ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಐಟಿ ಕ್ಷೇತ್ರಗಳಲ್ಲಿ ಉದ್ಯೋಗಅವಕಾಶ ಹೆಚ್ಚಲಿ: ನಾಗರಾಜನ್

Srinivasa Murthy VN
Updated On : 10 Feb 2014, 11:56 am

ಮೈಸೂರು: ದೇಶದ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಂದ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗಲಿ ಎಂದು ಭಾರತೀಯ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಎಸ್.ನಾಗರಾಜನ್ ಹೇಳಿದರು.
ಭಾರತೀಯ ಕೈಗಾರಿಕೆಗಳ ಒಕ್ಕೂಟವು (ಸಿಐಐ) ನಜರಬಾದಿನಲ್ಲಿ ಸೋಮವಾರ ಏರ್ಪಡಿಸಿದ್ದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಶೀಲರಿಗೆ ಏರ್ಪಡಿಸಿದ್ದ ಉದ್ಯಮಗಳಲ್ಲಿನ ಸವಾಲು ಹಾಗೂ ಪರಿಹಾರ ಕುರಿತಾದ ಸಂವಾದದಲ್ಲಿ ಅವರು ಮಾತನಾಡಿದರು.       
ಇಂದು ದೇಶದಲ್ಲಿನ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ಸುಮಾರು 73 ಮಿಲಿಯನ್ ಜನರು ಉದ್ಯೋಗ ಹೊಂದಿದ್ದಾರೆ. ಇದೇ ರೀತಿ ಮಾಹಿತಿ ಮತ್ತು ತಂತ್ರಜ್ಞಾನ ಕೇತ್ರದಲ್ಲಿಯೂ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಅವಕಾಶವಿದೆ ಎಂದರು.
21ನೇ ಶತಮಾನಕ್ಕೆ ಅಗತ್ಯವಾದ ಕೈಗಾರಿಕಾ ಜ್ಞಾನವನ್ನು ಉದ್ಯಮಿಗಳು ಹೊಂದುವ ಅಗತ್ಯವಿದೆ. ಕೆಲಸ ಮಾಡುವ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗವನ್ನು ಹೆಚ್ಚಾಗಿ ಸೃಷ್ಟಿಸುವ ಮೂಲಕ ರಾಷ್ಟ್ರದ ಪ್ರಗತಿಗೆ ಕೈಜೋಡಿಸುವುದು ಅವಶ್ಯಕ ಎಂದು ಅವರು ತಿಳಿಸಿದರು.
ಎಸ್‌ಐಡಿಬಿಐ ಪ್ರಧಾನ ವ್ಯವಸ್ಥಾಪಕ ಕೆ. ಸತ್ಯನಂದನ್,  ರಂಗರಾವ್ ಅಂಡ್ ಸನ್ಸ್‌ನ ವ್ಯವಸ್ಥಾಪಕ ಪಾಲುದಾರ ಅರ್ಜುನ್ ರಂಗ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement