ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಬ್ಯಾಂಕಿಂಗ್‌ನಲ್ಲಿ ಉಜ್ವಲ ಅವಕಾಶ'

Srinivasa Murthy VN
Updated On : 10 Apr 2014, 1:09 am

ಮೈಸೂರು: ಗುರಿ ಮತ್ತು ಆಸಕ್ತಿಯ ಅಧ್ಯಯನದೊಂದಿಗೆ ಬ್ಯಾಂಕಿಂಗ್ ಪರೀಕ್ಷೆ ಎದುರಿಸುವಂತೆ ಕೆನರಾ ಬ್ಯಾಂಕ್ ಮೈಸೂರು ವಲಯ ಉಪ ಪ್ರಧಾನ ವ್ಯವಸ್ಥಾಪಕ ಡಾ.ಎಸ್.ಟಿ. ರಾಮಚಂದ್ರ ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮತ್ತು ಕೆನರಾಬ್ಯಾಂಕ್ ಸಂಯುಕ್ತವಾಗಿ ಮುಕ್ತ ಗಂಗೋತ್ರಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಕ್ತ ವಿವಿ ಅಂಗವಿಕಲ ನೌಕರೆ ಎಸ್.ಡಿ. ಗಾಯಿತ್ರಿ ಅವರಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಿ  ಮಾತನಾಡಿದರು. ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕಷ್ಟು ಅವಕಾಶ ಇದೆ. ಐಟಿ, ಬಿಟಿ ಸಂಸ್ಥೆಗಳಲ್ಲಿ ನೀಡುವ ಸಂಬಂಳಕ್ಕಿಂತ ಹೆಚ್ಚಿನ ಸಂಬಳ ನೀಡಲಾಗುತ್ತದೆ. ವಾಸಕ್ಕೆ ಮನೆ, ಇಂಧನ ವೆಚ್ಚವನ್ನೂ ಭರಿಸಲಾಗುತ್ತದೆ. ಬ್ಯಾಂಕ್ ಕ್ಷೇತ್ರಕ್ಕೆ ಬರುವವರು ಗುರಿ ಮತ್ತು ಆಸಕ್ತಿ ಹೊಂದಿರಬೇಕು. ಶೇ. 100 ರಷ್ಟು ಸುರಕ್ಷಿತ ಉದ್ಯೋಗ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಅವಕಾಶ ಇದೆ. ಬಡ್ತಿ ಅವಕಾಶಗಳೂ ಹೆಚ್ಚಿದೆ. ಸಾಧ್ಯವಾದಷ್ಟು ಎಲ್ಲಾ ಪರೀಕ್ಷೆ ಎದುರಿಸಬೇಕು ಎಂದರು.    ಮುಕ್ತ ವಿವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿವಿಧೆಡೆ ವಿಶ್ವ ಆರೋಗ್ಯ ದಿನಾಚರಣೆ
ಮೈಸೂರು: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಫೋರ್ಟಿಸ್ ಕಾವೇರಿ ಆಸ್ಪತ್ರೆ ಹಾಗೂ ಕಾವೇರಿ ಆಸ್ಪತ್ರೆ ವತಿಯಿಂದ ಆರೋಗ್ಯ ನಡಿಗೆ ಕಾರ್ಯಕ್ರಮ ನಡೆಯಿತು. ಸಿದ್ಧಾರ್ಥನಗರದ ಆಸ್ಪತ್ರೆ ಮುಂಭಾಗ ಏರ್ಪಡಿಸಿದ್ದ ಈ ಕಾರ್ಯಕ್ರಮವನ್ನು ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ. ಕೃಷ್ಣಮೂರ್ತಿ ಉದ್ಘಾಟಿಸಿದರು.
 ಕಾವೇರಿ ಆಸ್ಪತ್ರೆಯ ಅಧ್ಯಕ್ಷ ಡಾ.ಜಿ.ಆರ್. ಚಂದ್ರಶೇಖರ್, ನಿರ್ದೇಶಕರಾದ ಡಾ.ಮಂಜುನಾಥ್ ಭಾರ್ಗವ್, ಡಾ. ಕಿರಣ್ ಆರ್. ಚುಲ್ಟಿ ಭಾಗವಹಿಸಿದ್ದರು.
 ನಂತರ ಅಲ್ಲಿಂದ ತೆರಳಿದ ನಡುಗೆ ಜಾಥಾವು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಂತರ ಎಥಾ ಸ್ಥಾನ ತಲುಪಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement