ಸಂಜೀವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿ ವತಿಯಿಂದ ಮುಕ್ತ ಸಂಜೀವಿನಿ ವಿದ್ಯಾರ್ಥಿ ವೇತನಕ್ಕೆ ಏ. 30 ರೊಳಗಾಗಿ ಸಲ್ಲಿಸುವಂತೆ ಕುಲಸಚಿವರು ಕೋರಿದ್ದಾರೆ.
2012-13ನೇ ಸಾಲಿನಲ್ಲಿ ಪ್ರಥಮ, ದ್ವಿತೀಯ, ತೃತೀಯ, ಬಿಎ., ಬಿಕಾಂ ಹಾಗೂ ಪ್ರಥಮ, ಅಂತಿಮ ವರ್ಷದ ಎಂಎ, ಎಂಕಾಂ, ಸ್ಪೆಷಲ್ ಬಿ.ಇಡಿ ಪದವಿಗೆ ಪ್ರವೇಶಾತಿ ಪಡೆದಿದ್ದು, ವಾರ್ಷಿಕ ಪರೀಕ್ಷೆ-2013ರ ಪರೀಕ್ಷೆಯಲ್ಲಿ ಮೊದಲನೇ ಪ್ರಯತ್ನದಲ್ಲಿ ಶೇ.50 ಮತ್ತು ಅದಕ್ಕೂ ಹೆಚ್ಚು ಅಂಕಗಳನ್ನು ಗಳಿಸಿ ಎಲ್ಲ ವಿಷಯಗಳಲ್ಲಿ ಒಂದೇ ಬಾರಿಗೆ ತೇರ್ಗಡೆ ಹೊಂದಿರಬೇಕು.
ಹಾಗೂ 2013-14ನೇ ಸಾಲಿನಲ್ಲಿ ದ್ವಿತೀಯ ಮತ್ತು ತೃತೀಯ ಬಿಎ, ಬಿಕಾಂ ಮತ್ತು ಅಂತಿಮ ವರ್ಷದ ಎಂಎ, ಎಂಕಾಂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆರ್ಥಿಕವಾಗಿ ಹಿಂದುಳಿದವರಾಗಿರಬೇಕು. ಏ.30ರ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮುಕ್ತ ಸಂಜೀವಿನಿ ವಿದ್ಯಾರ್ಥಿ ವೇತನದ ಅರ್ಜಿ ಫಾರಂಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿವಿ ವೆಬ್ಸೈಟ್ ಢಿಢಿಢಿ.್ಞಡ್ಟ್ಡಟಣಡ್ಟ್ಠಜ.ಜಜ್ಡ.್ಝಟಿ ಅಥವಾ ಹತ್ತಿರದ ಪ್ರಾದೇಶಿಕ ಕೇಂದ್ರ, ಅಧ್ಯಯನ ಕೇಂದ್ರ ಹಾಗೂ ಕೇಂದ್ರ ಕಚೇರಿಯಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ರಿಜಿಸ್ಟರ್ಡ್ ಪೋಸ್ಟ್, ಕೋರಿಯರ್, ಖುದ್ದಾಗಿ, ಉಪಕುಲಸಚಿವರು (ಪ್ರವೇಶಾತಿ), ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮುಕ್ತಗಂಗೋತ್ರಿ, ಮೈಸೂರು-6 ಇವರಿಗೆ ಸಲ್ಲಿಸಬೇಕು.