕಸಾಪ ಶತಮಾನೋತ್ಸವ ಆಚರಿಸುತ್ತಿರುವ ಹಿನ್ನೆಲೆ ತಾಲೂಕಿನಲ್ಲಿ 101 ಗ್ರಾಮ ಘಟಕಗಳ ಸ್ಥಾಪನೆ, ವಚನಕಾರರ ಕವಿಗಳ ಬಗೆಗಿನ 101 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.

Advertisement

Advertisement

ಎಲ್‌ಐಸಿಯ ನಿವೃತ್ತ ಅಭಿವೃದ್ಧಿ ಅಧಿಕಾರಿ ಸಿ.ಬಿ. ನಂಜುಂಡೇಗೌಡ ಅವರು ಗ್ರಾಮ ವೃತ್ತಕ್ಕೆ ಆದಿಯಪ್ಪ ಕವಿಯ ಹೆಸರಿನ ನಾಮಫಲಕವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮದವರೇ ಆದ 1,650 ರ ಕಾಲದ ಆದಿಯಪ್ಪ ಕವಿಯ ಹೆಸರನ್ನು ಗ್ರಾಮದ ವೃತ್ತಕ್ಕೆ ಇಡುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಹೇಳಿದರು.
ಇದೇ ವೇಳೆ ಕೆಲವು ದಾನಿಗಳು ಕಸಾಪಗೆ ದೇಣಿಗೆ ನೀಡುವುದಾಗಿ ಘೋಷಿಸಿದರು. ಅವರ ಕೊಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಸಾಪ ತಾಲೂಕು ಅಧ್ಯಕ್ಷ ಗೋರಳ್ಳಿ ಜಗದೀಶ್, ದಾನಿಗಳು ನೀಡುವ ಕೊಡುಗೆ ಹಣದಲ್ಲಿ ಹೋಬಳಿ ಕೇಂದ್ರವಾದ ಹಾರನಹಳ್ಳಿಯಲ್ಲಿ ಕುವೆಂಪು ಅವರ ಪ್ರತಿಮೆ ಸ್ಥಾಪಿಸುವುದಾಗಿ ಘೋಷಿಸಿದರು.
ಗ್ರಾಮದ ಯಜಮಾನರಾದ ಕಾಳೇಗೌಡ, ಜವರೇಗೌಡ, ಮಾಜಿ ಅಧ್ಯಕ್ಷ ನಿಂಗೇಗೌಡ, ಸಾಹಿತಿ ಶಿವರಾಮೇಗೌಡ, ಮುಖಂಡರಾದ ಮಹೇಂದ್ರ, ಶಿವಾನಂದ್, ಡಾ.ಸಂದೀಪ್, ಕೃಷ್ಣೇಗೌಡ, ದೇವಣ್ಣ, ಮಿಮಿಕ್ರಿ ಮಹದೇವ್, ಮಹೇಶ್, ವೆಂಕಟೇಶ್, ನವೀನ್‌ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement