ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಲ್ಲ ವರ್ಗದ ಅಭಿವೃದ್ಧಿಗೆ ಸರ್ಕಾರ ಕ್ರಮ

Srinivasa Murthy VN
Updated On : 10 Feb 2014, 11:54 am

ಬನ್ನೂರು: ನಮ್ಮ ಸರ್ಕಾರವು ರೈತರಿಗಾಗಿ ನಾಲೆಗಳ ಅಧುನೀಕರಣ, ನಗರ ಜನತೆಗೆ ವಸತಿ, ಸಮರ್ಪಕ ಕುಡಿಯಲು ನೀರು, ನಿರ್ಗತಿಕರಿಗೆ, ಶೋಷಿತರಿಗೆ ಸಾಮಾಜಿಕ ಸೌಲಭ್ಯ, ಅಲ್ಪಸಂಖ್ಯಾತರಿಗೆ ಸೂಕ್ತ ಭದ್ರತೆ ಹಾಗೂ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಬನ್ನೂರು ಪುರಸಭೆ ಹಾಗೂ ಟಿ.ನರಸೀಪುರ ತಾಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ನಡೆದ ವಸತಿ ರಹಿತ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಸಾಮಾಜಿಕ ಭದ್ರತಾ ಯೋಜನೆಯಡಿ 500 ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರಗಳ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬನ್ನೂರು ಪುರಸಭೆಯ ಸಮಗ್ರ ಅಭಿವೃದ್ಧಿಗೆ 22 ಕೋಟಿ ವೆಚ್ಚದಲ್ಲಿ ದಿನದ 24 ಗಂಟೆಯೂ ಕುಡಿಯಲು ಶುದ್ಧ ನೀರು, ಪಟ್ಟಣದ ಬೀದಿಗಳಿಗೆ ಡಾಂಬರೀಕರಣ, ಸಿಆರ್‌ಎಫ್ ಯೋಜನೆಯಡಿ 36 ಕೋಟಿ ವೆಚ್ಚ,  ರಾಮಸ್ವಾಮಿ ನಾಲೆ ಆಧುನೀಕರಣಕ್ಕೆ 80 ಕೋಟಿ, ಬನ್ನೂರು ಹೆಗ್ಗೆರೆ, ಸಿಡಿಎಸ್ ನಾಲಾ ಆಧುನೀಕರಣಕ್ಕೆ 18.50 ಕೋಟಿ ಟೆಂಡರ್ ಮುಗಿದಿದ್ದು, ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಅಲ್ಲದೇ ಚಾಮನಹಳ್ಳಿ ಗ್ರಾಮ ಪುರಸಭೆಗೂ ಅಥವಾ ಗ್ರಾಪಂಗೂ ಸೇರದೇ ಅತಂತ್ರವಾಗಿದೆ. ಆದ್ದರಿಂದ ಚಾಮನಹಳ್ಳಿ ಗ್ರಾಮವನ್ನು ಪುರಸಭೆಗೆ ಸೇರಿಸುವಂತೆ ರಾಜ್ಯಪಾಲರಿಗೆ ಮನವಿ ಕಳುಹಿಸಲಾಗಿದ್ದು, ಶೀಘ್ರವೇ ಸೇರಿಸಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಎಸ್.ಕೃಷ್ಣಪ್ಪ,  ಬಸವರಾಜು, ಎಸ್.ಲೋಕೇಶ್, ತಹಸೀಲ್ದಾರ್ ಚೌಡಯ್ಯ, ಬ.ಎನ್. ಕೃಷ್ಣೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರವೀಂದ್ರಕುಮಾರ್, ಮಂಜುನಾಥ್, ಪುರಸಭೆಯ ಸದಸ್ಯರು, ಪಕ್ಷದ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement