ಕಾಂಗ್ರೆಸ್ ಪರ ಮತ ಪ್ರಚಾರ
ಪಿರಿಯಾಪಟ್ಟಣ: ಭಾರತ ಜಾತ್ಯತೀತ, ಸಮಾನತೆ ಹಾಗೂ ಸಮಾಜವಾದದ ಹಿನ್ನೆಲೆಯುಳ್ಳ ಗಣರಾಜ್ಯ ವ್ಯವಸ್ಥೆಯ ರಾಷ್ಟ್ರವಾಗಿದ್ದು, ಜನತೆ ಜಾತ್ಯತೀತವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಹಾಗೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಯುವ ಕಾಂಗ್ರೆಸ್‌ನ ಮಾಜಿ ಜಿಲ್ಲಾಧ್ಯಕ್ಷ ಡಾ. ಬಿ.ಜೆ. ವಿಜಯ್‌ಕುಮಾರ್ ಹೇಳಿದರು. ಪಿರಿಯಾಪಟ್ಟಣ ಕಸಬಾ ಹೋಬಳಿಯ ವಿವಿಧ ಗ್ರಾಮಗಳಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿ ಪಕ್ಷದ ಅಭ್ಯರ್ಥಿ ಎಚ್. ವಿಶ್ವನಾಥ್ ಪರ ಮತಯಾಚಿಸಿ ಮಾತನಾಡಿದದರು. ಪಕ್ಷದ ಮುಖಂಡರಾದ ಪುಟ್ಟಯ್ಯ, ಹರೀಶ್, ರಾಮಚಂದ್ರು, ಕುಳ್ಳೇಗೌಡ, ರಮೇಶ್, ರಾಜು, ಹರೀಶ್ ಇದ್ದರು.