ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಯೋಗಭೂಷಣ ಪ್ರಶಸ್ತಿ ಪ್ರದಾನ

Srinivasa Murthy VN
Updated On : 20 Apr 2014, 10:26 am

ಕ.ಪ್ರ.ವಾರ್ತೆ ಮೈಸೂರು ಏ. 20
ಯೋಗ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರಿಗೆ ಯೋಗಭೂಷಣ ಪ್ರಶಸ್ತಿ ನೀಡಿ ಭಾನುವಾರ ಗೌರವಿಸಲಾಯಿತು.
ಮಹಾರಾಜ ಸಂಸ್ಕೃತ ಪಾಠ ಶಾಲೆಯ ಸಭಾಂಗಣದಲ್ಲಿ ಹಿಮಾಲಯ ಯೋಗ ಪ್ರತಿಷ್ಠಾನ ಹಾಗೂ ಮೈಸೂರು ಯೋಗ ಶಾಲಾ ಸಂಯುಕ್ತಾಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಜಿಎಸ್‌ಎಸ್ ಯೋಗಿಕ್ ಫೌಂಡೇಷನ್ ಸಂಸ್ಥಾಪಕ ಶ್ರೀಹರಿ ಗುರೂಜಿ ಉದ್ಘಾಟಿಸಿದರು.
ಯೋಗ ಸಾಧಕರಾದ ಎಸ್.ವಿ. ವೆಂಕಟೇಶಯ್ಯ, ಟಿ.ಜಲೇಂದ್ರ ಕುಮಾರ್, ಶೈಲಜಾ ಲೋಕನಾಥ್, ಜಿ. ನಂದಿನಿ, ಸಿ.ರಮೇಶ್ ಹಾಗೂ ಬಾಲಪ್ರತಿಭೆ ಎಸ್. ಪುರುಷೋತ್ತಮ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯೋಗನರಸಿಂಹಸ್ವಾವು ದೇವಸ್ಥಾನದ ಸಂಸ್ಥಾಪಕ ಡಾ.ಭಾಷ್ಯಂ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್ ಸನ್ಮಾನಿತರನ್ನು ಅಭಿನಂದಿಸಿದರು. ವಿವೇಕಾನಂದ ಅಷ್ಟಾಂಗ ಯೋಗ ಸಂಶೋಧನಾ ಕೇಂದ್ರದ ಸಂಸ್ಥಾಪಕ ಡಾ.ಪಿ.ಎನ್. ಗಣೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಯೋಗ ಸಂಘದ ಅಧ್ಯಕ್ಷ ವಿ. ಸೋಮಸುಂದರ್, ಉದ್ಯಮಿ ಟಿ.ಎಸ್. ದೀಪಕ್ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಸಭಿಕರಿಗೆ ಆಯುರ್ವೇದ ತಜ್ಞ ಡಾ.ಎ.ಎಸ್. ಚಂದ್ರಶೇಖರ್ ಯೋಗ ಪ್ರತಿಜ್ಞೆ ಬೋಧಿಸಿದರು.

ಚಮ್ಮಾರನ ಹೆಂಡತಿ ನಾಟಕ ಪ್ರದರ್ಶನ
ಮೈಸೂರು: ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಲೋರ್ಕಾನ ದ ಶೂ ಮೇಕರ್ಸ್ ಪ್ರಾಡಿಜಿಯಸ್ ವೈಫ್ ನಾಟಕ ಆಧಾರಿತ ಚಮ್ಮಾರನ ಹೆಂಡತಿ ಎಂಬ ನಾಟಕ ಅಭಿನಯಿಸಿದರು. ಕನ್ನಡಕ್ಕೆ ಕೆ.ವಿ. ಅಕ್ಷರ ತಂದಿದ್ದು, ಎಚ್.ಕೆ. ದ್ವಾರಕನಾಥ್ ರಂಗವಿನ್ಯಾಸಗೊಳಿಸಿದ್ದಾರೆ. ಗಣೇಶ ಮರಕಾಲ, ಸತೀಶ್ ತಿಪಟೂರು ನಿರ್ದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement