ಕಾಂಗ್ರೆಸ್ಗೆ ಪ್ರಚಂಡ ಗೆಲವು: ರೇವಣಸಿದ್ದಯ್ಯ
ಸುತ್ತೂರು: ನುಡಿದಂತೆ ನಡೆವ ಕಾಂಗ್ರೆಸ್ ಸರ್ಕಾರದ ಆಡಳಿತ ನೋಡಿರುವ ಜನರು ಕಾಂಗ್ರೆಸ್ ಗೆಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಲ್. ರೇವಣಸಿದ್ದಯ್ಯ ಹೇಳಿದರು. ವರುಣ ಕ್ಷೇತ್ರದ ಚಿಕ್ಕಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ್ ಪರ ಮತಯಾಚಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮವಾಗಿ ಅಭಿವೃದ್ಧಿ ಕಾರ್ಯ ಮಾಡಿವೆ. ಧ್ರುವನಾರಾಯಣ್ ಕಳೆದ ಬಾರಿಗಿಂತ ಅತ್ಯಧಿಕ ಮತ ಪಡೆದು ವಿಜಯ ಮಾಲೆ ಧರಿಸಲಿದ್ದಾರೆ ಎಂದರು. ಯುವ ಮುಖಂಡ ರಾಕೇಶ್ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರ ಎಲ್ಲಾ ವರ್ಗದವರ ಪರ ಕೆಲಸ ಮಾಡುತ್ತಿದೆ. ಮೈಸೂರು- ನರಸೀಪುರ ರಸ್ತೆ ಅಭಿವೃದ್ಧಿ, ಅಲ್ಲದೇ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು. ಜಿಪಂ ಸದಸ್ಯ ಎಂ.ಬಿ. ಸಿದ್ದೇಗೌಡ, ಚಿಕ್ಕಳ್ಳಿ ಕೃಷ್ಣ, ವರುಣ ಮಹೇಶ್, ಶಿವಮೂರ್ತಿ, ಮಹೇಂದ್ರ, ಬಸವರಾಜು, ಬೀರೇಗೌಡ, ಮಹದೇವಪ್ಪ, ಅಮ್ಜದ್ ಖಾನ್ ಇದ್ದರು.