ಪ್ರೊ.ಚಿಕ್ಕಬೋರಯ್ಯ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ
ಮೈಸೂರು: ಮಾಜಿ ಶಾಸಕ ಹಾಗೂ ಹಿರಿಯ ವಕೀಲ ಪ್ರೊ.ಪಿ.ಎಂ. ಚಿಕ್ಕಬೋರಯ್ಯ ಅವರ ಆರೋಗ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ವಿಚಾರಿಸಿದರು.
ಕುವೆಂಪುನಗರದ ಬಿಜಿಎಸ್ ಅಪೊಲೋ ಆಸ್ಪತ್ರೆಗೆ ಭೇಟಿ ನೀಡಿದ ಅವರು ಸುಮಾರು 1 ಗಂಛಟೆಗೂ ಅಧಿಕ ಸಮಯ ಇದ್ದರು. ತಮ್ಮ ಗುರುಗಳು ಗುಣಮುಖರಾಗುವ ಬಗ್ಗೆ ವೈದ್ಯರು ಹಾಗೂ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದರು.
ಮೈಸೂರು ಲೋಕಸಭಾ ಅಭ್ಯರ್ಥಿ ಎಚ್.ವಿಶ್ವನಾಥ್, ಶಾಸಕ ಎಂ.ಕೆ. ಸೋಮಶೇಖರ್, ಮಾಜಿ ಶಾಸಕ ಡಿ. ಮಾದೇಗೌಡ ಮತ್ತಿತರ ಗಣ್ಯರು ಇದ್ದರು. ಆರು ತಿಂಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದ ಪಿಎಂಸಿ ಅವರು, ಸೊಂಟದಲ್ಲಿನ ಮೂಳೆ ತೊಂದರೆಯಿಂದಾಗಿ ಕಳೆದ ವಾರದಿಂದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಮತ್ತೆ ದೇಹದ ಬಲಭಾಗಕ್ಕೆ ಪಾರ್ಶ್ವವಾಯು ತಗುಲಿದ ಕಾರಣ ಅವರ ಸ್ಥಿತಿ ಗಂಭೀರವಾಗಿದೆ. ಆಹಾರವನ್ನು ನಾಳದ ಮೂಲಕ ನೀಡಲಾಗುತ್ತಿದ್ದು, ಮಾತನಾಡಲು ಅಶಕ್ತರಾಗಿರುವ ಅವರು ಅರೆಪ್ರಜ್ಞಾವಸ್ಥೆಯಲಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ರೌಡಿಶೀಟರ್ಗೂ ಕಾಂಗ್ರೆಸ್ಗೂ ಸಂಬಂಧ ಇಲ್ಲ: ಸಿಎಂ
ಮೈಸೂರು: ರೌಡಿ ಶೀಟರ್ ಆರೋಪಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಮೈಸೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಸಚಿವರಾದ ಕೆ.ಜೆ. ಜಾರ್ಜ್ ಮತ್ತು ರೋಷನ್ ಬೇಗ್ ಮತಯಾಚಿಸುತ್ತಿದ್ದ ವೇಳೆ ರೌಡಿಶೀಟರ್ ಅಜಂ ವ್ಯಕ್ತಿ ಜೊತೆಗಿದದ್ದು ಗೊತ್ತಿದ್ದು, ಆತ ಹೇಗೆ ಪ್ರಚಾರಕ್ಕೆ ಬಂದ ಎಂಬುದು ಗೊತ್ತಿಲ್ಲ ಎಂದರು. ರೌಡಿ ಶೀಟರ್ನಲ್ಲಿರುವ ವ್ಯಕ್ತಿ ಮತ ಹಾಕುತ್ತೇನೆ ಎಂದರೇ ಬೇಡ ಎನ್ನಲಾಗದು ಎಂದರು.