ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಖಾಸಗಿ, ಸಹಕಾರದಲ್ಲೂ ಮೀಸಲು ಅಗತ್ಯ

Srinivasa Murthy VN
Updated On : 18 Apr 2014, 11:46 am

ಕ.ಪ್ರ.ವಾರ್ತೆ ಕೆ.ಆರ್. ನಗರ ಏ. 18
ಖಾಸಗಿ ಮತ್ತು ಸಹಕಾರ ಕ್ಷೇತ್ರದಲ್ಲಿ ದಲಿತರಿಗೆ ಮೀಸಲಾತಿ ನೀಡಲು ಯಾವುದೇ ಸರ್ಕಾರಗಳು ಈವರೆಗೆ ಕಾನೂನು ರೂಪಿಸಿದಿರುವುದರಿಂದ ದಲಿತರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ದಲಿತ ಮುಖಂಡ ಅಚ್ಯುತಾನಂದ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಅಚ್ಯುತ ಸ್ನೇಹ ಬಳಗದ ಕಚೇರಿಯಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 123ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಭಾವಚಿತ್ರವನ್ನು ರಸ್ತೆಗಳಲ್ಲಿ ತೋರ್ಪಡಿಕೆಗೆ ಹಾಕುವುದರ ಬದಲು ಮನೆಯಲ್ಲಿ ಮತ್ತು ಮನಸ್ಸಿನಲ್ಲಿ ಇಟ್ಟು ಪೂಜಿಸಿ ಅವರ ಕನಸನ್ನು ನನಸು ಮಾಡಲು ದಲಿತ ಯುವಕರು ಶಿಕ್ಷಿತರಾಗಿ ಸ್ವಾಭಿಮಾನದ ಬದುಕು ನಡೆಸಬೇಕೆಂದು ಅವರು ಕರೆ ನೀಡಿದರು.
ಬಳಗದ ಅಧ್ಯಕ್ಷ ಎಂ.ತಮ್ಮಣ್ಣ, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್. ಸ್ವಾಮಿ ಮಾತನಾಡಿದರು. ಮಾಜಿ ಸದಸ್ಯ ನಂಜುಂಡ, ಮಾಜಿ ಪುರಸಭಾ ಅಧ್ಯಕ್ಷ ಡಿ.ಕಾಂತರಾಜು, ಮುಖಂಡರಾದ ನಿಂಗರಾಜು, ಪಿ.ಡಿ.ಚಲುವರಾಜು, ಬಾಲಕೃಷ್ಣ, ಜವರಯ್ಯ, ಪ್ರಭಾಕರ್, ನಂದೀಶ್, ರಂಗಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement