ಸಿಬ್ಬಂದಿಯಿಂದ ಅಗ್ನಿಶಾಮಕ ಪ್ರಾತ್ಯಕ್ಷಿಕೆ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಏ. 20
ಅಗ್ನಿ ಅನಾಹುತಗಳನ್ನು ತಡೆಗಟ್ಟಲು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆಗಳ ಬಗ್ಗೆ ಅಗ್ನಿಶಾಮಕ ಸಿಬ್ಬಂದಿ ಪ್ರಾತ್ಯಕ್ಷಿಕೆ ನೀಡಿದರು.
ಪಟ್ಟಣದ ಮಹದೇಶ್ವರ ಚಿತ್ರಮಂದಿರದ ಆವರಣದಲ್ಲಿ ಅಗ್ನಿಶಾಮಕ ಸೇವಾ ದಿನಾಚರಣೆ ಸಪ್ತಾಹ ಅಂಗವಾಗಿ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆಯಲ್ಲಿ ಅಗ್ನಿಶಾಮಕ ಇಲಾಖೆಯ ಪ್ರಮುಖ ಅಗ್ನಿಶಾಮಕ ಮಂಜುನಾಥ್ ಮಾತನಾಡಿ, ಅಗ್ನಿ ದುರಂತಗಳು ಎಂದು ಬೇಕಾದರೂ ಸಂಭವಿಸಬಹುದು. ಅದರಲ್ಲಿಯೂ ಬೇಸಿಗೆಯಲ್ಲಿ ಹೆಚ್ಚು ಅಗ್ನಿ ಅನಾಹುತಗಳು ನಡೆಯುವುದು ಸಹಜ. ಸಾರ್ವಜನಿಕರು ಸಾಧ್ಯವಾದಷ್ಟು ಅಗ್ನಿ ದುರಂತಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.
ಬೆಂಕಿ ಆಕಸ್ಮಿಕ ಹಾಗೂ ಬೆಂಕಿ ನಂದಿಸುವ ಬಗ್ಗೆ ಮತ್ತು ಬೆಂಕಿ ಅನಾಹುತಗಳು ನಡೆದ ತಕ್ಷಣ ತೆಗೆದುಕೊಳ್ಳಬೇಕಾದ ಮೂದಲ ಕ್ರಮಗಳ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಿಲಾಯಿತು.
ಪ್ರಮುಖ ಅಗ್ನಿಶಾಮಕ ಬಿ.ಎಂ.ರಾಮರಾಜ್, ಅಗ್ನಿಶಾಮಕರಾದ ಚೇತನ್ಕುಮಾರ್, ಪ್ರಕಾಶ್, ಸುನೀಲ್, ಚಾಲಕ ರವಿ, ಗೃಹ ರಕ್ಷಕ ದಳದ ಶಿವಕುಮಾರ್, ಕೃಷ್ಣಮೂರ್ತಿ, ರಘು ಇದ್ದರು.