ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತಾಪದಲ್ಲೂ ಅಭ್ಯರ್ಥಿಗಳ ಮತಯಾಚನೆ ಬಿರುಸು

Srinivasa Murthy VN
Updated On : 9 Apr 2014, 1:10 am
ಮೈಸೂರು: ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಮೈಸೂರು- ಕೊಡಗು ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಎಂ.ವಿ. ಪದ್ಮಮ್ಮ ಅವರು ಮಂಗಳವಾರ ಸೋಮವಾರಪೇಟೆಯ ಶನಿವಾರ ಸಂತೆಯಲ್ಲಿ ಪ್ರಚಾರ ನಡೆಸಿದರು. ಸಂತೆಯಲ್ಲಿ ತಮ್ಮಂತೆ ಕಾಣುವ ಒಬ್ಬ ಸಾಧಾರಣ ಮಹಿಳೆ ಚುನಾವಣಾ ರಂಗಕ್ಕೆ ಇಳಿದಿರುವುದನ್ನು ತಿಳಿದು ಮತದಾರರು ಕುತೂಹಲದಿಂದ ಅವರೊಂದಿಗೆ ಸ್ಪಂದಿಸಿದರು. ಕೊಡಗಿನ ಜಿಲ್ಲಾ ಘಟಕದ ಸಂಚಾಲಕ ತಿಮ್ಮಯ್ಯ ಇದ್ದರು.
ಕೆ.ಆರ್. ಕ್ಷೇತ್ರದಲ್ಲಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಮುಖಂಡರಾದ ಡಿ.ಸೋಮಶೇಖರ್, ವಿಶ್ವ, ಪ್ರಭಾಕರ್, ಗುಣ ಹಾಗೂ ಚಾಮರಾಜ ಕ್ಷೇತ್ರದಲ್ಲಿ ಶಾಸಕ ವಾಸು ಅವರ ಪುತ್ರ ಕವೀಶ್‌ಗೌಡ ನೇತೃತ್ವದಲ್ಲಿ ಮಾಜಿ ಮೇಯರ್ ಎಂ.ಸಿ.ರಾಜೇಶ್ವರಿ ಪುಟ್ಟಸ್ವಾಮಿ, ಎಂ.ಸಿ. ಆನಂದ್, ಪುನೀತ್, ಚೇತನ್ ಮನೆ ಮನೆಗೆ ತೆರಳಿ ಅಭ್ಯರ್ಥಿ ಪರ ಮತಯಾಚಿಸಿದರು.

Advertisement

Advertisement

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ಸತ್ಯನಾರಾಯಣ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಾಯಿತು. ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವು ಇದ್ದರು. 
ಜೆಡಿಎಸ್ ಪ್ರಚಾರ: ಮೈಸೂರು- ಕೊಡಗು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ ಅವರು ಮಂಗಳವಾರ ಪಾಲಿಕೆ ವಾರ್ಡ್ ನಂ.59 ರಿಂದ 65 ರವರೆಗೆ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಇವರೊಂದಿಗೆ ಶಾಸಕ ಸಂದೇಶ್ ನಾಗರಾಜ್ ಪಾಲ್ಗೊಂಡಿದ್ದರು.
ಬಿಎಸ್ಪಿ ಅಭ್ಯರ್ಥಿ ಪ್ರಚಾರ: ಮೈಸೂರು- ಕೊಡಗು ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಸಿ.ಮೋಹನಕುಮಾರ್ ಅವರು ಎಂಜಿ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಗೆ ತೆರಳಿ ಪ್ರಚಾರ ನಡೆಸಿದರು. ಇವರೊಂದಿಗೆ ಪಿ. ಚಂದ್ರಶೇಖರ್, ಸರ್ವೇಶ್, ಮಹದೇವಯ್ಯ, ಅನಂತನಾಗು ಇದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement