ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದಸರಾ ಗಜಪಯಣಕ್ಕೆ ಚಾಲನೆ 14ಕ್ಕೆ

Srinivasa Murthy VN
Updated On : 3 Aug 2014, 1:09 am

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರೆ ಅಂಗವಾಗಿ ಗಜಪಯಣಕ್ಕೆ ಆ.14 ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಚಾಲನೆ ನೀಡಲಾಗುವುದು ಎಂದು ದಸರಾ ಕಾರ್ಯಕಾರಿ ಸಮಿತಿ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಹೇಳಿದರು. ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಆ.16ರ ಬೆಳಗ್ಗೆ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುವುದು. ಸತತ ಎರಡನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ ಅರ್ಜುನ, ಬಲರಾಮ, ಅಭಿಮನ್ಯು, ಸರಳ, ಮೇರಿ, ಗಜೇಂದ್ರ ಮೊದಲ ತಂಡದಲ್ಲಿರುತ್ತಾರೆ. ಎರಡನೇ ತಂಡದಲ್ಲಿ ವಿಕ್ರಮ, ಹರ್ಷ, ವರಲಕ್ಷ್ಮೀ, ಗೋಪಾಲಸ್ವಾಮಿ, ಶ್ರೀರಾಮ ಆನೆಗಳ ಜತೆಗೆ ಈ ಬಾರಿ ಮತ್ತೆರಡು ಹೊಸ ಆನೆಗಳಾದ ಗೋಪಿ, ಪ್ರಶಾಂತ ಆಗಮಿಸಲಿವೆ ಎಂದು ತಿಳಿಸಿದರು.

ಚಲಿಸುವ ರೈಲಲ್ಲಿ ಅಡುಗೆ ಮನೆ ಪ್ರಸ್ತಾಪ ಇಲ್ಲ: ಡೀವಿ
ಮಂಗಳೂರು: ಚಲಿಸುತ್ತಿರುವ ರೈಲುಗಳು ತನ್ನದೇ ಅಡುಗೆ ಮನೆ ಹೊಂದುವ ಯಾವುದೇ ಪ್ರಸ್ತಾಪ ಭಾರತೀಯ ರೈಲ್ವೆಗೆ ಇಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ವಿನೋದ್ ಕುಮಾರ್‌ಗೆ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಅವರು, ರೈಲ್ವೆ ಅನುದಾನದಲ್ಲೂ ಇದಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರೈಲು ನಿಲ್ದಾಣಗಳಲ್ಲಿ ಭಾರತೀಯ ರೈಲ್ವೆಯ ಕ್ಯಾಂಟಿನ್‌ಗಳ ಮೂಲಕ ಆಹಾರ ಪೂರೈಕೆ ವ್ಯವಸ್ಥೆ ಇದೆ. ಕ್ಯಾಟರಿಂಗ್ ಸೇವೆಯನ್ನು ನಿಯಮಿತವಾಗಿ, ಅನಿರೀಕ್ಷಿತವಾಗಿ ಮತ್ತು ನಿಗದಿತ ದಿನಗಳಂದು ತಪಾಸಣೆ ನಡೆಸಲಾಗುತ್ತದೆ. ಆಹಾರ ಗುಣಮಣಟ್ಟದ ಬಗ್ಗೆ ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಟೋಲ್ ಫ್ರೀ ಸಂಖ್ಯೆ 1800-111-321ಕ್ಕೆ ಕರೆ ಮಾಡುವ ಮೂಲಕ ದೂರು ನೀಡಬಹುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement