ಕೆ.ಆರ್. ನಗರದಲ್ಲಿ 248 ಮತಗಟ್ಟೆ
ಕೆ.ಆರ್. ನಗರ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಬುಧವಾರ ಬೆಳಗ್ಗೆ ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಗಟ್ಟೆ ಸಿಬ್ಬಂದಿಗೆ ಮತಕೇಂದ್ರಗಳ ಸಲಕರಣೆ ನೀಡಿ ಕಳುಹಿಸಲಾಯಿತು.
ಕ್ಷೇತ್ರದಲ್ಲಿ 248 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಇವುಗಳಲ್ಲಿ ಅತಿಸೂಕ್ಷ್ಮ 33, ಸೂಕ್ಷ್ಮ 94 ಮತ್ತು 121 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಚುನಾವಣಾ ಶಿರಸ್ತೇದಾರ್ ವೈ.ಕೆ. ಗುರುಪ್ರಸಾದ್ ಮಾಹಿತಿ ನೀಡಿದರು. 1,116 ಮಂದಿ ಸರ್ಕಾರಿ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಂಡಿದ್ದು, 325 ಪೊಲೀಸ್ ಸಿಬ್ಬಂದಿ, ಒಂದು ತುಕಡಿ ಕೆಎಎಸ್‌ಆರ್‌ಪಿ, 30 ಮಂದಿ ಸಿಎಸ್‌ಎಫ್ ಮತ್ತು 120 ಮಂದಿ ಗೃಹರಕ್ಷಕ ದಳ ನಿಯೋಜಿಸಲಾಗಿದ್ದು, ಡಿವೈಎಸ್ಪಿ ಶ್ರೀಹರಿ ಬರಗೂರು ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.
ಮನೆ-ಮನೆಗೆ ಕಾರ್ಯಕರ್ತರ ಲಗ್ಗೆ
ಕೆ.ಆರ್. ನಗರ: ಮಂಡ್ಯ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಬಿ. ಶಿವಲಿಂಗಯ್ಯ ಪರ ತಾಲೂಕು ಬಿಜೆಪಿ ಮುಖಂಡ ಮಿರ್ಲೆ ಶ್ರೀನಿವಾಸಗೌಡ ಮತ್ತು ಪಕ್ಷದ ಪದಾಧಿಕಾರಿಗಳು ಪಟ್ಟಣದಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ ಮಾಡಿದರು. ಙಮುಖಂಡರಾದ ಶಿವಪ್ರಸಾದ್, ಲೋಕೇಶ್, ಸಂತೋಷ, ನಂಜುಂಡ, ಮೋಹನಕುಮಾರ್, ರವೀಶ್, ಮಿರ್ಲೆ ಶಿವಣ್ಣ ಇದ್ದರು.