ಸಾಹಿತಿ ದೇಜಗೌ ಮತದಾನ
ತೊಂಬತ್ತೇಳು ವರ್ಷ ವಯಸ್ಸಿನ ಹಿರಿಯ ಸಾಹಿತಿ ಪ್ರೊ.ದೇಜಗೌ ಅವರು ಜಯಲಕ್ಷ್ಮೀಪುರಂನ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಮತದಾನ ಮಾಡಿದರು. ನಂತರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಮಹತ್ವದ ಹಕ್ಕು. ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಬೇಕು. ಮತದಾನ ಮಾಡದಿರುವುದು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದಂತೆ. ಆದ್ದರಿಂದ ಎಲ್ಲರೂ ಮತ ಚಲಾಯಿಸಬೇಕು ಎಂದರು. ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿ ಶಸ್ತ್ರಚಿಕಿತ್ಸೆ ಪಡೆದಿರುವ ಇಳಿವಯಸ್ಸಿನ ದೇಜಗೌ ಹುರುಪಿನಿಂದ ಮತದಾನ ಮಾಡಿದ್ದು, Ú ಮತದಾರರಿಗೆ ಮಾದರಿ.
ಬುಲೆಟ್ನಲ್ಲಿ ಬಂದ ಶಾಸಕ ವಾಸು
ಚಾಮರಾಜ ಕ್ಷೇತ್ರದ ಶಾಸಕ ವಾಸು ಅವರು ಬುಲೆಟ್ ಸವಾರಿ ಮಾಡಿಕೊಂಡು ಮತದಾನ ಕೇಂದ್ರಕ್ಕೆ ಬಂದದ್ದು ಸಾರ್ವಜನಿಕರ ಗಮನ ಸೆಳೆಯಿತು. ಜಯಲಕ್ಷ್ಮೀಪುರಂನ ತಮ್ಮ ಮನೆಯಿಂದ ಬೆಳಗ್ಗೆ ಒಬ್ಬರೇ ಬುಲೆಟ್ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಸಮೀಪ ಇರುವ ಮಹಾಜನ ಕಾಲೇಜಿಗೆ ಬಂದು, ಸಾಮಾನ್ಯರಂತೆ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಅವರು ವಾಹನ ಸವಾರಿ ಮಾಡುವ ವೇಳೆ ಮರೆಯದೆ ಹೆಲ್ಮೆಟ್ ಧರಿಸಿ ಕಾನೂನಿಗೆ ತೋರಿದ ಗೌರವ ಅನುಕರಣೀಯ.
ಹದಿನೈದು ಬೂತ್ಗಳಲ್ಲಿ ಮತದಾನದ ನೇರ ಪ್ರಸಾರ
ಮೈಸೂರು: ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹದಿನೈದು ಬೂತ್ಗಳಲ್ಲಿ ವೀಡಿಯೋ ಸ್ಟ್ರೀಮಿಂಗ್ ವೆಬ್ಕಾಸ್ಟಿಂಗ್ ಮತದಾನದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಶೋಕಪುರಂ 13ನೇ ಕ್ರಾಸ್ನ ಸಮುದಾಯ ಭವನ, ಶ್ರೀರಾಂಪುರದ ಬಿಜಿಎಸ್ ಬಾಲಜಗತ್ ಶಾಲೆ, ಆದಿಚುಂಚನಗಿರಿ ರಸ್ತೆಯ ಶ್ರೀ ಕಾಗಿನೆಲೆ ಮಹಾಸಂಸ್ಥಾನ, ಅಶೋಕಪುರಂ ಸಿದ್ದಾರ್ಥ ಹಾಸ್ಟೆಲ್ನ ಮತಗಟ್ಟೆ, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶದ ಸೇಂಟ್ ಥಾಮಸ್ ಕಾನ್ವೆಂಟ್, ಮಾನಂದವಾಡಿ ರಸ್ತೆಯ ರೀಟಾ ಹಿರಿಯ ಪ್ರಾಥಮಿಕ ಶಾಲೆ, ಚಾಮರಾಜ ಜೋಡಿ ರಸ್ತೆಯ ಅಂಬಳೆ ಅಣ್ಣಯ್ಯ ಪಂಡಿತ್ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆ, ಬಸವೇಶ್ವರ ರಸ್ತೆ 3ನೇ ತಿರುವಿನ ಆಯುರ್ವೇದ ಆಸ್ಪತ್ರೆ, ಲಕ್ಷ್ಮೀಪುರಂನ ಅರಮನೆ ಪದ್ಮರಾಜ ಪಂಡಿತರ ಜೈನ ಬ್ರಾಹ್ಮಣರ ವಿದ್ಯಾರ್ಥಿ ನಿಲಯ, ಲಕ್ಷ್ಮಿಪುರಂ ಗೋಪಾಲಸ್ವಾಮಿ ಶಿಶುವಿಹಾರ, ದೇವಯ್ಯನಹುಂಡಿ ಹೊಸ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀರಾಂಪುರ 2ನೇ ಹಂತದ ವಿಜಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಕುರುಬಾರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಈ ವೀಡಿಯೋ ಸ್ಟ್ರೀಮಿಂಗ್ ವೆಬ್ಕಾಸ್ಟಿಂಗ್ ಮತದಾನದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.
ಬಹಿಷ್ಕಾರಕ್ಕೆ ಯತ್ನ: ಮನವೊಲಿಕೆ
ಮೈಸೂರು: ಕೆ.ಆರ್. ನಗರ ತಾಲೂಕಿನ ಕೆಂಚನಹಳ್ಳಿಯಲ್ಲಿ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿತಾದರು ನಂತರ ಚುನಾವಣೆ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಗ್ರಾಮಸ್ಥರನ್ನು ಮನವೊಲಿಸಿ ಮತದಾನ ಮಾಡಿಸಿದರು. ತಮ್ಮ ಊರಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಯಾವ ಜನಪ್ರತಿನಿಧಿಯೂ ಬಂದು ನೋಡಿಲ್ಲ. ನಾವು ಯಾಕೆ ಮತ ಹಾಕಬೇಕು ಎಂದು ಪಟ್ಟು ಹಿಡಿದಿದ್ದರು. ಬೆಳಗ್ಗೆ 7ಕ್ಕೆ ಮತದಾನ ಪ್ರಕ್ರಿಯೆ ಆರಂಭವಾದರೂ ಸಹ 10.30 ರವರೆಗೂ ಗ್ರಾಮಸ್ಥರು ತಟಸ್ಥರಾಗಿದ್ದರು. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಸಿಗೊಳಿಸಿದರು. ಇನ್ನು ಚುಂಚನಕಟ್ಟೆಯಲ್ಲಿ 90 ವರ್ಷ ಮೀರಿದ ವಯೋವೃದ್ಧೆ ರಾಜಮ್ಮ ಅವರು ತಮ್ಮ ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದರು. ನನಗೆ ಮತದಾನ ಮಾಡಲು ಅವಕಾಶ ನೀಡಿದ ದಿನಗಳಿಂದಲೂ ಮತದಾನ ಮಾಡುತ್ತಿದ್ದೇನೆ. ನಾನು ಜೀವಿಸಿರುವವರೆಗೂ ಮಾಡುತ್ತೇನೆ. ನನ್ನ ಮೊಮ್ಮಗ ಕರೆದುಕೊಂಡು ಬಂದು ಸಹಾಯ ಮಾಡಿದ ಎಂದು ಇಷ್ಟು ವರ್ಷಗಳ ಅನುಭವ ಹೇಳಿಕೊಂಡರು.
2 ಕಡೆ ಚುನಾವಣೆ ಬಹಿಷ್ಕಾರ
ಬೈಲಕುಪ್ಪೆ: ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ ಎಂದು ಆರೋಪಿಸಿ ಡೋಂಗ್ರಿ ಗರಾಸಿಯ ಕಾಲೋನಿ, ಕೊಪ್ಪ ಗ್ರಾಮಸ್ಥರು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿದ ಘಟನೆ ಗುರುವಾರ ಜರುಗಿತು. ತಾಲೂಕಿನ ಕೊಪ್ಪ ಗ್ರಾಪಂ ವ್ಯಾಪ್ತಿಗೆ ಸೇರಿದ ಡೋಂಗ್ರಿ ಗರಸಿಯ ಕಾಲೋನಿಯಲ್ಲಿ 250ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, 105 ರಿಂದ 110 ಮತದಾರರಿದ್ದು, ಕಳೆದ 15 ವರ್ಷಗಳಿಂದ ನಮ್ಮ ಕಾಲೋನಿಯ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಯಾರೊಬ್ಬರೂ ಭೇಟಿ ನೀಡಿಲ್ಲ. ಆದ್ದರಿಂದ ಮುಂದಿನ ಯಾವುದೇ ಚುನಾವಣೆಯಲ್ಲೂ ಸಹ ನಾವು ಮತ ಚಲಾಯಿಸುವುದಿಲ್ಲ ಎಂದು ಕಾಲೋನಿಯ ಮುಖಂಡ ಧರ್ಮ ಮತ್ತು ಗ್ರಾಮಸ್ಥರು ಪಟ್ಟು ಹಿಡಿದರು. ತಹಸೀಲ್ದಾರ್ ಎಸ್.ಪಿ. ಮೋಹನ್, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎನ್. ಮಹದೇವಸ್ವಾಮಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೆ.ಟಿ. ನಾರಾಯಣ, ಉಪ ತಹಸೀಲ್ದಾರ್ ರವಿಶಂಕರ್, ಸಬ್ ಇನ್ಸ್ಪೆಕ್ಟರ್ ಮುದ್ದುಮಹದೇವ, ಗ್ರಾಪಂ ಅಭಿವೃದ್ಧಿ ಅಧಿಕಾರಿ ರವಿ ಗ್ರಾಮಸ್ಥರನ್ನು ಭೇಟಿ ಮಾಡಿ ಮತ ಚಲಾಯಿಸುವಂತೆ ಮನವೊಲಿಸಲು ಯತ್ನಿಸಿದರೂ ಗ್ರಾಮಸ್ಥರು ಪಟ್ಟನ್ನು ಸಡಿಲಿಸಲಿಲ್ಲ.
ಮತದಾನದ ಬಳಿಕ ವೃದ್ಧೆ ಸಾವು
ಮೈಸೂರು: ಮತ ಚಲಾಯಿಸಿದ ಬಳಿಕ ವೃದ್ಧೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಗ್ರಹಾರ ಸಮೀಪದ ಉತ್ತರಾದಿ ಮಠದ ರಸ್ತೆ ನಿವಾಸಿ ನಂಜಮ್ಮ (70) ಮೃತಪಟ್ಟ ವೃದ್ಧೆ. ಇವರು ಸಮೀಪದ ಶ್ರೀಕಾಂತ ವಿದ್ಯಾಸಂಸ್ಥೆಯಲ್ಲಿ ಮತಚಲಾಯಿಸಿ ಮನೆಗೆ ಹಿಂದಿರುಗುವಾಗ ಎದೆನೋವು ಕಾಣಿಸಿಕೊಂಡು ರಸ್ತೆಯಲ್ಲಿಯೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಪಿರಿಯಾಪಟ್ಟಣದಲ್ಲಿ ಶಾಂತಿಯುತ ಮತ
ಪಿರಿಯಾಪಟ್ಟಣ: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೈಸೂರು- ಕೊಡಗು ಲೋಕಸಭಾ ಚುನಾವಣೆಗೆ ಶಾಂತಿಯುತ ಮತದಾನ ನಡೆಯಿತು. ತಾಲೂಕಿನ ಕೊಪ್ಪ ಗ್ರಾಪಂಗೆ ಸೇರಿದ ಮತಗಟ್ಟೆ ಸಂಖ್ಯೆ 110ಕ್ಕೆ ಒಳಪಡುವ ಡುಂಗ್ರಿಗೆರಾಸಿಯಾ ಕಾಲೋನಿಯ ನಿವಾಸಿಗಳು ಮಾತ್ರ ಮೂಲಭೂತ ಸೌಲಭ್ಯದ ಬೇಡಿಕೆ ಇಟ್ಟು ಮತದಾನದಿಂದ ದೂರ ಉಳಿದರಾದರೂ 110ಕ್ಕೆ ಒಳಪಡುವ ಕೊಪ್ಪ ಗ್ರಾಮಸ್ಥರು ಮತದಾನ ಮಾಡಿದ್ದಾರೆ. ಉಳಿದಂತೆ ಚೌಡೇನಹಳ್ಳಿ, ಉತ್ತೇನಹಳ್ಳಿ ಕಾಲೋನಿ ಹಾಗೂ ಬೆಮ್ಮತ್ತಿ ಗ್ರಾಮಗಳಲ್ಲಿ ಚುನಾವಣಾ ಬಹಿಷ್ಕಾರದ ಕೂಗು ಕೇಳಿಬಂತಾದರೂ ಅಧಿಕಾರಿಗಳು ಹಾಗೂ ಕೆಲವು ರಾಜಕಾರಣಿಗಳ ಮನವಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತದಾನ ಮಾಡಿದ್ದಾರೆ.
ಶಾಸಕ ವೆಂಕಟೇಶ್ ಮತದಾನ
ಕಿತ್ತೂರು: ಶಾಸಕ ಕೆ.ವೆಂಕಟೇಶ್ ತಮ್ಮ ಸ್ವಗ್ರಾಮವಾದ ಕಿತ್ತೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಮತಗಟ್ಟೆ ಸಂಖ್ಯೆ 47ರಲ್ಲಿ ಗುರುವಾರ ಮತದಾನ ಮಾಡಿದರು. ನಂತರ ಅವರು ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಸಾಧನೆಗಳೇ ನಮ್ಮ ಅಭ್ಯರ್ಥಿ ಎಚ್.ವಿಶ್ವನಾಥ್ ಗೆಲವಿಗೆ ಸಹಕಾರಿಯಾಗಲಿದ್ದು, ಈ ಕ್ಷೇತ್ರದಲ್ಲಿ ವಿಶ್ವನಾಥ್ಗೆ ಹೆಚ್ಚು ಮತ ಗಳಿಸಲಿದ್ದಾರೆ ಎಂದು ತಿಳಿಸಿದರು. ಮುಖಂಡರಾದ ಕೆ.ಎಸ್. ದಿನೇಶ್ಗೌಡ, ಕೆ.ಎಸ್. ಕೃಷ್ಣೇಗೌಡ, ಮಲ್ಲೇಶ, ರಾಮೇಗೌಡ, ಅಶ್ವಥ್, ಮಲ್ಲೇಗೌಡ ಭಾಗವಹಿಸಿದ್ದರು.