ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮತದಾನ ಮಹತ್ವದ ಹಕ್ಕು

Srinivasa Murthy VN
Updated On : 16 Apr 2014, 1:14 am

ಮೈಸೂರು: ಲೋಕಸಭಾ ಚುನಾವಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಮತದಾನದ ಮಹತ್ವ ಸಾರುವ ಸಲುವಾಗಿ ಮತದಾನ ಜಾಗೃತಿ ಜಾಥಾವನ್ನು ಸರ್ಕಾರಿ ನೌಕರರು ಮಂಗಳವಾರ ನಡೆಸಿದರು.  
ಮತದಾರರ ಶಿಕ್ಷಣ ಹಾಗೂ ಜಾಗೃತಿ ಸಮಿತಿ, ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಮಹಾಜನ ಕಾಲೇಜು ವತಿಯಿಂದ ಏರ್ಪಡಿಸಿದ್ದ ಈ ಜಾಥಾವನ್ನು ಜಿಪಂ ಸಿಇಒ ಪಿ.ಎ. ಗೋಪಾಲ್ ಉದ್ಘಾಟಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಸ್. ಪಾಲಯ್ಯ, ವಾರ್ತಾ ಇಲಾಖೆಯ ಉಪನಿರ್ದೇಶಕ ಎ.ಆರ್. ಪ್ರಕಾಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ. ರಾಮು ಹಾಗೂ ಪದಾಧಿಕಾರಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಜನಪದ ಕಲಾವಿದರು ಹಾಡುಗಳ ಮೂಲಕ ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸಿದರು. ನಂತರ ನೌಕರರ ಭವನದಿಂದ ಹೊರಟ ಜಾಥಾವು  ಜಯಲಕ್ಷ್ಮೀಪುರಂನ ಮಹಾಜನ ಕಾಲೇಜಿನಲ್ಲಿ ಅಂತ್ಯಗೊಂಡಿತು.ಮುನ್ನ ನೌಕರರ ಭವನದಲ್ಲಿ ಸಮಾವೇಶಗೊಂಡ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಜಾತಿ ಬಿಡಿ, ಮೊದಲು ಮತದಾನ ಮಾಡಿ...
ಮೈಸೂರು: ಜಾತಿ ಬಿಟ್ಟು ಹೊರ ಬಂದು ವಿಶ್ವಮಾನವ  ಸಂದೇಶ ಸಾರುವುದರದೊಂದಿಗೆ ಉತ್ತಮ ಅಭ್ಯರ್ಥಿ ಆಯ್ಕೆ ಮಾಡುವಂತೆ ಲೇಖಕ ವಾ.ಚ. ಕೇಶವ ಮನವಿ ಮಾಡಿದ್ದಾರೆ. ಒಳ್ಳೆಯದು ಉಳಿಯಬೇಕಾದರೆ ಕೆಟ್ಟವರೊಂದಿಗೆ ಹೋರಾಡಲು ಸನ್ನದ್ಧರಾಗಿರಿ. ಕರ್ನಾಟಕದ ತೃಪ್ತಿಗಾಗಿ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸಿ. ಬುದ್ಧಿವಂತ ಮತದಾರರೇ, ಈ ಚುನಾವಣೆಯಲ್ಲಿ ಅತ್ಯುತ್ತಮ ತೀರ್ಪು ನೀಡುವಿರಾ... ನಿರೀಕ್ಷೆಯಲ್ಲಿ... ನಿಮ್ಮ ಮನೆಯ ರಹಸ್ಯ ತಿಳಿಸದೆ ಹೇಗಿರುತ್ತೀರೋ ಹಾಗೆಯೇ  ನಿಮ್ಮ ಗೌಪ್ಯ ಮತವನ್ನು ಯಾರಿಗೂ ಹೇಳದೆ ಸೌಮ್ಯದಿಂದಿರಿ. ಮುಗುಳ್ನಗೆಯಿಂದ ದೇಶವನ್ನು ನೋಡಿ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement