ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ

Srinivasa Murthy VN
Updated On : 20 Apr 2014, 10:25 am

ಕ.ಪ್ರ.ವಾರ್ತೆ ಸರಗೂರು ಏ. 20
ಸರಗೂರು ಪಟ್ಟಣದಲ್ಲಿ ಸಡಗರ ಸಂಭ್ರಮದ ಶ್ರೀರಾಮ ಛಭಿಷೇಕ ನಡೆಯಿತು.
ಶ್ರೀರಾಮನವಮಿ ಅಂಗವಾಗಿ ಭಾನುವಾರ ಇಲ್ಲಿನ ಆರ್ಯ ಈಡಿಗ ಸಮಾಜದ ಕೋದಂಡ ರಾಮ ದೇವಸ್ಥಾನದಲ್ಲಿ ಗಣಪತಿ ಪೂಜೆ, ಸೀತಾ ಕಲ್ಯಾಣ ಕಳಸ ಸ್ಥಾಪನೆ, ನವಗ್ರಹ ಪೂಜೆ, ಶ್ರೀರಾಮ ತಾರಕ ಹೋಮ, ಪಂಚಾಮೃತ ಅಭಿಷೇಕ, ಅರ್ಚನೆ ಮಹಾಮಂಗಳಾರತಿ ಮಾಡಿ ಪ್ರಸಾದ ವಿನಿಯೋಗಿಸಲಾಯಿತು. ಆರ್ಯ ಈಡಿಗ ಸಮಾಜದಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಆರ್ಯ ಈಡಿಗ ಯುವಕ ಸಂಘದ ವತಿಯಿಂದ ನಿವೃತ್ತ ಪೊಲೀಸ್ ಉಪನಿರೀಕ್ಷಕ ನಾಗರಾಜೇಗೌಡ, ಟೆಲಿಕಾಂ ಇಲಾಖೆ ನರಸಿಂಹೇಗೌಡ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ದರ್ಶನ್, ಅಕ್ಷತಾ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಮುಖಂಡ ನಾಗೇಂದ್ರ, ಆರ್ಯ ಈಡಿಗ ಸಮಾಜ ಅಧ್ಯಕ್ಷ ತಿಮ್ಮೇಗೌಡ, ರಾಚೇಗೌಡರು. ಎಸ್.ಕೆ. ರಂಗಣ್ಣ, ಟಿ.ಕರಿಯಪ್ಪ, ಪೋಸ್ಟ್ ದಾಸೇಗೌಡ, ಎಸ್.ಎಂ. ಶ್ರೀನಿವಾಸ್, ರವಿಗೌಡ, ಪಾಪೇಗೌಡ, ಪಪಂ ಸದಸ್ಯ ರಂಗನಾಥ್, ನಾಗರಾಜು, ನಾರಾಯಣ, ಶ್ರೀನಿವಾಸ್, ಆರ್ಯ ಈಡಿಗ ಯುವಕ ಸಂಘದ ಅಧ್ಯಕ್ಷ ರಂಗಪ್ಪ, ಲೋಕನಾಥ್, ಕೃಷ್ಣಪ್ಪ ಇದ್ದರು.

ಸಗಣಿ ಎರಚಿ ಓಕುಳಿ ಆಚರಿಸಿದ ಮಕ್ಕಳು
ಕ.ಪ್ರ.ವಾರ್ತೆ  ಹುಣಸೂರು ಏ. 20
ತಾಲೂಕಿನ ಗಾವಡಗೆರೆ ಹೋಬಳಿಯ ಮೋದೂರಿನಲ್ಲಿ ಬಸವೇಶ್ವರಸ್ವಾಮಿಯ ಉತ್ಸವಕ್ಕೆ ಅತ್ಯಂತ ವಿಶಿಷ್ಠ ಸಂಪ್ರದಾಯಗಳಲ್ಲೊಂದಾದ ತೊಪ್ಪೆ ಓಕುಳಿಯಾಟವನ್ನು ಆಡುವ ಮೂಲಕ ಇಂದಿನಿಂದ ಆರಂಭವಾಗಿರುವ ನಾಲ್ಕು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮೋದೂರು ಗ್ರಾಮದಲ್ಲಿ ಭಾನುವಾರ ಸಂಜೆ ದೇವಸ್ಥಾನದ ಅರ್ಚಕರು ದೇವರಿಗೆ ಪೂಜೆ ಸಲ್ಲಿಸಿ ತೊಪ್ಪೆ ಓಕುಳಿಯಾಡಲು ಬಂದವರ ಹಣೆಗೆ ಕುಂಕುಮ ಹಾಗೂ ಕೊರಳಿಗೆ ಕಣಗಲೆ ಹೂವಿನ ಹಾರ ಹಾಕಿ ಆಶೀರ್ವದಿಸಿ ಓಕುಳಿಯಾಟಕ್ಕೆ ಅನುಮತಿ ನೀಡಿದರು. ದೇವಸ್ಥಾನದ ಮುಂಭಾಗದ ಆವರಣದಲ್ಲಿ ಹುಡುಗರು ಒಬ್ಬರಿಗೊಬ್ಬರು ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಹಿಡಿದಿದ್ದ ತೊಪ್ಪೆಯನ್ನು ಪರಸ್ಪರ ಎರಚಿದರು. ಸುತ್ತಮುತ್ತ ನೋಡುತ್ತಿದ್ದ ಹಿರಿಯರೂ ಗುಂಪಿಗೆ ಸೇರಿಕೊಂಡರು. ಹುಡುಗರ ಉತ್ಸಾಹ ಹೆಚ್ಚಿಸಲು ತಮಟೆ ಬಾರಿಸುವವರು ಇನ್ನಷ್ಟು ಜೋರಾಗಿ ತಮಟೆ ಬಾರಿಸಿದರು.
ನಂತರ ಪಡ್ಡೆ ಹುಡುಗರ ಗುಂಪು ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಮನೆ ಮುಂದೆ ಇದಕ್ಕಾಗಿಯೇ ಶೇಖರಿಸಿಟ್ಟಿದ್ದ ತೊಪ್ಪೆ ರಾಶಿಯನ್ನು ತೆಗೆದುಕೊಂಡು ಎರಚಾಡಿದರು. ಎಲ್ಲ ಬೀದಿಗಳನ್ನೂ ಸುತ್ತಿದ ನಂತರ ಗ್ರಾಮದ ಗೌರಿ ಕೆರೆಯಲ್ಲಿ ಮಿಂದು ದೇವಾಲಯಕ್ಕೆ ಬಂದು ದೇವರಿಗೆ ನಮಸ್ಕರಿಸಿ ಮನೆಗೆ ತೆರಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement