ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ್ರತಾಪ ಪರ ಸೋಮಣ್ಣ ಪ್ರಚಾರ

Srinivasa Murthy VN
Updated On : 13 Apr 2014, 12:21 pm

ಕ.ಪ್ರ.ವಾರ್ತೆ ಮೈಸೂರು ಏ. 12
ಮೈಸೂರು- ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಪರ ಮಾಜಿ ಸಚಿವ ವಿ. ಸೋಮಣ್ಣ ಅವರು ನಗರದ ವಿದ್ಯಾರಣ್ಯಪುರಂ ಹಾಗೂ ಬಿಇಎಂಎಲ್ ಲೇಔಟ್‌ನಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಜಿಲ್ಲಾ ಮುಖಂಡ ಎಚ್.ವಿ. ರಾಜೀವ್ ಅಗ್ರಹಾರದ ಸುತ್ತಮುತ್ತ ಬಿಜೆಪಿ ಅಭ್ಯರ್ಥಿ ಪರ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಮುಖಂಡರಾದ ಶ್ರೀನಿವಾಸ ಶಾಸ್ತ್ರಿ, ವಿಕ್ರಮ್, ಭಾಸ್ಕರ್, ಚಿಕ್ಕಮ್ಮ, ನಾಗೇಶ್, ಬಸವರಾಜು ಇದ್ದರು. ಈಶ್ವರಪ್ಪ ರೋಡ್ ಷೋ: ಅಭ್ಯರ್ಥಿ ಪ್ರತಾಪ ಸಿಂಹ ಪರ ಕಡಕೊಳ ಗ್ರಾಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತೆರೆದ ವಾಹನದಲ್ಲಿ ರೋಡ್ ಷೋ ನಡೆಸಿದರು. ಇವರೊಂದಿಗೆ ಮುಖಂಡ ಯಶಸ್ವಿ ಸೋಮಶೇಖರ್ ಹಾಗೂ ಸ್ಥಳೀಯ ಮುಖಂಡರು ಇದ್ದರು.

ಕಾಂಗ್ರೆಸ್ ಪ್ರಚಾರ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಚುನಾವಣಾ ವೀಕ್ಷಕರಾಗಿ ನೇಮಕವಾಗಿದ್ದ ಶಬ್ಬೀರ್ ಅಹಮ್ಮದ್‌ಖಾನ್, ಸೈಯದ್ ರಹಮ್ಮತ್ ಉಲ್ಲಾ, ಅಬ್ದುಲ್ ಖುದ್ದೂಸ್ ಬೆಂಗಳೂರಿನಿಂದ ಆಗಮಿಸಿ ಮೈಸೂರು ಕ್ಷೇತ್ರಾದ್ಯಂತ ಪ್ರಚಾರ ಮಾಡಿದರು. ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಕೋಮುವಾದಿ ಪಕ್ಷಕ್ಕೆ ಮತ ಚಲಾಯಿಸದೆ ಮತ್ತು ಮತಗಳು ಬೇರೆ ಪಕ್ಷಗಳಲ್ಲಿ ಹಂಚಿ ಹೋಗದ ರೀತಿಯಲ್ಲಿ ಮುಸ್ಲಿಂ ಜನಾಂಗದವರು ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡಲಾಯಿತು. ಈ ಕ್ಷೇತ್ರದಲ್ಲಿ 3.50 ಲಕ್ಷ ಮಂದಿ ಮುಸ್ಲಿಮರು, 1 ಲಕ್ಷ ಕ್ರಿಶ್ಚಿಯನ್ನರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರಿಗೆ ಮತ ನೀಡುವಂತೆ ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನ್ಯೂ ಅಪೇರಾ ನೆಲಸಮ
ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನ ಹೃದಯ ಭಾಗದಲ್ಲಿದ್ದ ನ್ಯೂ ಅಪೇರಾ ಚಿತ್ರಮಂದಿರವು ರಾತ್ರೋರಾತ್ರಿ ನೆಲಸಮವಾಗಿದೆ. ಹೌದು, ನಗರದ ಶ್ರೀಹರ್ಷ ರಸ್ತೆಯಲ್ಲಿದ್ದ ನ್ಯೂ ಅಪೇರಾ ಚಿತ್ರಮಂದಿರವು ಈಗ ಇತಿಹಾಸ ಪುಟ ಸೇರಿದೆ. ಚಿತ್ರಮಂದಿರ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ. ಬೆಂಗಳೂರು- ನೀಲಗಿರಿ ರಸ್ತೆಯಲ್ಲಿದ್ದ ರಣಜಿತ್ ಚಿತ್ರಮಂದಿರ ನೆಲಸಮವಾದ ನಂತರ ಈಗ ನ್ಯೂ ಅಪೇರಾ ಚಿತ್ರಮಂದಿರವು ನೆಲಸಮವಾಗಿದೆ. ಅಪೇರಾದಲ್ಲಿ ನಾನ್ ಶಿವಪ್ಪು ಮನಿದನ್ ಎಂಬ ತಮಿಳು ಚಿತ್ರವು ಕಡೆಯದಾಗಿ ಪ್ರದರ್ಶನವಾಗಿದೆ.

ರಾಜ್ ಪುಣ್ಯಸ್ಮರಣೆ
ಮೈಸೂರು: ಕನ್ನಡದ ವರನಟ ಡಾ.ರಾಜ್‌ಕುಮಾರ್ ಅವರ 8ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಮೈಸೂರು ಕನ್ನಡ ವೇದಿಕೆಯಿಂದ ಶನಿವಾರ ಡಾ.ರಾಜ್‌ಛ ಉದ್ಯಾನದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಅಧ್ಯಕ್ಷ ಎಸ್. ಬಾಲಕೃಷ್ಣ, ಪದಾಧಿಕಾರಿಗಳಾದ ನಾಲಾಬೀದಿ ರವಿ, ಸುರೇಶಬಾಬು, ಡೇರಿ ವೆಂಕಟೇಶ್, ನಂಜುಂಡ ಶಿವರಾಜ್, ಗೋಪಿ, ಮಂಜುನಾಥ್, ಗುರು, ಮಹದೇವ, ರಮೇಶ್‌ಬಾಬು ಇದ್ದರು.

ವ್ಯಕ್ತಿ ಸಾವು
ಮೈಸೂರು: ನಗರದ ಬೋಟಿ ಬಜಾರ್ ಆವರಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಯಾವುದೋ ಕಾಯಿಲೆಯಿಂದ ನರಳಿ ಶುಕ್ರವಾರ ಮೃತಪಟ್ಟಿದ್ದಾರೆ. ಚಹರೆ- 55 ವರ್ಷ, 5.2 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಬಿಳಿ ಮತ್ತು ತಿಳಿ ನೀಲಿ ಬಣ್ಣದ ಶರ್ಟ್, ಹಸಿರು- ಬಿಳಿ ಗೆರೆಯುಳ್ಳ ಲುಂಗಿ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement