ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶ್ರಮಪಟ್ಟರೆ ಜೆಡಿಎಸ್‌ಗೆ ಜಯ

Srinivasa Murthy VN
Updated On : 15 Apr 2014, 12:41 pm

ಕ.ಪ್ರ.ವಾರ್ತೆ ಮೈಸೂರು ಏ. 14
ಮೈಸೂರು- ಕೊಡಗು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ ಅವರನ್ನು ಗೆಲ್ಲಿಸದಿದ್ದರೆ ನಾನು ಮೈಸೂರಿಗೆ ಕಾಲಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಶಪಥ ಮಾಡಿದ್ದಾರೆ.
ಭಾನುವಾರ ಶಾಂತಿನಗರದಲ್ಲಿ ನಡೆದ ಜೆಡಿಎಸ್- ಎಸ್‌ಡಿಪಿಐ ಚುನಾವಣಾ ಸಮಾವಶದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಜೆಡಿಎಸ್‌ಗೆ ಉತ್ತಮ ಬೆಂಬಲವಿದೆ. ಶಾಸಕರು, ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಪಕ್ಷದ ಸದಸ್ಯರೇ ಹೆಚ್ಚಿದ್ದಾರೆ. ತಮ್ಮಲ್ಲಿರುವ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಲ್ಲಿ ಕೆಲಸ ಮಾಡಿದರೆ ಜಯ ನಮ್ಮದಾಗುತ್ತದೆ. ಎಸ್‌ಡಿಪಿಐ ಕೂಡ ನಮಗೆ ಬೆಂಬಲಿಸಲಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ನಮಗೆ ಜನರ ಒಲವಿದೆ: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಕಾರ್ಪೋರೇಟ್ ಸಂಸ್ಥೆಗಳು ನೆರವು ನೀಡುತ್ತಿದೆ. ಪ್ರಾದೇಶಿಕ ಪಕ್ಷವಾದ ನಮಗೆ ಯಾರು ನೆರವು ನೀಡಲ್ಲ. ಆದರೆ, ಈ ರಾಜ್ಯದ ಜನರ ಒಲವಿದೆ ಎಂದ ಮೇಲೆ ನಮಗೆ ಹಣದ ಅವಶ್ಯಕತೆ ಇಲ್ಲ. ನಮ್ಮಲ್ಲಿರುವ ಶಕ್ತಿಯನ್ನು ಪ್ರದರ್ಶಿಸಿ ಬೇರೆ ಪಕ್ಷಗಳಿಗೆ ಉತ್ತರ ನೀಡಬೇಕು. ಈಗ ನನಗೆ ಅಗ್ನಿ ಪರೀಕ್ಷೆ ಎದುರಾಗಿದ್ದು, ಮೈಸೂರಿನಲ್ಲಿ ಇದೇ ನನ್ನ ಕೊನೆಯ ಭಾಷಣವಾಗಿದೆ. ಆದ್ದರಿಂದ ಕೈಮುಗಿದು ಕೇಳುತ್ತೇನೆ ದಯವಿಟ್ಟು ನಮಗೆ ಬೆಂಬಲ ನೀಡಿ ದೇವೇಗೌಡರು ಕೋರಿದರು.
ಸಿದ್ದುಗೆ ಅಧಿಕಾರ ಮದ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಧಿಕಾರ ಮದವೇರಿದೆ. ಕಾಂಗ್ರೆಸ್ ಸೇರಿ ಉತ್ತಮ ಸ್ಥಾನದಲ್ಲಿರುವ ಅವರಿಗೆ ಶಕ್ತಿ ತುಂಬಿದ್ದು, ಇದೇ ದೇವೇಗೌಡ, ಇದೇ ಜನತಾದಳ. ಅಲ್ಲಿ ಮೂಲ ಕಾಂಗ್ರಿಸ್ಸಿಗರಿಗೆ ಅನ್ಯಾಯವಾಗುತ್ತಿದೆ. ಎಂ. ರಾಜಶೇಖರಮೂರ್ತಿ ಬೆಳೆಯಲು ಬಿಡದ ಸಿದ್ದರಾಮಯ್ಯ ಒಂದು ಕಾಲದಲ್ಲಿ ವಿ. ಶ್ರೀನಿವಾಸಪ್ರಸಾದ್ ಅವರ ಜೆಡಿಎಸ್ ಸೇರ್ಪಡೆಯನ್ನು ವಿರೋಧಿಸಿದ್ದರು. ಇಂದು ಇಬ್ಬರೂ ಚೆನ್ನಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ನನ್ನ ಬದ್ಧತೆ ಅಭಿವೃದ್ಧಿಗೆ: ಜಾತಿ ಆಧಾರದ ಮೇಲೆ ನಾನು ಪಕ್ಷ ಕಟ್ಟಲಿಲ್ಲ. ಜಾತ್ಯಾತೀತತೆ ಬಗೆಗಿನ ನನ್ನ ಬದ್ಧತೆಯನ್ನು ಪ್ರಶ್ನಿಸುವ ನೈತಿಕತೆ ಇವರಿಗೆ ಇಲ್ಲ. ಕಾಂಗ್ರೆಸ್ ಆಡಳಿವಿದ್ದೂ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಇಂದು ಗೌರವದಿಂದ ತಲೆಎತ್ತಿಕೊಂಡು ತಿರುಗಾಡಲು ಆಗುತ್ತಿಲ್ಲ. ಅದಕ್ಕೆ ಜೀವಂತ ಉದಾಹರಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ ಎಂದು ಮಾರ್ಮಿಕವಾಗಿ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement