ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಬಡವರ ನೆರವಿಗಾಗಿ ಜೀವ ವಿಮೆ'

Srinivasa Murthy VN
Updated On : 9 Feb 2014, 9:52 am

ಮೈಸೂರು: ದೇಶದ ಒಟ್ಟು ಜನಸಂಖ್ಯೆಯಲ್ಲಿ 40 ಕೋಟಿಗೂ ಅಧಿಕ ಮಂದಿ ಬಡತನದ ಬೇಗೆಯಿಂದ ಬಳಲುತ್ತಿದ್ದು, ಇವರೆಲ್ಲರೂ ಗ್ರಾಮೀಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಇವರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕೆಂದರೆ ವಿಮಾ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂದು ಅಖಿಲ ಭಾರತ ವಿಮಾ ನೌಕರರ ಸಂಘದ ಕಾರ್ಯದರ್ಶಿ ಅಮಾನುಲ್ಲಾ ಖಾನ್ ಹೇಳಿದರು.
ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿರುವ ಯುಜಿಸಿ ಪ್ರಾಯೋಜಿತ ಭಾರತದಲ್ಲಿ ವಿಮಾ ಸೇವೆ- ಆಯಾಮಗಳು ಮತ್ತು ಸವಾಲುಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಬಡವರ ಸ್ಥಿತಿ ಸುಧಾರಿಸಲು ಜೀವವಿಮೆಗಳು ಅವಶ್ಯಕ. ಅವರ ಅನುಕೂಲಕ್ಕಾಗಿ ಸಣ್ಣ ವಿಮೆಗಳನ್ನು ರೂಪಿಸಲಾಗಿದ್ದು, ವಾರ್ಷಿಕ 10 ಸಾವಿರ ರು.ಗಿಂತಲೂ ಕಡಿಮೆ ಆದಾಯವುಳ್ಳ ಕುಟುಂಬಗಳು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬಹುದು. ದೇಶದಲ್ಲಿ ಸಾವಿರಾರು ಆಸ್ಪತ್ರೆಗಳಿದ್ದರೂ ಸಹ ಎಲ್ಲವೂ ಶ್ರೀಮಂತರಿಗೆ ಮೀಸಲಾಗಿವೆ. ಆ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಪಡೆದುಕೊಳ್ಳಲು ಆರೋಗ್ಯವಿಮೆ ಸುಲಭ ಮಾರ್ಗ. ಯಶಸ್ವಿನಿಯಂತಹ ಯೋಜನೆಗಳಿಂದ ಸೌಲಭ್ಯ ಪಡೆದುಕೊಳ್ಳುತ್ತಿರುವುದನ್ನು ನಾವು ಕಾಣಬಹುದು ಎಂದರು.
ಪಾಟ್ನ ವಿಮಾ ಸಂಸ್ಥೆಯ ಶ್ರೀಕಾಂತಮಿಶ್ರಾ, ಚೆನ್ನೈ ವಿಮಾ ಸಂಸ್ಥೆಯ ಜಿ. ಆನಂದ, ಎಲ್‌ಐಸಿ ಮೈಸೂರು ವಿಭಾಗೀಯ ಹಿರಿಯ ವ್ಯವಸ್ಥಾಪಕ ಪಿ. ಶ್ರೀಧರ್, ಮೈಸೂರು ವಿವಿ ನಿರ್ವಹಣಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಆಯೇಷಾ ಶರೀಫ್, ಪ್ರಾಧ್ಯಾಪಕ ಡಾ.ಎ. ಬಾಲಸುಬ್ರಮಣ್ಯನ್, ಡಾ. ರಾಜಶೇಖರ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement