ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾರ್ಯಕರ್ತರ ಪರಿಶ್ರಮದಿಂದ ಗೆಲವು ಖಚಿತ: ಪುಟ್ಟರಾಜು

Srinivasa Murthy VN
Updated On : 14 Apr 2014, 1:27 am

ಕ.ಪ್ರ.ವಾರ್ತೆ ಕೆ.ಆರ್. ನಗರ ಏ. 13
ಮಂಡ್ಯ ಜೆಡಿಎಸ್ ಪರ ಅಲೆ ಇದ್ದು, ಪಕ್ಷದ ಮುಖಂಡರು, ಕಾರ್ಯಕರ್ತರ ಪರಿಶ್ರಮದಿಂದ ಮತದಾರರು ಈ ಬಾರಿ ಮನ್ನಣೆ ನೀಡಲಿದ್ದು ನನ್ನ ಗೆಲವು ನಿಶ್ಚಿತ ಎಂದು ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಕಂಠೇನಹಳ್ಳಿ ಬಡಾವಣೆಯ ವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಜೆಡಿಎಸ್ ಪರ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಲೋಕಸಭಾ ವ್ಯಾಪ್ತಿಯ ಎಲ್ಲಾ ಶಾಸಕರು ಈ ಚುನಾವಣೆಯನ್ನು ಗಂಭೀರವಾಗಿ ಪರೀಗಣಿಸಿದ್ದು ದೇಶದಲ್ಲಿ ತೃತೀಯ ರಂಗ ಅಧಿಕಾರ ಹಿಡಿಯುವ ಲಕ್ಷಣ ಸ್ಪಷ್ಟವಾಗಿವೆ. ಈ ನಿಟ್ಟಿನಲ್ಲಿ ಜನತೆ ಜೆಡಿಎಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೆಗೌಡರ ಕೈ ಬಲ ಪಡಿಸಿ ತೃತೀಯ ರಂಗಕ್ಕೆ ಶಕ್ತಿ ತುಂಬಲು ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಶಾಸಕ ಸಾ.ರಾ. ಮಹೇಶ್ ಅವರಿಗೆ ಬೆಂಬಲ ನೀಡಿದಂತೆ ನನಗೂ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಶಾಸಕ ಸಾ.ರಾ. ಮಹೇಶ್ ಮಾತನಾಡಿ, ಜೆಡಿಎಸ್ ಬಗ್ಗೆ ಬೇರೆ ಪಕ್ಷದವರು ಏನೇ ಅಪ ಪ್ರಚಾರ, ಆರೋಪ ಮಾಡಿದರೂ, ಮತದಾರರು ಯಾವುದಕ್ಕೂ ಕಿವಿಗೊಡದೆ ಸಿ.ಎಸ್. ಪುಟ್ಟರಾಜು ಅವರನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ತಾಲೂಕಿನ ಹಂಪಾಪುರ, ಭೇರ್ಯ, ಸಾಲಿಗ್ರಾಮ, ಮಿರ್ಲೆ, ಚುಂಚನಕಟ್ಟೆ, ಹೊಸೂರು, ಹೊಸಕೋಟೆ ಮತ್ತು ಮಾಯಿಗೌಡನಹಳ್ಳಿ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತ  ಯಾಚನೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement