ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಲ್ಲಲ್ಲಿ ಅಂಬೇಡ್ಕರ್ ಜಯಂತಿ...

Srinivasa Murthy VN
Updated On : 15 Apr 2014, 12:44 pm

ಕ.ಪ್ರ.ವಾರ್ತೆ ಹುಣಸೂರು ಏ. 14
ಪಟ್ಟಣದ ವಿವಿಧೆಡೆ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ಮಿನಿ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಧಿಕಾರಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಿದರು. ಈ ವೇಳೆ ಉಪ ವಿಭಾಗಾಧಿಕಾರಿ ಜಗದೀಶ್, ತಹಸೀಲ್ದಾರ್ ವೆಂಕಟಾಚಲಪ್ಪ, ಸಮಾಜ ಕಲ್ಯಾಣಾಧಿಕಾರಿ ಹೊನ್ನೇಗೌಡ, ದಲಿತ ಮುಖಂಡರಾದ ಕೆಂಪರಾಜು, ನಿಂಗರಾಜ ಮಲ್ಲಾಡಿ, ಬೆಳ್ತೂರು ಮಹದೇವ, ಡಿ. ಕುಮಾರ್, ನಾಗರಾಜ್ ಮಲ್ಲಾಡಿ, ಕಾಂತರಾಜು, ದೇವರಾಜ್, ರಾಯನಹಳ್ಳಿ ಸ್ವಾಮಿ ಇದ್ದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಯೋಗಾನಂದ ಕುಮಾರ್, ಮಹದೇವ ಹೆಗ್ಗಡೆ, ಸುಬ್ಬರಾವ್, ನಾಗರಾಜ್ ಮಲ್ಲಾಡಿ, ಉಮಾಪತಿ ಇದ್ದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎಚ್.ಪಿ. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಸೇನಾ, ಜಿಪಂ ಸದಸ್ಯರಾದ ಡಾ. ಪುಷ್ಪಅಮರ್‌ನಾಥ್, ರಮೇಶ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ಖಾಲಿದ್, ಎಸ್. ಜಯರಾಂ, ಯುವ ಅಧ್ಯಕ್ಷ ರಘು, ಪುರಸಭಾ ಸದಸ್ಯರಾದ ಸುನಿತಾ ಜಯರಾಮೇಗೌಡ, ಲಕ್ಷ್ಮಣ, ಮುಖಂಡರಾದ ದೇವರಾಜ್, ಚಿಕ್ಕಸ್ವಾಮಿ ಇದ್ದರು.

ಸಾರಿಗೆ ನೌಕರ ಸಂಘದಿಂದ
ಎಚ್.ಡಿ. ಕೋಟೆ: ಪಟ್ಟಣದ ಕೆಎಸ್ಸಾರ್ಟಿಸಿಯ ಡಾ.ಬಿ.ಆರ್. ಅಂಬೇಡ್ಕರ್ ಪ.ಜಾತಿ, ಪ.ಪಂಗಡದ ಅಧಿಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ಡಾ. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ದಿನಾಚಣೆ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಪಟ್ಟಣದ ಘಟಕ ವ್ಯವಸ್ಥಾಪಕ ಬ್ರಹ್ಮದೇವ್, ಸೂಪರ್ ವೈಸರ್ ನಂಜುಂಡಸ್ವಾಮಿ, ಸಂಘದ ಅಧ್ಯಕ್ಷ ರವಿ ಪ್ರತಾಪಸಿಂಹ, ಗೌರವಾಧ್ಯಕ್ಷ ಮಹದೇವಯ್ಯ, ಆನಂದ್, ರವಿ, ನಾರಾಯಣ್, ನಾಗರಾಜು, ಕೆ. ಬಸವರಾಜು, ಕಾರ್ಯದರ್ಶಿ ಶಿವಣ್ಣ, ಶ್ರೀಕಂಠ, ಗುರು ಆರೋಗ್ಯಾಧಿಕಾರಿ ದಿನಕರ್ ಇದ್ದರು.

ಎಚ್.ಡಿ. ಕೋಟೆಯ ತಾ. ಕಚೇರಿ
ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಸರಳವಾಗಿ ಆಚರಿಸಲಾಯಿತು. ಸಹಾಯಕ ಚುನಾವಣಾಧಿಕಾರಿ ಡಾ.ಕಾ. ರಾಮೇಶ್ವರಪ್ಪ ಅಂಬೇಡ್ಕರ್ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿದರು. ಬಳಿಕ ಮಾತನಾಡಿ, ಜಗತ್ತು ಕಂಡ ವಿಚಾರವಾದಿ, ಮಾನವತಾವಾದಿ, ಜಗತ್ತಿನಲ್ಲಿ ತುಕ್ಕು ಹಿಡಿದಿದ್ದ ಮನಸ್ಸು, ಮೆದಳಿಗೆ ಜೀವ ತುಂಬಿದವರು ಅಂಬೇಡ್ಕರ್ ಎಂದರು.  ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಶಿವಸ್ವಾಮಿ, ಜಿಪಂ ಮಾಜಿ ಸದಸ್ಯ ವೆಂಕಟಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಗೋಪಾಸಲ್ವಾಮಿ, ತಾಲೂಕು ಜಗಜೀವನರಾಂ ವೇದಿಕೆಯ ಪರಶಿವಮೂರ್ತಿ, ಪುಟ್ಟಯ್ಯ, ನಾಗರಾಜು, ಸ್ವಾಮಿ, ಉಡ ನಾಗರಾಜು, ಗ್ರಾಪಂ ಸದಸ್ಯ ನಾಗರಾಜು, ಶಿವಯ್ಯ, ತಾಲೂಕು ಜೀವಿಕ ಸಂಸ್ಥೆಯ ಬಸವರಾಜು, ತಾಪಂ ಇಂ ಲಿಂಗರಾಜು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಿಂದ್ಯಾ, ಜಿಪಂ ಎಇಇ ನಾಗರಾಜು, ಶಿಶು ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಇದ್ದರು.

ಅಂಬೇಡ್ಕರ್ ಯಾವುದೇ ಒಂದು ಧರ್ಮಕ್ಕೆ ಸೇರಿದ ನಾಯಕರಲ್ಲ
ಹುಣಸೂರು:  ಅಂಬೇಡ್ಕರ್ ಯಾವುದೇ ಧರ್ಮಕ್ಕೆ ಸೇರಿದ ನಾಯಕರಲ್ಲ, ಸಮುದಾಯದಿಂದ ದೂರವುಳಿದಿದ್ದ ಶೋಷಿತರಿಗೆ ಅನ್ನ ಹಾಗೂ ಅಧಿಕಾರ ನೀಡಿದ ಮಹಾನ್ ನಾಯಕ ಎಂದು ಮೈಸೂರಿನ ಸಿಐಐಎಲ್‌ನ ಭಾಷಾಂತರಕಾರ ಬಿ.ಎಂ. ಲಿಂಗರಾಜು ಬಣ್ಣಿಸಿದರು. ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್ ಆಶಯದಂತೆ ಸಮಾನತೆ ತರುವಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ. ಯುವಜನಾಂಗ ಎಚ್ಚೆತ್ತುಕೊಳ್ಳಬೇಕು. ಚುನಾವಣೆಯಲ್ಲಿ ಮತ ಚಲಾಯಿಸುವಾಗ ಯೋಚಿಸಿ ಚಲಾಯಿಸಬೇಕು ಎಂದರು. ಪ್ರಾಂಶುಪಾಲೆ .ಎಂ.ಆರ್. ಸೌಭಾಗ್ಯ ಮಾತನಾಡಿದರು. ಅಧ್ಯಾಪಕರಾದ ಬಿ.ಎಂ. ನಾಗರಾಜು, ಪ್ರಕಾಶ್‌ರಾಜ್ ಅರಸ್, ಎನ್. ಕರುಣಾಕರ್, ವಿಶ್ವನಾಥ್, ದೇವರಾಜು, ನಾಗೇಂದ್ರ, ದೀಪುಕುಮಾರ್, ರಾಜಶೇಖರಮೂರ್ತಿ, ಜ್ಞಾನಪ್ರಕಾಶ್ ಇದ್ದರು.

ಟಿ. ನರಸೀಪುರದ ಅಂಬೇಡ್ಕರ್ ಸಮುದಾಯ ಭವನ
ಟಿ. ನರಸೀಪುರ: ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಡಾ.ಬಿ.ಆರ್. ಅಂಬೇಡ್ಕರ್ 123ನೇ ವರ್ಷದ ಜನ್ಮದಿನವನ್ನು ಆಚರಿಸಲಾಯಿತು.  ತಾಲೂಕು ಅಂಬೇಡ್ಕರ್ ಅಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಬುದ್ಧ ವಂದನೆಯ ಮೂಲಕ ನಮಿಸಲಾಯಿತು. ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆ ದಿನಾಚರಣೆ ಸರಳವಾಗಿ ನಡೆಯಿತು.ಬೌದ್ಧಭಿಕ್ಕು ಸುಗತಪಾಲ್ ಭಂತೇಜಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ದಾರ್ಥ, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವಯ್ಯ, ತಾಪಂ ಸದಸ್ಯ ಬಸವರಾಜು, ಮಾಜಿ ಉಪಾಧ್ಯಕ್ಷ ಪ್ರಸನ್ನ, ಗ್ರಾಪಂ ಸದಸ್ಯ ಶಿವಣ್ಣ, ಬಿಎಸ್ಪಿ ಕ್ಷೇತ್ರಾಧ್ಯಕ್ಷ ಬಿ.ಆರ್. ಪುಟ್ಟಸ್ವಾಮಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement