ಬಿಜೆಪಿಗೆ ಮರಳಾಗಬೇಡಿ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಏ. 12
ಬಿಜೆಪಿಯವರ ಮಾತಿಗೆ ಯುವಕರು ಮರುಳಾಗದಂತೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹದೇವ್ ಹೇಳಿದರು. ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಚಂದ್ರಶೇಖರಯ್ಯ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಬಡವರ ಬಗ್ಗೆ ಕಾಳಜಿ ಇಲ್ಲದ ಶ್ರೀಮಂತ ಪಕ್ಷಗಳಾಗಿವೆ. ಚುನಾವಣೆ ಬಂದಾಗ ಮಾತ್ರ ಮುಖ ತೋರಿಸಿ ಮತದಾರರನ್ನು ಮರುಳು ಮಾಡಿ ಗೆದ್ದ ನಂತರ ಮರೆಯಾಗುತ್ತಾರೆ. ಅಂತಹವರನ್ನು ತಿರಸ್ಕರಿಸಿ ಬಡವರ, ರೈತರ ಬಗ್ಗೆ ಕಾಳಜಿ ಇರುವ ಜೆಡಿಎಸ್ ಬೆಂಬಲಿಸಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಮತ್ತೆ ಪ್ರಧಾನಿಯನ್ನಾಗಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಪಕ್ಷದ ಅಭ್ಯರ್ಥಿ ಚಂದ್ರಶೇಖರಯ್ಯ, ಹಿರಿಯ ವಕೀಲ ಗೋವಿಂದೇಗೌಡ ಮಾತನಾಡಿದರು. ಜಿಪಂ ಸದಸ್ಯ ಎಸ್.ಎ.ಶಿವಣ್ಣ, ತಾಪಂ ಸದಸ್ಯರಾದ ಪ್ರಕಾಶ್, ರಘುನಾಥ್, ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಕುಮಾರ್, ವಕೀಲ ಜೆ.ಎಸ್.ನಾಗರಾಜ್, ಮುಖಂಡರಾದ ರವಿ, ಕೆ.ಸಿ. ರಾಜೇಗೌಡ, ಪುಟ್ಟೇಗೌಡ, ಪರಮೇಶ್, ರಾಮೇಗೌಡ, ನಾರಾಯಣ್, ರಿಜ್ವಾನ್, ನಾಗೇಗೌಡ, ಕೆ.ಎಸ್. ಮಾದೇವ್, ತಿಮ್ಮನಾಯಕ ಇದ್ದರು.