ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮನಸ್ಸು ಶುದ್ಧಿಗೆ ಭಕ್ತಿ, ಪೂಜೆ ಮುಖ್ಯ

Srinivasa Murthy VN
Updated On : 9 Apr 2014, 1:11 am
ಸಾಲಿಗ್ರಾಮ: ನಮ್ಮ ಮನಸ್ಸು ಮತ್ತು ಜ್ಞಾನವನ್ನು ಪವಿತ್ರ ಮಾಡಿಕೊಳ್ಳಲು ಪ್ರತಿಯೊಬ್ಬರೂ ಭಕ್ತಿ ಮತ್ತು ಪೂಜೆಯಲ್ಲಿ ತೊಡಗಬೇಕು ಎಂದು ವಿದ್ವಾನ್ ಆ.ಆನಂದ್‌ಕುಮಾರ್ ಅಭಿಪ್ರಾಯಪಟ್ಟರು. ಸಾಲಿಗ್ರಾಮದ ತ್ಯಾಗಿ ಭವನದ ರಾಜರ್ಷಿ ಡಾ.ವೀರೇಂದ್ರ ಹೆಗಡೆ ಸಭಾಂಗಣದಲ್ಲಿ ಬ್ರಹ್ಮಚಾರಿ ಮಹಾಬಲ ಭಯ್ಯಾಜಿ ಅವರು ಸಂಪಾದಿಸಿರುವ ವೀತರಾಗ ಜಿನ ಪೂಜಾಂಜಲಿ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.
ವಿಶ್ವ ಒಂದು ಮನೆಯಾದರೆ ಭಾರತ ದೇವರ ಮನೆ. ಮನಸ್ಸಿನ ಶಾಂತಿಗಾಗಿ ದೇವಾಲಯಗಳನ್ನು ನಿರ್ಮಿಸಿಕೊಂಡು ಅಲ್ಲಿ ಸುಖವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ನಮ್ಮ ಆತ್ಮದ ಶಾಂತಿಗಾಗಿ ಧ್ಯಾನ, ಭಕ್ತಿ, ಪೂಜೆ, ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡುವುದು ಅವಶ್ಯಕವಾಗಿದೆ ಎಂದರು.
ಬ್ರಹ್ಮಚಾರಿ ಮಹಾಬಲ ಭಯ್ಯಾಜಿ ಮಾತನಾಡಿದರು. ಧಾರ್ಮಿಕ ಪ್ರವರ್ತಕ ಡಾ.ರಾಜ್‌ಕುಮಾರ್ ವೇದಿಕೆಯ ಎಸ್.ಬಿ. ಗುಣಚಂದ್ರಕುಮಾರ್, ರಾಜೇಂದ್ರಪ್ರಸಾದ್, ಎಂ.ಎ. ಜಗದೀಶ್, ವಿಶ್ವಸೇನ್, ಮಾಣಿಕ್ಯರಾಜು, ರಾಜು, ಜೈಭಾರತಿ ಜೈನ ಮಹಿಳಾ ಸಮಾಜದ ಸದಸ್ಯರು ಇದ್ದರು.

Advertisement

Advertisement

ಗಂಧನಹಳ್ಳಿಯಲ್ಲಿ ರಮ್ಯಾ ಪರ ಪ್ರಚಾರ
ಭೇರ್ಯ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೋಟ್ ಬ್ಯಾಂಕ್‌ಗೋಸ್ಕರ ಶಾಸಕ ಸಾ.ರಾ.ಮಹೇಶ್ ತಾಲೂಕಿನ ಜನರಿಗೆ ಮೂರು ತಿಂಗಳು ಅಕ್ಕಿ ಕೊಟ್ಟು ರಾಜಕೀಯ ಮಾಡಿದರು ಎಂದು ಕಾಂಗ್ರೆಸ್ ಹಿರಿಯ ಮುಖಂಡ ದೊಡ್ಡಸ್ವಾಮೇಗೌಡ ಗಂಭೀರ ಆರೋಪ ಮಾಡಿದರು.
ಕೆ.ಆರ್. ನಗರ ತಾಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ಮಂಡ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಕಮಿಟಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ತಾಲೂಕಿನ ಶಾಸಕರು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನರಿಗೆ ಅಕ್ಕಿ ವಿತರಿಸಿ, ಪುಕ್ಕಟೆ ಪ್ರಚಾರ ಮಾಡಿಸಿಕೊಂಡು ಶಾಸಕರಾಗಿ ಆಯ್ಕೆಯಾದರೆ, 5 ವರ್ಷ ಪೂರ್ತಿ ಅಕ್ಕಿ ನೀಡುತ್ತೇನೆ ಎಂದು ಹೇಳಿ ತಾಲೂಕಿನ ಜನರಿಗೆ ನೀಡಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ ಅರ್ಧ ಗಂಟೆಯಲ್ಲಿ ರಾಜ್ಯದ ಜನರಿಗೆ ಒಂದು ರು. ಅಕ್ಕಿ ನೀಡುವುದಾಗಿ ಘೋಷಿಸಿದರೂ ಸಹ, ಹೆಚ್ಚು ಪ್ರಚಾರವಾಗಲಿಲ್ಲ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಕಾರ್ಯಕ್ರಮಗಳನ್ನು ನಿಮ್ಮ ಗ್ರಾಮಗಳಲ್ಲಿನ ಜನರಿಗೆ ತಿಳಿಸಿ, ಮಂಡ್ಯ ಲೋಕಸಭಾ ಕೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರಿಗೆ ಮತ ಕೇಳಿ ಎಂದು ಮನವಿ ಮಾಡಿದರು.
ಏ.14 ರಂದು ಕೆ.ಆರ್. ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಲೋಕಸಭಾ ಅಭ್ಯರ್ಥಿ ರಮ್ಯಾ ಪರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುವರು. ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ಪಕ್ಷದ ಮುಖಂಡರ ಜೊತೆ ಚರ್ಚಿಸಲಾಗಿದೆ. ಆದ್ದರಿಂದ ನಿಮ್ಮ ಗ್ರಾಮದಿಂದ ಹೆಚ್ಚು ಕಾರ್ಯಕರ್ತರನ್ನು ಕರೆದುಕೊಂಡು ಬನ್ನಿ ಎಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement