ಬಿರುಸಿನ ಪ್ರಚಾರ
ಕಾಂಗ್ರೆಸ್ ಪಾದಯಾತ್ರೆ
ಮೈಸೂರು: ಮೈಸೂರು- ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಸೋಮವಾರ ಚಾಮುಂಡೇಶ್ವರಿ ಕ್ಷೇತ್ರದ ರಮ್ನಹಳ್ಳಿಯಲ್ಲಿ ರೋಡ್ ಷೋ ನಡೆಸಿದರು. ಇದೇ ವೇಳೆ ಮಾಜಿ ಶಾಸಕ ಎಂ. ಸತ್ಯನಾರಾಯಣ, ಮುಖಂಡರಾದ ಕೆ. ಮರೀಗೌಡ, ಸಿ.ಎನ್. ಮಂಜೇಗೌಡ, ಎಚ್.ಸಿ. ಕೃಷ್ಣಕುಮಾರ್ ಸಾಗರ್, ವೆಂಕಟಯ್ಯ, ಕೆ. ಪ್ರಭುಸ್ವಾಮಿ, ಸಣ್ಣಸ್ವಾಮಿ ಇದ್ದರು. ಇನ್ನೊಂದೆಡೆ ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು ಕೂರ್ಗಳ್ಳಿಯಲ್ಲಿ ಹಾಗೂ ಡಿಸಿಸಿ ಸದಸ್ಯೆ ವಿಜಯಲಕ್ಷ್ಮೀ ಶಿವಪ್ರಸಾದ್ ಹುಚ್ಚೇಗೌಡ, ಲಲಿತಾ ಶ್ರೀಕಂಠೇಗೌಡ ನಗರದಲ್ಲಿ ಮತಯಾಚಿಸಿದರು.
ಸಂದೇಶ್ಸ್ವಾಮಿ ಮತ ಪ್ರಚಾರ
ಮೈಸೂರು: ಲೋಕಸಭಾ ಚುನಾವಣೆಗೆ ಇನ್ನು ಎರಡು ದಿನ ಬಾಕಿ ಇದ್ದು ವಿವಿಧ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಮೈಸೂರು- ಕೊಡಗು ಜೆಡಿಎಸ್ ಅಭ್ಯರ್ಥಿ ನ್ಯಾ. ಚಂದ್ರಶೇಖರಯ್ಯ ಪರ ಮಾಜಿ ಮೇಯರ್ ಸಂದೇಶ್ ಸ್ವಾಮಿ ಪಾಲಿಕೆ ವಾರ್ಡ್ ನಂ. 62ರಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ಮುಖಂಡ ನಾರಾಯಣ ಸೇರಿದಂತೆ ಹಲವು ಮಂದಿ ಸಾಥ್ ನೀಡಿದರು. ಎಸ್ಬಿಎಂ ಮಂಜು ಸ್ನೇಹ ಬಳಗದ ವತಿಯಿಂದ ಜೆಡಿಎಸ್ ಅಭ್ಯರ್ಥಿ ಪರ ಬೃಂದಾವನ ಬಡಾವಣೆಯಲ್ಲಿರುವ ಇಎಸ್ಐ ಆಸ್ಪತ್ರೆ ಆವರಣದಲ್ಲಿ ಪ್ರಚಾರ ನಡೆಸಲಾಯಿತು. ಎಸ್ಬಿಎಂ ಮಂಜು, ಅಧ್ಯಕ್ಷ ಮಹದೇವ, ಗಿರೀಶ್, ರಮೇಶ್, ವೆಂಕಟೇಶ್, ಬಾಬು, ಸುಧಾಕರ್, ಕಿರಣ್, ರಾಘವರೆಡ್ಡಿ, ಮಹದೇವ ಇದ್ದರು. ಜಿಪಂ ಮಾಜಿ ಅಧ್ಯಕ್ಷ ಭಾಗ್ಯ ಶಿವಮೂರ್ತಿ, ಬೆಳವಾಡಿ ಶಿವಮೂರ್ತಿ, ಶಿವಕುಮಾರ್ಸ್ವಾಮಿ, ರಾಮಚಂದ್ರ ಮತ್ತಿತರರು ಬೆಳವಾಡಿಯಲ್ಲಿ ಮತಯಾಚಿಸಿದರು.
ಪಕ್ಷೇತರ ಅಭ್ಯರ್ಥಿ ಮತಯಾಚನೆ
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬನ್ನೂರು ಕುಮಾರ್ ಸೋಮವಾರ ಮಿಷನ್ ಆಸ್ಪತ್ರೆ ಬಳಿಯಿಂದ ಪಾದಯಾತ್ರೆ ಆರಂಭಿಸಿದರು. ಅಶೋಕರಸ್ತೆ, ಹಳ್ಳದ ಕೇರಿ ಸೇರಿದಂತೆ ಇನ್ನಿತರೆಡೆಗಳಲ್ಲಿ ಮತಯಾಚಿಸಿದರು.
ಪ್ರತಾಪ ಸಿಂಹ ಮತಯಾಚನೆ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಅವರು ಬೆಳಗ್ಗೆ ಚಕ್ರವರ್ತಿ ಸೂಲಿಬೆಲೆ ಅವರ ನಿವಾಸಕ್ಕೆ ಭೇಟಿ ನೀಡಿ ಉಪಯಕುಶಲೋಪರಿ ವಿಚಾರಿಸಿದರು. ಬಳಿಕ ಕಾರ್ಯಕತರ ಜತೆಗೂಡಿ ಮಾಧವ ಕೃಪಾದಲ್ಲಿ ಆರ್ಎಸ್ಎಸ್ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದರು. ಬಳಿಕ ವಿದ್ಯಾರಣ್ಯಪುರಂನ್ಲಲಿರುವ ಮಾಜಿ ಸಚಿವ ಎಸ್.ಎ. ರಾಮದಾಸ್ ಕಚೇರಿಗೆ ಭೇಟಿ ನೀಡಿದರು. ಪಾಲಿಕೆ ಸದಸ್ಯ ಸ್ನೇಕ್ ಶ್ಯಾಮ್, ಮುಖಂಡರಾದ ವಿ. ಸೋಮಸುಂದರ್, ಜೋಗಿ ಮಂಜು, ವಿಕ್ರಮ್, ರಾಕೇಶ್ ಭಟ್ ಭಾಗವಹಿಸಿ ವಿವಿಧ ಬಡಾವಣೆಗೆ ತೆರಳಿ ಪ್ರಚಾರ ನಡೆಸಿದರು.
ಆಪ್ ಅಭ್ಯರ್ಥಿ ಪದ್ಮಮ್ಮ ಪ್ರಖರ ಪ್ರಚಾರ
ಮೈಸೂರು: ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಂ.ವಿ. ಪದ್ಮಮ್ಮ ಸೋಮವಾರ ನರಸಿಂಹರಾಜ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಬೆಳಗ್ಗೆ ತೆರೆದ ವಾಹನದಲ್ಲಿ ಹಳೆ ಆರ್ಎಂಸಿ ಬಳಿಯಿಂದ ರೋಡ್ ಶೋ ಆರಂಭಿಸಿದ ಅವರು, ಮಿಷನ್ ಆಸ್ಪತ್ರೆ, ಅಶೋಕ ರಸ್ತೆ, ಹಳ್ಳದಕೇರಿ, ಕೆ.ಟಿ. ಸ್ಟ್ರೀಟ್, ಸರಸ್ವತಿಪುರಂ, ಕುವೆಂಪುನಗರ, ಕೆ.ಜಿ.ಕೊಪ್ಪಲು, ಶಾರದಾದೇವಿನಗರ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿದರು. ಮುಖಂಡರಾದ ವಿನೋದ್, ಸರಿತಾ, ವಿಜಯಲಕ್ಷ್ಮಿ, ಲೋಕೇಶ್ ಇದ್ದರು. ಚೆನ್ನೈನ ಬಿ.ಎಸ್. ಅಬ್ದೂರ್ ರೆಹಮಾನ್ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಜಲೀಸ್ ಅಹಮ್ಮದ್ ಖಾನ್ ಬೆಂಬಲ ನೀಡಿದರು.