ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜೆಡಿಎಸ್ ಗೆಲವಿಗೆ ಹೋರಾಟ

Srinivasa Murthy VN
Updated On : 12 Apr 2014, 12:41 pm

ಭೇರ್ಯ: ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಪಕ್ಷನಿಷ್ಠೆಯಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಗೆಲುವಿಗೋಸ್ಕರ ಭೇರ್ಯ ಜಿಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರವನ್ನು ಜಂಟಿಯಾಗಿ ಮಾಡುತ್ತಿರುವುದಾಗಿ ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್ ಮತ್ತು ಜೆಡಿಎಸ್ ಹಿರಿಯ ಮುಖಂಡ ಹೊಸಹಳ್ಳಿ ವೆಂಕಟೇಶ್ ಹೇಳಿದರು.
ಗ್ರಾಮದ ಗಾಂಧಿ ವೃತ್ತದಲ್ಲಿ ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ಪರವಾಗಿ ಮತಯಾಚಿಸಿ ನಂತರ ಮಾತನಾಡಿದ ಅವರು, ಕೇಂದ್ರದಲ್ಲಿ ತೃತೀಯರಂಗದ ನೇತೃತ್ವದಲ್ಲಿ ಸರ್ಕಾರ ರಚನೆಯಾಗುವುದರಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತೆ ಪ್ರಧಾನಿಯಾಗುವ ಅವಕಾಶ ಇದ್ದು, ಮಂಡ್ಯ ಲೋಕಸಭಾ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಪುಟ್ಟರಾಜು ಅವರನ್ನು ಈ ಬಾರಿ ಹೆಚ್ಚು ಅಂತರದಿಂದ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಸಂಸದೆ ರಮ್ಯಾ ಒಂದು ಬಾರಿ ಗೆಲವಿಗೆ ಮಂಡ್ಯ ಜಿಲ್ಲೆಯ ಜನರು ಮತ್ತು ಅವರ ಪಕ್ಷದ ಮುಖಂಡರು ಪಶ್ಚಾತಾಪ ಪಡುವಂತೆಯಾಗಿದ್ದು, ಜಿಲ್ಲೆಯಲ್ಲಿ ಉತ್ತಮ ಸರಳ ವ್ಯಕ್ತಿ ಹಾಗೂ ಎರಡು ಬಾರಿ ಶಾಸಕರಾಗಿ ಪಾಂಡವಪುರ ತಾಲೂಕನ್ನು ಅಭಿವೃದ್ಧಿ ಮಾಡಿ, ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ವ್ಯಕ್ತಿ. ಮಾಜಿ ಶಾಸಕ ಪಟ್ಟರಾಜು ಅವರು, ಜನರ ಕಷ್ಟ ಸುಖಗಳಿಗೆ ಸದಾ ಸ್ಪಂದಿಸುತ್ತಿದ್ದು, ಪುಟ್ಟರಾಜು ಅವರನ್ನು ಗೆಲ್ಲಿಸಿ ಸಂಸದರಾಗಿ ಮಾಡಿ ಎಚ್.ಡಿ. ದೇವೇಗೌಡರ ಕೈಬಲ ಪಡಿಸಬೇಕು, ನಮ್ಮ ಜೆಡಿಎಸ್ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಜಿಪಂ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಾದ ಮೇಲೂರು, ಎಲೆಮುದ್ದನಹಳ್ಳಿ, ಮಂಡಿಗನಹಳ್ಳಿ, ಹರಂಬಳ್ಳಿ, ಹರಂಬಳ್ಳಿ ಕೊಪ್ಪಲು, ಹೊಸಅಗ್ರಹಾರ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ, ಬಿರುಸಿನ ಪ್ರಚಾರ ಕೈಗೊಂಡರು. ಮೈಮುಲ್ ನಿರ್ದೇಶಕ ಎ.ಟಿ. ಸೋಮಶೇಖರ್, ಜೆಡಿಎಸ್ ಹಿರಿಯ ಮುಖಂಡರಾದ ಹೊಸಹಳ್ಳಿ ವೆಂಕಟೇಶ್ ಮತ್ತು ಕಗ್ಗುಂಡಿ ಕುಮಾರ್, ವಿಎಸ್‌ಎಸ್‌ಎನ್ ನಿರ್ದೇರ್ಶಕರಾದ ರಂಗಪ್ಪ, ಗೋಪಾಲ್, ಹರಂಬಳ್ಳಿ ರಾಜಯ್ಯ, ಪುಟ್ಟೇಗೌಡ, ಅತ್ತಿಗುಪ್ಪೆ ಸಣ್ಣರಾಮೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement