ನಾಳೆ ಮಂಡ್ಯದಲ್ಲಿ ಸಮಾವೇಶ
ಮೈಸೂರು: ರಾಜ್ಯ ಮಟ್ಟದ ಕೈಗಾರಿಕಾ ಖರೀದಿದಾರರು ಮತ್ತು ಸರಬರಾಜುದಾರರ ಸಮಾವೇಶವು ಫೆ. 11 ರಂದು ಮಂಡ್ಯದ ಲಾವಣ್ಯ ಹೊಟೇಲ್‌ನಲ್ಲಿ ನಡೆಯಲಿದೆ. ಮೈಸೂರು ಕೈಗಾರಿಕೆಗಳ ಸಂಘವು ಅಂದು ಬೆಳಗ್ಗೆ 10. 30 ಕ್ಕೆ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಪಿ. ವಿಶ್ವನಾಥ್ ಉದ್ಘಾಟಿಸುವರು. ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಎಸ್.ಎನ್. ರಂಗನಾಥ್ ಅಧ್ಯಕ್ಷತೆ ವಹಿಸುವರು. ಆರಕ್ಷಕ ಆಧೀಕ್ಷಕ ಭೂಷಣ್ ಗುಲಾಬ್‌ರಾವ್ ಬೊರಸೆ ಹಾಗೂ ಮಂಡ್ಯ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆನಂದ್ ಭಾಗವಹಿಸುವರು ಎಂದು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್ ತಿಳಿಸಿದ್ದಾರೆ. ಆಸಕ್ತರು. ಮೊ. 98458-95433 ಅಥವಾ 99007-75351 ಸಂಪರ್ಕಿಸುವಂತೆ ತಿಳಿಸಲಾಗಿದೆ.