ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಾತಿ ನಿರ್ಮೂಲನೆಗೆ ಹೋರಾಟ

Srinivasa Murthy VN
Updated On : 18 Apr 2014, 11:44 am

ಕ.ಪ್ರ.ವಾರ್ತೆ ಮೈಸೂರು ಏ. 18
ಅಂಬೇಡ್ಕರ್ ಅವರು ಜಾತಿ ನಿರ್ಮೂಲನೆಗೆ ಮೂರು ಹಂತ ಕಾರ್ಯಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಹೋರಾಟ ಮಾಡಿದರು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಜೆ. ಸೋಮಶೇಖರ್ ಹೇಳಿದರು.
ದಕ್ಷಿಣ ಪ್ರಾದೇಶಿಕ ಭಾಷಾ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 123ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಇತರೆ ಜನಾಂಗದ ನಾಯಕರು ಬ್ರಿಟಿಷರ ಜಾಗದಲ್ಲಿ ತಾವು ಬಂದು ಕೂಡಬೇಕೆಂಬ ಉದ್ದೇಶದಿಂದ ಹೋರಾಟ ಮಾಡಿದರು ಎಂದು ತಿಳಿಸಿದರು. ಉನ್ನತ ವರ್ಗದವರು ಸಮಾಜವನ್ನು ಸೀಳುಸೀಳಾಗಿ ವಿಂಗಡಿಸಿದ್ದಾರೆ. ಆ ಸೀಳುಗಳನ್ನು ಒಗ್ಗೂಡಿಸುವ ಕೆಲಸ ಅಂಬೇಡ್ಕರ್ ಅವರು ಮಾಡಲು ಹೊರಟರು. ಒಂದು ಕಡೆ ಜಾತಿ ಪದ್ಧತಿಯ ನಿರ್ಮೂಲನೆ ಮಾಡಬೇಕೆಂದು ಪಣ ತೊಟ್ಟರೆ, ಮತ್ತೊಂದು ಕಡೆ ಜಾತಿ ಪದ್ಧತಿಯ ಆಚರಣೆ ತಲೆ ಎತ್ತುತ್ತಿದೆ. ಇಂತವರ ವಿರುದ್ಧ ಸಮಾಜದ ಜನರು ಧ್ವನಿ ಎತ್ತುವುದಿಲ್ಲ ಎಂದು ಅವರು ವಿಷಾದಿಸಿದರು. ಕೇಂದ್ರದ ಕನ್ನಡ ಅಧ್ಯಾಪಕ ಡಾ.ಸಣ್ಣಪಾಪಯ್ಯ ಮಾತನಾಡಿದರು. ತೆಲುಗು ಪ್ರಶಿಕ್ಷಣಾರ್ಥಿ ಮಹೇಶ್ ಸ್ವಾಗತಿಸಿದರು. ಮಲಯಾಳಂ ಪ್ರಶಿಕ್ಷಣಾರ್ಥಿ ರಾಜೇಶ್ ವಂದಿಸಿದರು.

ನೌಕರರಿಗೆ ನಾಳೆ ಕ್ರಿಕೆಟ್ ಪಂದ್ಯಾವಳಿ
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಪ.ಜಾತಿ, ಪ.ಪಂಗಡ ನೌಕರರ ಸಂಘವು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಏ.20 ರಂದು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದೆ.
ಮಹಾರಾಜ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಏ.20ರ ಬೆಳಗ್ಗೆ 8ಕ್ಕೆ ನಡೆಯುವ ಈ ಪಂದ್ಯಾವಳಿಯನ್ನು ಪ್ರಾದೇಶಿಕ ಹೆಚ್ಚುವರಿ ಆಯುಕ್ತ ಎಂ.ಆರ್. ರವಿ ಮತ್ತು ಡಿಸಿಪಿ ಎಂ.ಎಂ. ಮಹದೇವಯ್ಯ ಉದ್ಘಾಟಿಸುವರು. ಕೆಎಸ್ಸಾರ್ಟಿಸಿ, ಬಿಎಸ್‌ಎನ್‌ಎಲ್, ಎಲ್‌ಐಸಿ ಸೇರಿದಂತೆ ಅನೇಕ ಕೇಂದ್ರ ಸರ್ಕಾರಿ, ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳು ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಎಂದು ಸಂಘದ ಅಧ್ಯಕ್ಷ ಬಿ.ಎಸ್.ಸುಬ್ರಮಣ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂದು ಓವಲ್ ಮೈದಾನದಲ್ಲಿ ಪಾಲಿಕೆಯ ಎಲ್ಲಾ ನೌಕರರು ಮತ್ತು ಅವರ ಕುಟುಂಬ ವರ್ಗದವರಿಗೆ ವಿವಿಧ ಆಟೋಟ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಏ.28 ರಂದು ಪಾಲಿಕೆ ಆವರಣದಲ್ಲಿ ನಾರಾಯಣ ಹೃದಯಾಲಯ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಸುರೇಂದ್ರಕುಮಾರ್, ಖಜಾಂಚಿ ಲೋಕೇಶ್, ಸಂಚಾಲಕ ಜಿ. ಶಿವಸಿದ್ದು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement