ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಭಾರಿ ಮಳೆಗೆ ನೆಲಕಚ್ಚಿತು ಬೆಳೆ

Srinivasa Murthy VN
Updated On : 20 Apr 2014, 10:24 am

ಕ.ಪ್ರ.ವಾರ್ತೆ ಹುಣಸೂರು ಏ. 20
ತಾಲೂಕಿನಾದ್ಯಂತ ಶನಿವಾರ ರಾತ್ರಿ ಸುರಿದ ಸಿಡಿಲು- ಗುಡುಗು, ಬಿರುಗಾಳಿ ಸಹಿತ ಮಳೆಗೆ ಬಿದ್ದಿದ್ದು, ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ನಷ್ಟ ಉಂಟಾಗಿದೆ.
ತಾಲೂಕಿನ ಬಿಳಿಕೆರೆ ಹೋಬಳಿಯಲ್ಲಿ  ಹತ್ತಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ವಿದ್ಯುತ್ ತಂತಿಗಳು ಮುರಿದು ಬಿದ್ದಿವೆ. ಧವಸ ಧಾನ್ಯಗಳು ಮಳೆ ನೀರಿಗೆ ಹಾನಿಯಾಗಿವೆ. ದೇವಸ್ಥಾನದ ಛಾವಣಿ ಹಾರಿ ಹೋಗಿವೆ. ಸಿಡಿಲು ಬಡಿದು, ಅದೃಷ್ಟವಶಾತ್ ಮನೆಯೊಳಗಿದ್ದ ದಂಪತಿ ಅಪಘಡದಿಂದ ಪಾರಾಗಿದ್ದಾರೆ.
ಚೋಳೆನಹಳ್ಳಿ ಗ್ರಾಮದ ಹೊಲದಲ್ಲಿ ಮನೆ ನಿರ್ಮಿಸಿಕೊಂಡಿದ್ದ ಸಣ್ಣೇಗೌಡರಿಗೆ ಸೇರಿದ ಮನೆಗೆ ಸಿಡಿಲು ಬಡಿದು ಗೋಡೆಗಳು ಹಾನಿಯಾಗಿವೆ. ಕಲ್ನಾರು ಶೀಟ್‌ಗಳು ಸಂಪೂರ್ಣ ಹಾರಿ ಹೋಗಿವೆ. ಇದೇ ರೀತಿ ಹೊಸರಾಮೇನಹಳ್ಳಿಯ ನಿಂಗರಾಜಮ್ಮ ಅವರಿಗೆ ಸೇರಿದ ಮನೆಯ ಛಾವಣಿ ಬಿರುಗಾಳಿಗೆ ಸಿಲುಕಿ ಹಾನಿಯಾಗಿವೆ. ಇದೇ ಗ್ರಾಮದ ಮಾರಮ್ಮ ದೇವಸ್ಥಾನದ ಕಲ್ನಾರ್‌ಶೀಟ್‌ಗಳು ಸಹ ಗಾಳಿಯಲ್ಲಿ ತೂರಿಕೊಂಡು ಹೋಗಿವೆ.
ತುಂಡಾದ ವಿದ್ಯುತ್ ತಂತಿ: ಪಟ್ಟಣದ ಮಂಜುನಾಥ ಬಡಾವಣೆಯಲ್ಲಿ ಬಿರುಗಾಳಿಗೆ ಸಿಲುಕಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಅಲ್ಲದೇ ಪಟ್ಟಣದ ಸುತ್ತಮುತ್ತಲಿನ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿ ಉಂಟಾಗಿದ್ದು, ರಾತ್ರಿಯಿಡಿ ವಿದ್ಯುತ್ ಕಡಿತಗೊಂಡಿತ್ತು. ಭಾನುವಾರ ಬೆಳಗ್ಗೆ ವಿದ್ಯುತ್ ಸಂಪರ್ಕ ಬಂದರೂ ದುರಸ್ತಿ ನೆಪದಲ್ಲಿ ಸಂಜೆಯವರೆಗೂ ಆಗಾಗ್ಗೆ ಕೈಕೊಡುತ್ತಿತ್ತು. ಇದರಿಂದ ನಾಗರಿಕರು ತತ್ತರಿಸಿದ್ದಾರೆ.
ಮಳೆಗೆ ಹಾನಿಗೀಡಾದ ಚೋಳೆನಹಳ್ಳಿ ಹಾಗೂ ಇತರೆಡೆಗೆ ಶಾಸಕ ಎಚ್.ಪಿ. ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ನೊಂದವರಿಗೆ ವೈಯಕ್ತಿಕವಾಗಿ ನೆರವು ನೀಡಿ ಸಂತೈಸಿದರು. ತಕ್ಷಣವೇ ಪ್ರಕೃತಿವಿಕೋಪ ನಿಧಿಯಡಿಯಲ್ಲಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಬಿಳಿಕೆರೆ ರಾಜಸ್ವ ನಿರೀಕ್ಷಕ ನಿಸಾರ್ ಅಹ್ಮದ್, ಗ್ರಾಮಲೆಕ್ಕಾಧಿಕಾರಿ ಪ್ರಸನ್ನ ಭೇಟಿ ನೀಡಿ ಮಹಜರು ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement