ವೆಂಕಟೇಶ್ ಹೇಳಿಕೆಗೆ ಜೆಡಿಎಸ್ ತಿರುಗೇಟು
ಮೈಸೂರು: ಜೆಡಿಎಸ್ ಆಯೋಜಿಸಿರುವ ಹಿಂದುಳಿದ ವರ್ಗದ ಸಮಾವೇಶವನ್ನು ಕೆಲವರು ಅಹಿಂದ ಸಮಾವೇಶ ಎಂದು ತಪ್ಪಾಗಿ ಅರ್ಥೈಸಿದ್ದಾರೆ. ಆದರೆ, ಜೆಡಿಎಸ್ ಹಿಂದುಳಿದವರ ಸಮಾವೇಶ ನಡೆಸುತ್ತಿದೆ ಅಷ್ಟೆ ಎಂದು ಜೆಡಿಎಸ್ ರಾಜ್ಯ ಸಮಿತಿ ಸದಸ್ಯ, ವಕೀಲ ರವಿಚಂದ್ರೇಗೌಡ ತಿರುಗೇಟು ನೀಡಿದ್ದಾರೆ. ಸಮಾವೇಶದ ಬಗ್ಗೆ ಸಂಸದ ವಿಶ್ವನಾಥ್ ತಮ್ಮ ಹಿಂಬಾಲಕ ಎಚ್.ಎ. ವೆಂಕಟೇಶ್ ಮೂಲಕ ಇಲ್ಲಸಲ್ಲದ ಹೇಳಿಕೆ ಕೊಡಿಸುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಹಲವಾರು ನಾಯಕರನ್ನು ಬೆಳೆಸಿದ್ದು, ದೇವೇಗೌಡರ ಬಗ್ಗೆ ಕಾಂಗ್ರೆಸ್ ಮುಖಂಡರು ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ಲೋಕಸಭೆಗೆ ಅಣಿಯಾಗುತ್ತಿರುವ ವಿಶ್ವನಾಥ್ ಅರಣ್ಯದಲ್ಲಿ ಬಾಡೂಟ ಹಾಕಿಸಿ ಕಾನೂನು ಉಲ್ಲಂಘಿಸಿದ್ದಾರೆ. ಮತ್ತೊಂದೆಡೆ ಜಿಂಕೆ ಕೊಂದ ಧರ್ಮೇಶ್ ಅವರನ್ನು ಬಂಧಿಸಿರುವ ಅರಣ್ಯ ಇಲಾಖೆ ವಿಶ್ವನಾಥ್ ವಿಚಾರದಲ್ಲಿ ಮೌನವಹಿಸಿರುವುದು ಇಬ್ಬಂದಿ ನೀತಿ ಅನುಸರಿಸಿದಂತಾಗಿದೆ ಎಂದು ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಅವರಿಗೆ ದಿಟ್ಟತನವಿದ್ದರೆ ಡಿವೈಎಸ್ಪಿ ಧರ್ಮೇಶ್ ಹಾಗೂ ಸಂಸದರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲೆ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.