ಬಹಿರಂಗಕ್ಕೆ ತೆರೆ, ಅಂತರಂಗಕ್ಕೆ ಮೊರೆ
ಕ.ಪ್ರ.ವಾರ್ತೆ ಮೈಸೂರು ಏ. 15
ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆ ಬಹಿರಂಗ ಪ್ರಚಾರ ಮಂಗಳವಾರ ಸಂಜೆ ಅಂತ್ಯಗೊಂಡಿತು. ಕಡೆಯ ದಿನ ಎಲ್ಲ ಪಕ್ಷದ ಅಭ್ಯರ್ಥಿಗಳು ಬಿರುಸಿನಿಂದ ಪ್ರಚಾರ ನಡೆಸಿ ಮತಯಾಚಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಂಸದ ಎಚ್. ವಿಶ್ವನಾಥ್ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವಿವಿಧೆಡೆ ರೋಡ್ ಶೋ ಮೂಲಕ ಮತ ಯಾಚಿಸಿದರು. ಎನ್.ಆರ್. ಮೊಹಲ್ಲಾ, ಕೆಸರೆ, ರಾಜೀವ್ ನಗರ, ನಾಯ್ಡು ನಗರ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿದರು.
ನಗರಾಧ್ಯಕ್ಷ ಸಿ. ದಾಸೇಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಎಲ್. ರೇವಣಸಿದ್ದಯ್ಯ, ಮಾಜಿ ಮೇಯರ್ಗಳಾದ ದಕ್ಷಿಣಾಮೂರ್ತಿ, ಪುಷ್ಪಲತಾ ಚಿಕ್ಕಣ್ಣ, ಅಯೂಬ್ಖಾನ್, ಆರಿಫ್ ಹುಸೇನ್, ಎಂ.ಸಿ. ರಾಜೇಶ್ವರಿ ಪುಟ್ಟಸ್ವಾಮಿ ಭಾಗವಹಿಸಿದ್ದರು.
ಸೋಮವಾರ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮಕೃಷ್ಣ ನಗರದಲ್ಲಿರುವ ಸ್ವಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲದೆ, ಸ್ಥಳೀಯ ಸಚಿವರು, ಶಾಸಕರ ಹಾಗೂ ಮುಖಂಡರೊಂದಿಗೆ ಮುಖ್ಯಮಂತ್ರಿ ಸಭೆ ನಡೆಸಿದರು. ಮಂಗಳವಾರ ಬೆಳಗ್ಗೆ ಚಿಕ್ಕಮಗಳೂರಿಗೆಂ ತೆರಳಿದರು.
ಬಿಜೆಪಿ ಅಭ್ಯರ್ಥಿ ಪ್ರತಾಪ್ಸಿಂಹ ಅವರು ಮಾಜಿ ಸಚಿವ ಎಸ್.ಎ. ರಾಮದಾಸ್, ನಟರಾದ ಜಗ್ಗೇಶ್ ಅವರೊಂದಿಗೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದರು. ಸಂಸದ ಡಿ.ಬಿ. ಚಂದ್ರೇಗೌಡ ಸುದ್ದಿಗೋಷ್ಠಿ ನಡೆಸಿ, ಪ್ರತಾಪ್ಸಿಂಹಗೆ ಮತ ನೀಡುವಂತೆ ಕೋರಿದರು.
ಜೆಡಿಎಸ್ ಅಭ್ಯರ್ಥಿ ನ್ಯಾ. ಚಂದ್ರಶೇಖರಯ್ಯ ಅವರೊಂದಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಶಾಸಕ ಜಿ.ಟಿ. ದೇವೇಗೌಡ ಅವರು ಕೆ.ಜಿ. ಕೊಪ್ಪಲು ಸೇರಿದಂತೆ ವಿವಿಧೆಡೆ ರೋಡ್ ಶೋ ನಡೆಸಿದರು. ಜೆಡಿಎಸ್ ಪ್ರಚಾರಕ್ಕೆ ಎಸ್ಡಿಪಿಐ ಕಾರ್ಯಕರ್ತರು ಸಹ ಸಾಥ್ ನೀಡಿದರು.ಉಳಿದ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತಯಾಚಿಸಿದರು.
ಕಣದಲ್ಲಿರುವ ಅಭ್ಯರ್ಥಿಗಳು
ಎಚ್. ವಿಶ್ವನಾಥ್ ಕಾಂಗ್ರೆಸ್
ನ್ಯಾ. ಚಂದ್ರಶೇಖರಯ್ಯ ಜೆಡಿಎಸ್
ಪ್ರತಾಪ್ಸಿಂಹ ಬಿಜೆಪಿ
ಸಿ. ಮೋಹನ್ಕುಮಾರ್ ಬಿಎಸ್ಪಿ
ತಿಮ್ಮೇಗೌಡ ಸರ್ವ ಜನತಾ ಪಾರ್ಟಿ
ಡಿ.ಎಸ್. ನಿರ್ವಾಣಪ್ಪ ಸಿಪಿಐ (ಎಂಎಲ್)
ಎಂ.ವಿ. ಪದ್ಮಮ್ಮ ಆಮ್ ಆದ್ಮಿ ಪಾರ್ಟಿ
ಎಸ್.ಪಿ. ಮಹದೇವಪ್ಪ ಜೆಡಿಯು
ರತಿ ಪೂವಯ್ಯ ಕರುನಾಡು ಪಾರ್ಟಿ
ಹುಣಸೂರು ಕೆ. ಚಂದ್ರಶೇಖರ್ ಡೆಮಾಕ್ರಟಿಕ್ ಪ್ರಜಾಕ್ರಾಂತಿ ಪಾರ್ಟಿ ಸೆಕ್ಯೂಲರಿಸ್ಟ್
ಡಿ. ಈಶ್ವರ್ ತೊರೆಮಾವು ಪಕ್ಷೇತರ
ಬನ್ನೂರು ಕುಮಾರ್ ಪಕ್ಷೇತರ
ಎಂ.ಎಸ್. ಪ್ರವೀಣ್ ಪಕ್ಷೇತರ
ಭೋಜಣ್ಣ ಸೋಮಯ್ಯ ಪಕ್ಷೇತರ
ಎನ್. ಸಂಪತ್ತು ಪಕ್ಷೇತರ