ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಾಲ್ಯವಿವಾಹ ಮಾಡಿ ಮಕ್ಕಳ ಭವಿಷ್ಯ ಚಿವುಟಬೇಡಿ: ಧನಂಜಯ

Srinivasa Murthy VN
Updated On : 9 Feb 2014, 9:53 am

ನಂಜನಗೂಡು: ಪೋಷಕರು ಬಾಲ್ಯವಿವಾಹ ಮಾಡುವ ಮೂಲಕ ಮಕ್ಕಳ ಭವಿಷ್ಯವನ್ನೇ ಚಿವುಟಬೇಡಿ ಎಂದು ಮಕ್ಕಳ ಹಕ್ಕುಗಳ ಸಂಪನ್ಮೂಲವ್ಯಕ್ತಿ ಈ. ಧನಂಜಯ ಮನವಿ ಮಾಡಿದರು.
ತಾಲೂಕಿನ ಹೆಡಿಯಾಲ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಮಕ್ಕಳ ಹಕ್ಕುಗಳು ಮತ್ತು ಬಾಲ್ಯವಿವಾಹ ಕುರಿತ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಜಾಗೃತಿ ಕಾರ್ಯಕ್ರಮಗಳ ಮುಖಾಂತರ ಇಂತಹ ಪಿಡುಗುಗಳನ್ನು ತಡೆಯುವುದು ಸೂಕ್ತ. ಅಮಾಯಕ ಪೋಷಕರಿಗೆ ಕಾನೂನು ಅರಿವು, ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಹೆಚ್ಚು ತಿಳವಳಿಕೆ ಇಲ್ಲದೆ ಇಂತಹ ಪದ್ಧತಿಗಳು ನಡೆದುಕೊಂಡು ಬರುತ್ತಿದೆ ಎಂದು ವಿಷಾದಿಸಿದರು.
ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗುವ ಹೆಣ್ಣುಮಕ್ಕಳು ಗರ್ಭಿಣಿಯರಾದಾಗ ಮಗುವಿನ ಜನನದ ಸಂದರ್ಭದಲ್ಲಿ, ನಂತರ ರಕ್ತಹೀನತೆಯಿಂದ ಸಾವು ಸಂಭವಿಸಬಹುದು. ಕಡಿಮೆ ತೂಕ, ಅಪೌಷ್ಠಿಕತೆ, ಅಂಗವಿಕಲ ಮಗುವಿನ ಜನನ ಮತ್ತು ಮಗುವಿನ ಸಾವು ಚಿಕ್ಕ ವಯಸ್ಸಿನಲ್ಲಿ ವಿಧವೆಯರಾಗಿ ಬಿಡುವುದು... ಹೀಗೆ ಅನೇಕ ರೀತಿಯಲ್ಲಿ ಬಾಲ್ಯವಿವಾಹದಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ನಮ್ಮ ಪೋಷಕರು ಸರಿಯಾಗಿ ಅರ್ಥೈಸಿಕೊಳ್ಳದೆ ತಮ್ಮ ಮಕ್ಕಳು ಸಾವಿಗೀಡಾಗಿ ಅನಾಹುತಕ್ಕೊಳಗಾದ ನಂತರ ದು:ಖಕ್ಕಿಡಾಗುವುದನ್ನು ಕಾಣುತ್ತಿದ್ದೇವೆ ಎಂದರು.
ಮುಖ್ಯ ಶಿಕ್ಷಕ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಹಿರಿಯ ಶಿಕ್ಷಕಿ ಸುಮತಿ ಪ್ರತಿಕ್ರಿಯಿಸಿದರು. ಚಂದನ ಪ್ರಾರ್ಥಿಸಿದರು. ಸಹ ಶಿಕ್ಷಕ ರಾಜಣ್ಣ ನಿರೂಪಿಸಿದರು. ಶಿವಲಿಂಗಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement