ಜೆ.ಕೆ. ಟೈರ್ಸ್ನಲ್ಲಿ ಮತದಾನ ಜಾಗೃತಿ
ಕ.ಪ್ರ.ವಾರ್ತೆ ಮೈಸೂರು ಏ. 15
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಜೆ.ಕೆ. ಟೈರ್ಸ್ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.
ಕಾರ್ಖಾನೆಯ ಮಾನವ ಸಂಪನ್ಮೂಲಾಧಿಕಾರಿ ಎಂ.ಕೆ. ಪ್ರಭುದೇವ್ ಮಾತನಾಡಿ, ಮತದಾನವು ಶ್ರೀಸಾಮಾನ್ಯನಿಗೆ ಸಂವಿಧಾನ ನೀಡಿರುವ ಹಕ್ಕಾಗಿದೆ.
ಮತದಾನ ಮಾಡಿ ಸುಭದ್ರ ಸರ್ಕಾರ ಆರಿಸಬೇಕು. ಪ್ರಜಾಪ್ರಭುತ್ವದಲ್ಲಿ ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುವನಾಣೆಗಳು ರಾಷ್ಟ್ರದ ಘನತೆ ಎತ್ತಿ ಹಿಡಿಯುತ್ತವೆ. ಯಾವುದೇ ಧರ್ಮ, ಜನಾಂಗ, ಜಾತಿ, ಮತ ನೋಡಿ ಮತ ನೀಡಬಾರದು ಎಂದು ತಿಳಿಸಿದರು.
ಎಚ್ಆರ್ಡಿ ಮುಖ್ಯ ವ್ಯವಸ್ಥಾಪಕ ಬಿ.ಎಸ್. ಶ್ರೀನಿವಾಸ್, ಉಪಾಧ್ಯಕ್ಷ ಉಮೇಶ್ ಕೆ. ಶೆಣೈ, ರೇಡಿಯಲ್ ಸ್ಥಾವರ ಉಪಾಧ್ಯಕ್ಷ ಜಿ. ರಾಜಗೋಪಾಲಯ್ಯ, ಸಿಎಸ್ಒ ತಾವಡೆ ಇದ್ದರು.