ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಿಕ್ಷಣ ಗುಣಮಟ್ಟ ಹೆಚ್ಚಲಿ: ರಂಗನಾಥ್

Srinivasa Murthy VN
Updated On : 14 Apr 2014, 1:26 am

ಕ.ಪ್ರ.ವಾರ್ತೆ ಮೈಸೂರು ಏ. 13
ಶಿಕ್ಷಣದ ಗುಣಮಟ್ಟ ಅಭಿವೃದ್ಧಿಗೆ ಹೆಚ್ಚು ಗಮನ ನೀಡಬೇಕು ಎಂದು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಎಚ್.ಎ. ರಂಗನಾಥ್ ಹೇಳಿದರು.
ಮೈಸೂರು ವಿವಿ ಜೀವ ರಾಸಾಯನಶಾಸ್ತ್ರ ವಿಭಾಗವು ರಾಣಿಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ  ಭಾಗವಹಿಸಿ ಮಾತನಾಡಿದ ಅವರು, ಇರುವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಂಡು ಶಿಕ್ಷಣದ ಗುಣಮಟ್ಟದ ಅಭಿವೃದ್ಧಿಗೆ ಹೆಚ್ಚು ಗಮನ ನೀಡಬೇಕು ಎಂದರು.
ಮೈಸೂರು ವೈದ್ಯಕೀಯ ಕಾಲೇಜಿನ ಡಾ.ಎಂ.ಎ. ಶೇಖರ್ ಮೇದಸ್ಸು ಮತ್ತು ಹೃದಯ ಸಂಬಂಧಿ ರೋಗಗಳು ಕುರಿತು ಮಾತನಾಡಿ, ನಾವು ದಿನ ಕಳೆದಂತೆ ರೋಗಿಗಳಾಗುತ್ತಿದ್ದೇವೆ. ನಮ್ಮ ಜೀವನ ಶೈಲಿಗಳು ಬದಲಾಗುತ್ತಿವೆ ಎಂದರು.
ಜೀವರಾಸಾಯನ ಶಾಸ್ತ್ರ ವಿಭಾಗದಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಕ್ಲೀಟಸ್ ಜೆ.ಎಂ. ಡಿಸೋಜ ಅವರನ್ನು ಅಭಿನಂದಿಸಲಾಯಿತು. ಮೈಸೂರು ವಿವಿ ಕುಲಪತಿ  ಪ್ರೊ.ಕೆ.ಎಸ್. ರಂಗಪ್ಪ ಉದ್ಘಾಟಿಸಿದರು. ವಿಭಾಗದ ಅಧ್ಯಕ್ಷ ಪ್ರೊ.ಬಿ.ಎಸ್. ವಿಶ್ವನಾಥ್ ಇದ್ದರು.

ನೈಸ್‌ಫೆಸ್ಟ್- 2014 ಕಾರ್ಯಕ್ರಮ
ಮೈಸೂರು: ಮಾನಂದವಾಡಿ ರಸ್ತೆಯಲ್ಲಿರುವ ಎನ್‌ಐಇನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗವು ಆಯೋಜಿಸಿದ್ದ ನೈಸ್‌ಫೆಸ್ಟ್- 2014 ಕಾರ್ಯಕ್ರಮವನ್ನು ಅಡ್ವಾನ್ಸಡ್ ಎಲೆಕ್ಟ್ರಾನಿಕ್ ಸಿಸ್ಟಂ ವ್ಯವಸ್ಥಾಪಕ ನಿರ್ದೇಶಕ ಜೆ. ಕಾಶಿನಾಥನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ದೇಶದಲ್ಲಿ ಎಲೆಕ್ಟ್ರಾನಿಕ್ ಉದ್ಯಮ ಅತ್ಯಂತ ಶೀಘ್ರಗತಿಯಲ್ಲಿ ಬೆಳೆಯುತ್ತಿದೆ. 2010-11ನೇ ಸಾಲಿನಲ್ಲಿ 11 ಬಿಲಿಯನ್ ಡಾಲರ್‌ನಷ್ಟು ಎಲೆಕ್ಟ್ರಾನಿಕ್ಸ್ ಉತ್ಪನ್ನವನ್ನು ಭಾರತ ರಫ್ತು ಮಾಡಿದೆ. ಇದರಲ್ಲಿ ಡಿಸ್ಪ್ಲೆ ತಂತ್ರಜ್ಞಾನ, ಮನರಂಜನಾ ತಂತ್ರಜ್ಞಾನ, ಆಪ್ಟಿಕಲ್ ಡಿವೈಸಿಸ್‌ಗೆ ಸಂಬಂಧಪಟ್ಟ ವಸ್ತುಗಳನ್ನು ರಫ್ತು ಮಾಡಿದೆ. ಅದರಲ್ಲೂ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಸೇವೆ ಚೆನ್ನಾಗಿದೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಪೂರೈಸುವಲ್ಲಿ ನಾವು ಶಕ್ತರಾಗಿದ್ದೇವೆ ಎಂದರು.

ಟಿಸಿಎಸ್‌ಪುರಸ್ಕೃತರಿಗೆ ಸನ್ಮಾನ
ಮೈಸೂರು: ಟಾಟಾ ಕನ್ಸಲ್ಟಿನ್ಸಿ ಸರ್ವೀಸಸ್ (ಟಿಸಿಎಸ್) ಪ್ರಶಸ್ತಿ ಗಳಿಸಿದ ಎನ್‌ಐಇ ವಿದ್ಯಾರ್ಥಿಗಳನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಟಿಸಿಎಸ್ ಮೇಳದಲ್ಲಿ ಕಾಗ್ನೇಟಿವ್ ಏಡ್ ಮಾಡೆಲಲ್ಫಾರ್ ವಿಷ್ಯುಲ್ ಇಂಪೇರ್‌ಡ್ ವಿಷಯ ಕುರಿತ ಯೋಜನೆಯನ್ನು ಎನ್‌ಐಇ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ್ದರು. ಈ ಯೋಜನೆಗೆ 4 ಚಿನ್ನದ ಪದಕ ಹಾಗೂ 20 ಸಾವಿರ ರು. ನಗದು ಬಹುಮಾನ ಸಂದಿದೆ. ವಿದ್ಯಾರ್ಥಿಗಳಾದ ಜಿ.ಎಸ್. ಚಂದ್ರಶೇಖರ್, ಬಿ.ಎಂ. ದೀಕ್ಷಿತ್, ಆರ್. ಮೋಹನ್, ಶ್ರೀನಿವಾಸ ಆರ್. ಪ್ರಸಾದ, ಡಾ. ಬನ್ಸಿಲಾಲ್ ಪ್ರಶಸ್ತಿ ಪಡೆದಿದ್ದರು.  ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಜೆ.ಶ್ರೀಲಕ್ಷ್ಮೀ ಅವರು ಟಿಸಿಎಸ್ ಬೆಸ್ಟ್ ಸ್ಟೂಡೆಂಟ್ ಪ್ರಶಸ್ತಿಗೆ ಭಾಜನರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement