ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗುಣಮಟ್ಟದ ಶಿಕ್ಷಣದಿಂದ ದೇಶ ಅಭಿವೃದ್ಧಿ

Srinivasa Murthy VN
Updated On : 10 Feb 2014, 11:54 am

ಹುಣಸೂರು: ವಿದ್ಯಾರ್ಥಿಗಳಿಗೆ ಭೌದ್ಧಿಕ ಮತ್ತು ಗುಣಮಟ್ಟದ ಶಿಕ್ಷಣ ನೀಡಿ, ಅವರಲ್ಲಿನ ಪ್ರತಿಭೆ ಹೊರತಂದಾಗ ಮಾತ್ರ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಬಿಇಒ ರಾಜಶೇಖರ್ ಹೇಳಿದರು.
ಪಟ್ಟಣದ ಕಾಫಿ ಕ್ಯೂರಿಂಗ್ ಅವರಣದಲ್ಲಿ ಸೋಮವಾರ ನಡೆದ ರೋಟರಿ ಮಕ್ಕಳ ಹಬ್ಬದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಪೋಷಕರು ಮನೆಯಲ್ಲಿ ತಮ್ಮ ಮಕ್ಕಳಿಗೆ ನೈತಿಕ ಮತ್ತು ಮೌಲ್ಯ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಉತ್ತಮ ಪ್ರಜೆಗಳಾಗಿ ಪರಿವರ್ತಿಸಬೇಕು ಎಂದರು.
ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಶಾಲಾ ಸಮಿತಿ ಅಧ್ಯಕ್ಷ ಆರ್.ಆನಂದ್, ರೋಟರಿ ಸಂಸ್ಥೆ ಅಧ್ಯಕ್ಷ ರಾಜಶೇಖರ್ ಮಾತನಾಡಿದರು. ರೋಟರಿ ಉಪ ರಾಜ್ಯಪಾಲ ಮಡಿಕೇರಿಯ ರವೀಂದ್ರರೈ, ರೋಟರಿ ಶಾಲಾ ಸಮಿತಿ ಕಾರ್ಯದರ್ಶಿ ಹನಗೋಡು ನಟರಾಜ್, ಮುಖ್ಯ ಶಿಕ್ಷಕ ರೇಣುಕಾಪ್ರಸಾದ್, ನಿಯೋಜಿತ ಕಾರ್ಯದರ್ಶಿ ಶಿವಕುಮಾರ್ ರಾವ್, ರೋಟರಿ ಸದಸ್ಯರಾದ ಕೃಷ್ಣಕುಮಾರ್, ಸ್ವಾಮಿಗೌಡ, ಡಾ. ಸರೋಜಿನಿ ವಿಕ್ರಂ, ಡಾ. ಪುಷ್ಪಾ ಅಮರನಾಥ್, ಡಾ. ನಂದನ್, ಸುಧಾಕರ್, ಸುನೀತಾ ಜಯರಾಮು, ಪ್ರಶಾಂತ್, ಪಾಂಡುಕುಮಾರ್ ಇದ್ದರು.

ಭುವನಹಳ್ಳಿ ಸಹಕಾರ ಸಂಘಕ್ಕೆ ಆಯ್ಕೆ
ಬೈಲಕುಪ್ಪೆ: ಸಮೀಪದ ಭುವನಹಳ್ಳಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ 2013-14ನೇ ಸಾಲಿನ ಭಾನುವಾರ ನಡೆದ ಸಂಘದ ಆವರಣದಲ್ಲಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಈ ಕೆಳಕಂಡವರು ಆಯ್ಕೆಯಾಗಿದ್ದಾರೆ. ಸಾಲಗಾರರ ಕ್ಷೇತ್ರ ಸಾಮಾನ್ಯ ವರ್ಗಕ್ಕೆ-  ಬಿ.ಎಂ. ಕುಮಾರ್, ಬಿ.ಟಿ. ಹಂಸರಾಜ್, ಚಂದ್ರೇಗೌಡ, ಯೋಗೇಶ್, ಬಿ.ಎಸ್. ಸ್ವಾಮೀಗೌಡ. ಮಹಿಳಾ ಮೀಸಲು ಕ್ಷೇತ್ರ- ಚಂದ್ರಮ್ಮ, ಶೋಭ, ಪ.ಜಾತಿ, ಪಂಗಡ- ಬೊಮ್ಮಯ್ಯ, ಹಿಂದುಳಿದ ವರ್ಗ ಮೀಸಲು- ಬಿ.ಕೆ.ಲೋಕೇಶ್ ಹಾಗೂ ಸಾಲಗಾರರಲ್ಲದ ಮತ ಕ್ಷೇತ್ರ- ಬಿ.ಎಸ್. ಹರೀಶ್. ಚುನಾವಣಾಧಿಕಾರಿಯಾಗಿ ಡಿ. ಶಂಕರ್ ಕಾರ್ಯಕ್ರಮ ನಿರ್ವಹಿಸಿದರು. ಇದೇ ವೇಳೆ ಗ್ರಾಮಸ್ಥರಾದ ಜೋಗನಹಳ್ಳಿ ಗುರುಮೂರ್ತಿ, ದೇವರಾಜ್, ಜಯಣ್ಣ, ಈಶ್ವರಯ್ಯ, ರಾಜೇಗೌಡ, ರಾಮೇಗೌಡ, ಕುಳ್ಳಯ್ಯ, ಸ್ವಾಮಿ, ತಿಮ್ಮಶೆಟ್ಟಿ, ಪಶುಪತಿ ಶಿವಣ್ಣ, ಸಹಕಾರ ಸಂಘದ ನೌಕರರಾದ ಬಿ.ಪಿ. ಸತೀಶ್, ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement